ಡ್ರಾಪ್ ನೆಪ 11 ಜನರ ಕೊಲೆ; ಪಂಜಾಬ್​ನಲ್ಲಿ ವಿಕೃತ ಸರಣಿ ಹಂತಕನ ಬಂಧನ

Serial killer
Published on

ನವದೆಹಲಿ: ತನ್ನ ವಾಹನದಲ್ಲಿ ಲಿಫ್ಟ್ ಪಡೆದವರನ್ನು ಕೊಲೆ ಮಾಡುತ್ತಿದ್ದ ಸರಣಿ ಹಂತಕನೊಬ್ಬನನ್ನು ಪಂಜಾಬ್ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಆರೋಪಿಯನ್ನು 33 ವರ್ಷದ ರಾಮ್ ಸ್ವರೂಪ್ ಎಂದು ಗುರುತಿಸಲಾಗಿದ್ದು ಆತ 18 ತಿಂಗಳಲ್ಲಿ 11 ಪುರುಷರನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಪಂಜಾಬ್​ನ ಹೋಷಿಯಾರ್​ಪುರದ ಗಢ್​ಶಂಕರ್​ನ ಚೌರಾ ಗ್ರಾಮದ ನಿವಾಸಿಯಾದ ಈ ದುರುಳ, ಲಿಫ್ಟ್ ನೀಡುವುದಾಗಿ ಜನರನ್ನು ಕರೆದುಕೊಂಡು ಹೋಗಿ ಅವರನ್ನು ಲೂಟಿ ಮಾಡಿ ಕೊಲೆಗೈಯುತ್ತಿದ್ದ. ಅಲ್ಲದೆ ಈ ಎಲ್ಲ ಪುರುಷರೊಂದಿಗೆ ಆತ ವಿಕೃತ ಲೈಂಗಿಕ ಕ್ರಿಯೆ ನಡೆಸುತ್ತಿದ್ದ.

ಜಗಳವಾಡಿ ಕೊಲೆ: ಲಿಫ್ಟ್ ಪಡೆದ ಜನರಿಂದ ಹಣ ಸುಲಿಗೆ ಮಾಡಲು ಸ್ವರೂಪ್ ಪ್ರಯತ್ನಿಸುತ್ತಿದ್ದ. ಹಣ ಹಾಗೂ ತಮ್ಮಲ್ಲಿರುವ ಇತರ ವಸ್ತುಗಳನ್ನು ನೀಡಲು ನಿರಾಕರಿಸಿದವರೊಂದಿಗೆ ಜಗಳವಾಡಿ ಕೊಲ್ಲುತ್ತಿದ್ದ. ಬಹಳಷ್ಟು ಜನರನ್ನು ಬಟ್ಟೆಯಿಂದ ಉಸಿರುಗಟ್ಟಿಸಿ ಸಾಯಿಸಿದ್ದು ಇನ್ನು ಕೆಲವರು ತಲೆ ಮೇಲಿನ ಹೊಡೆತದಿಂದ ಸತ್ತಿರುವುದು ಬೆಳಕಿಗೆ ಬಂದಿದೆ.

ಮಾಜಿ ಸೈನಿಕನೂ ಸಂತ್ರಸ್ತ: ಖಾಸಗಿ ಕಾರ್ಖಾನೆಯೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿರುವ ಮಾಜಿ ಸೈನಿಕನೊಬ್ಬನನ್ನೂ ಈತ ಕೊಂದಿದ್ದು ಆತನ ಬೆನ್ನಿನ ಮೇಲೆ ‘ದೋಖೆಬಾಜ್’ (ದ್ರೋಹಿ) ಎಂದು ಬರೆದಿದ್ದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net