ಜೋಡಿ ಕೊಲೆ, 11 ಜನರ ವಿರುದ್ಧ ಎ್ಐಆರ್ ದಾಖಲು: ಮೃತನ ಪುತ್ರಿಯಿಂದ ದೂರು ದಾಖಲು

FIR-2
Published on

ಬೆಂಗಳೂರು: ಕುಂಬಾರಪೇಟೆ ಮುಖ್ಯರಸ್ತೆಯಲ್ಲಿ ನಡೆದಿದ್ದ ಸುರೇಶ್(೬೨) ಮತ್ತು ಮಹೇಂದ್ರ(೫೨) ಅವರ ಜೋಡಿ ಕೊಲೆಗೆ ಸಂಬಂಧಿಸಿದಂತೆ ೧೧ ಆರೋಪಿಗಳ ವಿರುದ್ಧ ಹಲಸೂರುಗೇಟ್ ಪೊಲೀಸ್ ಠಾಣೆಯಲ್ಲಿ ಎ್ಐಆರ್ ದಾಖಲಾಗಿದೆ.


ಮೃತ ಸುರೇಶ್ ಅವರ ಪುತ್ರಿ ವಿನುತಾ ಅವರು ನೀಡಿದ ದೂರಿನನ್ವಯ ಪ್ರಮುಖ ಆರೋಪಿ ಬದ್ರಿ ಪ್ರಸಾದ್(೫೬), ಕೆ.ಮುನಿಸ್ವಾಮಿ,ರಾಜಪ್ಪ,ಮಹೇಶ್, ವೆಂಕಟೇಶ್, ಚಂದ್ರಶೇಖರ್, ರವಿಶಂಕರ್, ಶಿವಕುಮಾರ್, ರಾಮಪ್ಪ, ಶಶಿಕಲಾ ಮತ್ತು ಚನ್ನಕೃಷ್ಣಪ್ಪ ಎಂಬುವವರ ವಿರುದ್ಧ ಹಲಸೂರು ಠಾಣೆ ಪೊಲೀಸರು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.


ಕುಂಬಾರಪೇಟೆ ಅನ್ನದಾತ ಸಮಿತಿ ಟ್ರಸ್ಟ್ ಮತ್ತು ಕುಂಬಾರಪೇಟೆ ಆಂಜನೇಯ ಸ್ವಾಮಿ ದೇವಸ್ಥಾನದ ಕಟ್ಟಡ ಸಮಿತಿ ಟ್ರಸ್ಟ್ ಮತ್ತು ಕುಂಬಾರಪೇಟೆಯ ಅನ್ನದಾನ ಸಮಿತಿ ಕಲ್ಯಾಣ ಮಂದಿರ ಟ್ರಸ್ಟ್‌ಗಳ ಆಸ್ತಿಯ ವಿಚಾರವಾಗಿ ಆರೋಪಿ ಬದ್ರಿಪ್ರಸಾದ್ ಹಾಗೂ ಆತನ ಸಂಗಡಿಗರು, ನಮ್ಮ ತಂದೆ ಸುರೇಶ್ ನಡುವೆ ಸಿವಿಲ್ ವ್ಯಾಜ್ಯವಿತ್ತು. ಈ ಬಗ್ಗೆ ನ್ಯಾಯಾಲಯಗಳಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳು ನ್ಯಾಯಾಲಯದಲ್ಲಿ ದಾಖಲಾಗಿತ್ತು. ಇದಾದ ನಂತರವೂ ಹೈಕೋರ್ಟ್ ಸುರೇಶ್ ಪರವಾಗಿ ತೀರ್ಪು ನೀಡಿತ್ತು. ಮತ್ತೆ ೨೦೨೩ರಲ್ಲಿ ಆಸ್ತಿ ವಿಚಾರವಾಗಿ ಆರೋಪಿ ಬದ್ರಿಪ್ರಸಾದ್ ಹಾಗೂ ಈ ಹನ್ನೊಂದು ಜನ ಸಂಗಡಿಗರು ಸೇರಿಕೊಂಡು ನನ್ನ ಮತ್ತು ನನ್ನ ತಾಯಿಯ ಮೇಲೆ ಹಲ್ಲೆ ಮಾಡಿದ್ದರು. ಈ ವಿಚಾರವಾಗಿ ಹಲಸೂರುಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಇದೂ ಕೂಡ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ ಎಂದು ಸುರೇಶ್ ಪುತ್ರಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.


ನಮ್ಮ ಕುಟುಂಬಕ್ಕೆ ರಕ್ಷಣೆ ನೀಡಿ:
ಇನ್ನು ಆಸ್ತಿ ವಿಚಾರವಾಗಿ ತಂದೆ ಸುರೇಶ್ ವಿರುದ್ಧ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಸುಳ್ಳು ಆರೋಪದ ದೂರು ನೀಡಿದ್ದು, ಅದರಲ್ಲೂ ನಮ್ಮ ಪರವಾಗಿಯೇ ತೀರ್ಪು ಬಂದಿತ್ತು. ಇದೇ ಜಿದ್ದಿನಿಂದ ಇತರೆ ೧೦ ಆರೋಪಿಗಳ ಕುಮ್ಮಕ್ಕಿನಿಂದ ಆರೋಪಿ ಬದ್ರಿಪ್ರಸಾದ್ ಕೃತ್ಯವೆಸಗಿದ್ದಾರೆ. ಆದ್ದರಿಂದ ಆರೋಪಿಗಳ ವಿರುದ್ಧ ಕ್ರಮ ಕೈಗೊಂಡು ಹಾಗೂ ತಮ್ಮ ಕುಟುಂಬಕ್ಕೆ ರಕ್ಷಣೆ ಒದಗಿಸುವಂತೆ ಸುರೇಶ್ ಪುತ್ರಿ ವಿನುತಾ ಪೊಲೀಸರಿಗೆ ಮನವಿ ಮಾಡಿದ್ದಾರೆ.


ಮೈಮನಸ್ಸಿಂದ ಹತ್ಯೆ:
ನಮ್ಮ ತಂದೆ ಸುರೇಶ್, ಕುಂಬಾರಪೇಟೆ ಅನ್ನದಾತ ಸಮಿತಿ ಟ್ರಸ್ಟ್ ಪದಾಧಿಕಾರಿಯಾಗಿದ್ದರು. ಅವರ ತಂದೆ ಈ ಹಿಂದೆ ಟ್ರಸ್ಟ್ ಅಧ್ಯಕ್ಷರಾಗಿದ್ದರು. ಇದರೊಂದಿಗೆ ವಾಣಿಜ್ಯ ಸಂಕೀರ್ಣದಲ್ಲಿರುವ ಮಳಿಗೆಯೊಂದನ್ನು ಸುರೇಶ್ ತಮ್ಮ ಹೆಸರಿಗೆ ಪಡೆದುಕೊಂಡಿದ್ದರು. ಟ್ರಸ್ಟ್ ಸಂಸ್ಥಾಪಕರ ಕುಟುಂಬದ ನಕಲಿ ಸದಸ್ಯನಾಗಿದ್ದ ಆರೋಪಿ ಬದ್ರಿಪ್ರಸಾದ್, ಟ್ರಸ್ಟ್ ಆಸ್ತಿ ಹಾಗೂ ಕೌಟುಂಬಿಕ ಕಾರಣಕ್ಕೆ ಸುರೇಶ್ ಮೇಲೆ ಮೈಮನಸ್ಸು ಹೊಂದಿದ್ದನು. ತನ್ನ ಹಿರಿಯರು ಪ್ರಾರಂಭಿಸಿರುವ ಟ್ರಸ್ಟ್, ಲಾಭವನ್ನು ಸುರೇಶ್ ಮತ್ತು ಆತನ ಮನೆಯವರು ಪಡೆಯುತ್ತಿದ್ದರಿಂದ ಕೋಪಗೊಂಡು ಇತರೆ ಆರೋಪಿಗಳ ಕುಮ್ಮಕ್ಕಿನಿಂದ ಭದ್ರಿ, ಮಳಿಗೆಗೆ ನುಗ್ಗಿ ಸುರೇಶ್‌ನನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ. ಸುರೇಶ್ ಅವರನ್ನು ಕಾಪಾಡಲು ಬಂದಿದ್ದ ಸ್ನೇಹಿತನನ್ನು ಮಹೇಂದ್ರ ಅವರನ್ನೂ ಆರೋಪಿ ಹತ್ಯೆ ಮಾಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net