ಪ್ರೇಕ್ಷಕರನ್ನು ಸೀಟಂಚಲ್ಲಿ ಕೂರಿಸಲು ಸಿನಿಮಾಗಳಲ್ಲಿ ಸಾಲು ಟ್ವಿಸ್ಟ್ಗಳನ್ನು ನೀಡುವುದು ಸಾಮಾನ್ಯ. ಆದರೆ, ಇಲ್ಲೊಬ್ಬ ನಟನ ಜೀವನದಲ್ಲಿ ಎಂತಹ ಸಿನಿಮಾನೂ ಮೀರಿಸುವಷ್ಟು ಟ್ವಿಸ್ಟ್ಗಳಿವೆ. ಕೊಲೆ ಆರೋಪದಲ್ಲಿ ಜೈಲು ಸೇರಿ, ಪೆರೋಲ್ ಮೇಲೆ ಬಿಡುಗಡೆಯಾಗಿ 12 ವರ್ಷ ತಲೆಮರೆಸಿಕೊಂಡು ಬಾಲಿವುಡ್ನಲ್ಲಿ ಮಿಂಚುತ್ತಿದ್ದ ಆರೋಪಿಯನ್ನು ಇತ್ತೀಚೆಗಷ್ಟೆ ಗುಜರಾತ್ ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ. ಹೌದು, 2005ರಲ್ಲಿ ಅಹಮದಾಬಾದ್ನ ನರೋಡಾದಲ್ಲಿ ನಡೆದ ಗುಂಪು ಗಲಾಟೆಯಲ್ಲಿ ಒಬ್ಬ ವ್ಯಕ್ತಿಯ ಹತ್ಯೆಯಾಗಿತ್ತು. ಆರೋಪಿ ಹೇಮಂತ್ ವೈಷ್ಣವ್ ಬಂಧನವಾಗಿ, 2008ರಲ್ಲಿ ಆತನಿಗೆ ಜೀವಾವಧಿ ಶಿೆ ವಿಧಿಸಲಾಗಿತ್ತು. ಆದರೆ, 2014ರ ಜುಲೈನಲ್ಲಿ 30 ದಿನಗಳ ಪೆರೋಲ್ ಮೇಲೆ ಬಿಡುಗಡೆಯಾಗಿದ್ದ ಹೇಮಂತ್, ಮತ್ತೆ ಜೈಲಿಗೆ ಹೋಗದೇ ತಲೆಮರೆಸಿಕೊಂಡಿದ್ದ. ಟ್ವಿಂಕಲ್ ದಾವೆ, ಸ್ಪಂದನ್ ಮೋದಿ ಅಂತೆಲ್ಲ ಹೆಸರು ಬದಲಿಸಿಕೊಂಡು ಮುಂಬೈಗೆ ಬಂದ ಹೇಮಂತ್, ಇಲ್ಲಿ ಸಿನಿಮಾ, ಸೀರಿಯಲ್, ರಂಗಭೂಮಿ ಅಂತ ಹೊಸ ಕರಿಯರ್ ಪ್ರಾರಂಭಿಸಿದ್ದ. ಕ್ರಮೇಣ ಪ್ರತಿಭೆಯ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಳ್ಳತೊಡಗಿದ ಆತ ಆಮಿರ್ ಖಾನ್, ಅಮಿತಾಭ್ ಬಚ್ಚನ್ರಂತಹ ದಿಗ್ಗಜರ ಜತೆ "ಥಗ್ಸ್ ಆಫ್ ಹಿಂದೂಸ್ತಾನ್', ರಣವೀರ್ ಸಿಂಗ್ ಜತೆ "ಜಯೇಶ್ಭಾಯ್ ಜೋರ್ದಾರ್' ಚಿತ್ರಗಳಲ್ಲಿ ಮಿಂಚಿದ್ದ. ಜತೆಗೆ ಆಗಾಗ ಗುಜರಾತಿ ಚಿತ್ರಗಳಲ್ಲೂ ನಟಿಸುತ್ತಿದ್ದ ಹೇಮಂತ್, ಮುಂಬೈ & ಗುಜರಾತ್ ನಡುವೆ ಓಡಾಡಿಕೊಂಡಿದ್ದ. 17 ನಾಟಕಗಳು, 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಹೇಮಂತ್, ಕಳೆದ ವರ್ಷ ಗುಜರಾತ್ಗೆ ಶ್ಟ್ಿ ಆಗಿದ್ದ. &ಏಜೆನ್ಸೀಸ್