ಗಂಡ ಹಾಗೂ ಮೂರು ಹೆಂಡತಿಯರ ಕೊಲೆ: ಸುಪಾರಿ ಹಂತಕಿಯ ರಹಸ್ಯ ಬಯಲು!

murder1
Published on

ಬಾಗಪತ್‌ (ಉತ್ತರ ಪ್ರದೇಶ): ಇದೊಂದು ವಿಚಿತ್ರ ಹಾಗೂ ಪೊಲೀಸರಿಗೆ ತಲೆನೋವಾಗಿದ್ದ ಕೊಲೆ ಪ್ರಕರಣ. ಇಲ್ಲಿ ಕೊಲೆಯಾದದ್ದು ನಾಲ್ಕು ಮಂದಿ!

ಗಂಡ ಹಾಗೂ ಆತನ ಮೂವರು ಹೆಂಡತಿಯರ ಹೆಣ ಉರುಳಿತ್ತು. ಕೊಲೆ ಮಾಡಿದ್ದು ಮಾತ್ರ ಯಾರು ಎನ್ನುವುದು ನಿಗೂಢವಾಗಿತ್ತು. ಕೊನೆಗೂ ಈ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಸುಪಾರಿ ಹಂತಕಿಯನ್ನು ಬಂಧಿಸಿದ್ದಾರೆ.

ಅಷ್ಟಕ್ಕೂ ಈ ಪ್ರಕರಣ ಕುತೂಹಲಕ್ಕೆ ಕಾರಣವಾಗಿರುವುದು ಏಕೆಂದರೆ, ಇಲ್ಲಿ ಸುಪಾರಿ ಕೊಟ್ಟವಳು ಕೊಲೆಯಾದ ವ್ಯಕ್ತಿಯ ಮೊದಲ ಪತ್ನಿ! ಅಂದರೆ ಈ ವ್ಯಕ್ತಿ ಆಕೆಯನ್ನು ಬಿಟ್ಟು ಇನ್ನೂ ಮೂರು ಮದುವೆಯಾಗಿದ್ದ. ಎಲ್ಲರನ್ನೂ ಮೊದಲ ಪತ್ನಿ ಕೊಲೆ ಮಾಡಿರುವುದು ಪೊಲೀಸ್‌ ತನಿಖೆಯಿಂದ ಮೇಲ್ನೋಟಕ್ಕೆ ಸಾಬೀತಾಗಿದೆ.

ದೆಹಲಿಯಲ್ಲಿ ಪ್ಲೇಸ್‌ಮೆಂಟ್ ಏಜೆನ್ಸಿ ಹೊಂದಿದ್ದ ವಿಕಾಸ್ ಸಿಂಗ್ ಕೊಲೆಯಾದವರು. ಸದ್ಯ ಪೊಲೀಸರು ಕಲೆ ಹಾಕಿರುವ ಮಾಹಿತಿ ಪ್ರಕಾರ. ರಜನಿ 2009 ರಲ್ಲಿ ವಿಕಾಸ್ ಅವರನ್ನು ವಿವಾಹವಾದರು, ಮತ್ತು ದಂಪತಿಗೆ ಇಬ್ಬರು ಮಕ್ಕಳಿದ್ದರು. ಆದರೆ, 2017 ಮತ್ತು 2020 ರ ನಡುವೆ ವಿಕಾಸ್ ಇತರ ಮೂವರು ಮಹಿಳೆಯರನ್ನು ಮದುವೆಯಾದರು.

ಇದರಿಂದ ರಜನಿ ಚಿಂತಿತರಾಗಿದ್ದರು. ಗಂಡ ಇವರಿಗಿನ್ನೂ ವಿಚ್ಛೇದನ ಕೊಟ್ಟಿರಲಿಲ್ಲ. ಒಂದು ವೇಳೆ ಇನ್ನುಳಿದ ಮೂವರ ಜತೆ ಸೇರಿ ತನಗೆ ಗಂಡ ವಿಚ್ಛೇದನ ನೀಡಿ, ತನ್ನ ಮಕ್ಕಳನ್ನು ನಡುನೀರಿನಲ್ಲಿ ಕೈಬಿಟ್ಟರೆ ಎಂಬ ಭಯ ಕಾಡುತ್ತಿತ್ತು. ಜತೆಗೆ, ಆತನಿಗಿರುವ ಅಪಾರ ಆಸ್ತಿಯನ್ನು ಇನ್ನು ಉಳಿದ ಮೂವರು ಹೆಂಡತಿಯರಿಗೆ ಹಂಚಿಬಿಟ್ಟರೆ ತಮ್ಮ ಗತಿಯೇನು ಎಂಬುದು ಆತಂಕಕ್ಕೆ ಕಾರಣವಾಗಿತ್ತು.

ಈ ಹಿನ್ನೆಲೆಯಲ್ಲಿ ಎಲ್ಲರನ್ನೂ ಮುಗಿಸುವ ಬಗ್ಗೆ ಆಕೆ ಪ್ಲ್ಯಾನ್‌ ಮಾಡಿದಳು. ಅದರಂತೆ ಕಾಂಟ್ರಾಕ್ಟ್ ಕಿಲ್ಲರ್ ಸುಧೀರ್ ಸಿಂಗ್‌ ಎಂತಾತನಿಗೆ ಸುಪಾರಿ ಕೊಟ್ಟಿದ್ದಾಳೆ. ಆರು ಲಕ್ಷ ರೂಪಾಯಿ ನೀಡಿರುವ ಆಕೆ ಕೊಲೆ ಮಾಡುವಂತೆ ಹೇಳಿದ್ದಾಳೆ. ಅದರಂತೆ ಆತ ಗುಂಡಿಕ್ಕಿ ಕೊಲೆ ಮಾಡಿದ್ದಾನೆ.

ಮಹಿಳೆಯನ್ನು ಬಂಧಿಸಲಾಗಿದ್ದು, ಇನ್ನಷ್ಟು ಮಾಹಿತಿ ಕಲೆ ಹಾಕಲಾಗುತ್ತಿದೆ. ಘಟನೆಯಲ್ಲಿ ಭಾಗಿಯಾಗಿದ್ದ ಇತರ ಇಬ್ಬರು ಆರೋಪಿಗಳಾದ ಸಚಿನ್ ಸಿಂಗ್ ಮತ್ತು ರವಿ ಸಿಂಗ್ ಪರಾರಿಯಾಗಿದ್ದಾರೆ. ಬಾಗ್‌ಪತ್ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಕುಮಾರ್ ಸಿಂಗ್, "ಕೊಲೆ ನಡೆಸಲು ಕಾಂಟ್ರಾಕ್ಟ್ ಕಿಲ್ಲರ್ ಸುಧೀರ್ ಸಿಂಗ್‌ಗೆ ಆರೋಪಿ ರಜನಿ ಆರು ಲಕ್ಷ ರೂ. ಬಲಿಪಶುವನ್ನು ಹೊಡೆದುರುಳಿಸಿದ ಮೂವರು ಶೂಟರ್‌ಗಳಲ್ಲಿ ಒಬ್ಬನನ್ನು ಬಂಧಿಸಲಾಗಿದೆ.

ಈ ಘಟನೆಗೆ ಇನ್ನೂ ಹೆಚ್ಚಿನ ಆಯಾಮಗಳಿದ್ದು, ಎಲ್ಲಾ ನಿಟ್ಟಿನಲ್ಲಿಯೂ ತನಿಖೆ ನಡೆಸಲಾಗುತ್ತಿದೆ ಎಂದು ಇನ್ಸ್‌ಪೆಕ್ಟರ್ ಜನರಲ್ (ಐಜಿ) ಪ್ರವೀಣ್ ಕುಮಾರ್ ಹೇಳಿದ್ದಾರೆ. (ಏಜೆನ್ಸೀಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net