ತಾಲೂಕು ಕಚೇರಿಯಲ್ಲೇ ವ್ಯಕ್ತಿಯ ಕೊಲೆಗೆ ಯತ್ನ; ಕುಡುಗೋಲಿನಿಂದ ಮನಬಂದಂತೆ ಹಲ್ಲೆ

Pub-crime-1
Published on

ಮಂಡ್ಯ: ತಾಲೂಕು ಕಚೇರಿಯಲ್ಲೇ ಹಗಲು ಹೊತ್ತಿನಲ್ಲೇ ವ್ಯಕ್ತಿಯೊಬ್ಬನ ಕೊಲೆಗೆ ಯತ್ನಿಸಿರುವ ಪ್ರಕರಣವೊಂದು ನಡೆದಿದೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಕಚೇರಿಯಲ್ಲಿ ಇಂದು ಈ ಪ್ರಕರಣ ನಡೆದಿದೆ.

ಮರಳಿಗ ಗ್ರಾಮದ ಚನ್ನರಾಜು (45) ಹಲ್ಲೆಗೊಳಗಾದ ವ್ಯಕ್ತಿ. ಅದೇ ಗ್ರಾಮದ ನಂದನ್ ಎಂಬಾತ ಹಲ್ಲೆ ನಡೆಸಿದ್ದಾನೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಕೊಲೆಗೆ ಯತ್ನಿಸಿರುವ ನಂದನ್, ಜಗಳ ತೆಗೆದು ಜಗಳ ತೆಗೆದು ಕುಡುಗೋಲಿನಿಂದ ಮನಬಂದಂತೆ ಹಲ್ಲೆ ಮಾಡಿದ್ದಾನೆ.

ತಾಲೂಕು ಕಚೇರಿಯ ಮೊದಲ ಮಹಡಿಯಲ್ಲಿ ಈ ಕೊಲೆಯತ್ನ ಪ್ರಕರಣ ನಡೆದಿದ್ದು, ಗಾಯಗೊಂಡ ಚನ್ನರಾಜುವನ್ನು ಕೂಡಲೇ ಮಂಡ್ಯ ಮಿಮ್ಸ್​ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ. ಮದ್ದೂರು ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಕ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net