ಕ್ರೀಡೆಗೆ ಉಲ್ಲಾಸ ಮೂಡಿಸುವ ಶಕ್ತಿಯಿದೆ; ಪ್ರಕಾಶ ಕೋಳಿವಾಡ

21-RNR-06
Published on

ರಾಣೆಬೆನ್ನೂರ: ದೈನಂದಿನ ಬದುಕಿನಲ್ಲಿ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿರುವ ಪೌರ ಕಾಮಿರ್ಕರಿಗೆ ಕ್ರೀಡೆ ಉಲ್ಲಾಸ ಮೂಡಿಸುತ್ತದೆ. ಪೌರ ಕಾಮಿರ್ಕರು ನಗರದ ಸ್ವಚ್ಛತೆ ಜತೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.

ನಗರದ ಆಂಗ್ಲೋ ಉರ್ದು ಹೈಸ್ಕೂಲ್​ ಮೈದಾನದಲ್ಲಿ ಪೌರ ಕಾಮಿರ್ಕರ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ಪೌರ ಕಾಮಿರ್ಕರ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಾತಿ, ಮತ, ಪಂಥ ಎಂಬ ಭೇದ ಭಾವವನ್ನು ದೂರ ಮಾಡಲು ಕ್ರೀಡೆ ಸಹಕಾರಿಯಾಗಿದೆ. ಕೆಲಸ ನಿರ್ವಹಣೆ ಮಾಡುವಾಗ ಗುಣಮಟ್ಟದ ಗ್ಲೌಸ್​ಗಳನ್ನು ಧರಿಸಬೇಕು. ಪಾರಂಪರಿಕ ತ್ಯಾಜ್ಯದಿಂದ ಕ್ಯಾನ್ಸರ್​ನಂತಹ ಕಾಯಿಲೆ ಬರುವ ಸಂಭವ ಹೆಚ್ಚಾಗಿರುತ್ತಿದೆ. ಅದಕ್ಕಾಗಿ ಪಾರಂಪರಿಕ ಹಾಗೂ ದೈನಂದಿನ ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡಬೇಕು ಎಂದರು.

ನಗರಸಭೆ ಅಧ್ಯಕ್ಷೆ ಚಂಪಕ ಬಿಸಲಹಳ್ಳಿ ಅಧ್ಯಕ್ಷತೆ ವಹಿಸಿದ್ದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವೀರೇಶ ಮೋಟಗಿ, ನಗರಸಭೆ ಆಯುಕ್ತ ಎಫ್​.ಐ. ಇಂಗಳಗಿ, ಸ್ಥಾಯಿ ಸಮಿತಿ ಅಧ್ಯಕ್ಷ ರಾಮಪ್ಪ ಕರಡೇಣ್ಣನವರ, ಸದಸ್ಯರಾದ ಪ್ರಕಾಶ ಪೂಜಾರ, ಪುಟ್ಟಪ್ಪ ಮರಿಯಮ್ಮನವರ, ಶೇಖಪ್ಪ ಹೊಸಗೌಡರ, ಇರ್ಫಾನ ದಿಡಗೂರ, ಮಲ್ಲೇಶ ಮದ್ಲೇರ, ಪೌರ ನೌಕರರ ಸಂಘದ ಜಿಲ್ಲಾಧ್ಯಕ್ಷ ಏಳಕೋಟೆಪ್ಪ ಗೋಣಿಬಸಮ್ಮನವರ, ಸ್ಥಳಿಯ ಶಾಖಾ ಅಧ್ಯಕ್ಷ ನಿಂಗಪ್ಪ ಮುದಿಕರಿಯಪ್ಪನವರ, ನಾಗರತ್ನ ಕೋರಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net