

ಕಡೂರು: ಪಟ್ಟಣಕ್ಕೆ ಕುಡಿಯುವ ನೀರಿಗಾಗಿ ಭದ್ರಾ ನೀರು ಮತ್ತು ಕೊಳವೆ ಬಾವಿಗಳನ್ನು ಅವಲಂಬಿಸಲಾಗಿದೆ. ಇದರ ಜತೆಯಲ್ಲಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಕೂಡಲೇ ಯೋಜನಾ ವರದಿ ತಯಾರಿಸಿ ಸರ್ಕಾರಕ್ಕೆ ಅಧಿಕಾರಿಗಳು ಸಲ್ಲಿಸಬೇಕು ಎಂದು ರಾಜ್ಯ ಐದನೇ ಹಣಕಾಸು ಆಯೋಗದ ಅಧ್ಯಕ್ಷ ಡಾ. ನಾರಾಯಣಸ್ವಾಮಿ ಸೂಚಿಸಿದರು.
ಪುರಸಭೆಯಲ್ಲಿ ಬುಧವಾರ ನಡೆದ ಐದನೇ ಹಣಕಾಸು ಆಯೋಗದ ಸಭೆಯಲ್ಲಿ ಮಾತನಾಡಿ, ಸಾರ್ವಜನಿಕರಿಗೆ ಯಾವುದೆ ತೊಂದರೆಯಾಗದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಹಣಕಾಸಿನ ಕೊರತೆ ಇರುವುದಿಲ್ಲ. ಯಾವುದೆ ತೊಂದರೆಯಿದ್ದರೂ ಅದನ್ನು ಪರಿಹರಿಸಿ ಸಾರ್ವಜನಿಕರಿಗೆ ಅತ್ಯುತ್ತಮ ಸೌಲಭ್ಯಗಳನ್ನು ನೀಡುವುದು ರಾಜ್ಯ ಸರ್ಕಾರದ ಮುಖ್ಯ ಗುರಿ ಎಂದರು.
ರಾಜ್ಯದ ಪ್ರತಿ ಪುರಸಭೆ ಮತ್ತು ಸ್ಥಳೀಯ ಸಂಸ್ಥೆಗಳ ಪೂರ್ಣ ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ಶಿಾರಸು ಮಾಡುವ ಕಾರ್ಯವನ್ನು ಆಯೋಗ ಮಾಡುತ್ತಿದೆ. ಅಗತ್ಯ ಸೌಲಭ್ಯಗಳನ್ನು ಸರ್ಕಾರ ಒದಗಿಸುವಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ ಅಧಿಕಾರಿಗಳು ಆಗಬೇಕಿರುವ ಕೆಲಸ ಕಾರ್ಯಗಳ ಬಗ್ಗೆ ಹೆಚ್ಚು ಗಮನಹರಿಸಬೇಕಿದೆ ಎಂದರು.
ಆಯೋಗದ ಸದಸ್ಯರಾದ ಆರ್.ಎಸ್.ೆಂಡೆ, ಮಹಮದ್ ಸನಾವುಲ್ಲಾ, ಸಮಾಲೋಚಕ ಎಂ.ಕೆ.ಕೆಂಪೇಗೌಡ, ಏಲಕ್ಕಿಗೌಡ, ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕಿ ಚಂದ್ರಮ್ಮ, ಎಇಇ ಎಸ್.ಎಸ್.ಮತ್ತಿಕಟ್ಟಿ, ಪುರಸಭಾ ಅಭಿಯಂತರರಾದ ಶ್ರೇಯಸ್, ಜಗದೀಶ್, ಪುರಸಭೆ ಸದಸ್ಯರಾದ ಸೈಯ್ಯದ್ ಯಾಸೀನ್, ಇಕ್ಬಾಲ್, ಸಂದೇಶ್‌ಕುಮಾರ್, ಮೋಹನ್‌ಕುಮಾರ್ ನಾಯ್ಕ, ಪುರಸಭೆ ಸಿಬ್ಬಂದಿ ಇದ್ದರು.