

ರಾಣೆಬೆನ್ನೂರ: ನಗರದ ಸ್ವಚ್ಛತೆಗೆ ಸದಾ ಶ್ರಮಿಸುವ ಪೌರ ಕಾಮಿರ್ಕರು ತಮ್ಮ ಆರೋಗ್ಯದ ಬಗ್ಗೆಯೂ ಹೆಚ್ಚಿನ ಕಾಳಜಿವಹಿಸಬೇಕು. ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಿ ಸಮಾಜದಲ್ಲಿ ಉನ್ನತ ಹುದ್ದೆ ಅಲಂಕರಿಸುವಂತೆ ನೋಡಿಕೊಳ್ಳಬೇಕು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ನಗರಸಭೆ ವತಿಯಿಂದ ಇಲ್ಲಿಯ ವರ್ತಕರ ಸಮುದಾಯ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಪೌರ ಕಾಮಿರ್ಕರ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ನಗರಸಭೆ ಸದಸ್ಯ ಮಲ್ಲಣ್ಣ ಅಂಗಡಿ ಮಾತನಾಡಿ, ಪೌರ ಕಾಮಿರ್ಕರ ಶ್ರಮದಿಂದಾಗಿ ರಾಣೆಬೆನ್ನೂರ ನಗರಸಭೆ ದೇಶದಲ್ಲಿಯೆ ಸ್ವಚ್ಛತೆಗೆ 44ನೇ ಸ್ಥಾನದಲ್ಲಿದೆ. ತಮ್ಮಲ್ಲಿರುವ ನೋವು ಬದಿಗೊತ್ತಿ ನಗರದ ಸ್ವಚ್ಛತೆಗೆ ಆದ್ಯತೆ ನೀಡಿ ಕಾರ್ಯನಿರ್ವಹಿಸುವ ಪೌರ ಕಾಮಿರ್ಕರ ಸೇವೆ ಅನನ್ಯವಾದದ್ದು. ಕಾಮಿರ್ಕರ ಆರೋಗ್ಯ ದೃಷ್ಠಿಯಿಂದ ಸರ್ಕಾರದಿಂದ ವಿವಿಧ ಯೋಜನೆ ಕೂಡ ಇದ್ದು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು. ಜತೆಗೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಬೇಕು. ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದರು.
ಪೌರ ಕಾಮಿರ್ಕರ ಸಮಾರಂಭ ಉದ್ಘಾಟಿಸಿದರು. ಪೌರ ಕಾಮಿರ್ಕರ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ವಿವಿಧ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಹಿರಿಯ ಪೌರ ಕಾಮಿರ್ಕರನ್ನು ಸನ್ಮಾನಿಸಲಾಯಿತು. ರೀತಿಕಾ ಮಠಪತಿ ಸೈಬರ್ ಕೆಂ ಕುರಿತು ಉಪನ್ಯಾಸ ನೀಡಿದರು.
ನಗರಸಭೆ ಅಧ್ಯಕ್ಷೆ ಚಂಪಕ್ಕ ಬಿಸಲಹಳ್ಳಿ, ಉಪಾಧ್ಯಕ್ಷ ನಾಗರಾಜ ಪವಾರ, ಸದಸ್ಯರಾದ ಪ್ರಕಾಶ ಪೂಜಾರ, ಪುಟ್ಟಪ್ಪ ಮರಿಯಮ್ಮನವರ, ರತ್ನಮ್ಮ ಪೂಜಾರ, ಆಯುಕ್ತ ಫಕ್ಕೀರಪ್ಪ ಇಂಗಳಗಿ, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಕರಡೆಣ್ಣನವರ, ಪ್ರಮುಖರಾದ ಮೈಲಪ್ಪ ದಾಸಪ್ಪನವರ, ಮೈಲಪ್ಪ ಗೋಣಿಬಸಮ್ಮವರ, ಹನುಮಂತಪ್ಪ ಕಬ್ಬಾರ, ಮಧು ಕೋಳಿವಾಡ, ಮಲ್ಲಣ್ಣ ಮದ್ಲೇರ, ಕರಬಸಪ್ಪ ದಾಸಪ್ಪನವರ, ಏಳುಕೋಟೆಪ್ಪ ಗೋಣಿಬಸಮ್ಮನವರ ಹಾಗೂ ಪೌರ ಕಾಮಿರ್ಕರು, ಸಿಬ್ಬಂದಿ ಉಪಸ್ಥಿತರಿದ್ದರು.