

ಮುಂಡರಗಿ: ಭಾರತ ಸೇವಾದಳ ವಿದ್ಯಾರ್ಥಿಗಳಲ್ಲಿ ಶಿಸ್ತು ಸಂಯಮ, ದೇಶಭಕ್ತಿ, ಜಾತ್ಯಾತೀತ ಮನೋಭಾವನೆ, ದೇಶಾಭಿಮಾನದ ಸಂಸ್ಕಾರ, ನಿಸ್ವಾರ್ಥ ಸೇವಾ ಗುಣಗಳನ್ನು ಮೂಡಿಸುತ್ತದೆ. ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಭಾರತ ಸೇವಾದಳ ಅವಶ್ಯಕ ಎಂದು ಭಾರತ ಸೇವಾದಳ ಗದಗ ಜಿಲ್ಲಾ ಘಟಕದ ಮಾಜಿ ಉಪಾಧ್ಯಕ್ಷ ವಿ.ಎಲ್.ನಾಡಗೌಡ್ರ ಹೇಳಿದರು.
ಪಟ್ಟಣದ ಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತ ಸೇವಾದಳ ತಾಲೂಕು ಹಾಗೂ ಜಿಲ್ಲಾ ಘಟಕದ ಆಶ್ರಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಭಾರತ ಸೇವಾದಳ ಜಿಲ್ಲಾ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಯುರ್ವೇದಿಕ್ ವೈದ್ಯ ಡಾ.ಪಿ.ಬಿ.ಹಿರೇಗೌಡ್ರ ಮಾತನಾಡಿ, ತ್ಯಾಗ, ರಾಷ್ಟ್ರ ನಿರ್ಮಾಣದ ಪರಿಕಲ್ಪನೆಯ ಜೊತೆಗೆ ಯೋಗ ನೈತಿಕ ಶಿಕ್ಷಣ ನೀಡುತ್ತಿರುವ ಭಾರತ ಸೇವಾದಳ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಶಾಲೆಯ ಎಸ್.ಡಿ.ಎಂ.ಸಿ.ಅಧ್ಯಕ್ಷ ಮಹದೇವಪ್ಪ ಬಳ್ಳಾರಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮಕ್ಕೂ ಮುನ್ನ ಬೆಳಗ್ಗೆ ಭಾರತ ಸೇವಾದಳ ತಾಲೂಕು ಉಪಾಧ್ಯಕ್ಷ ಕೊಟ್ರೇಶ ಅಂಗಡಿ ಧ್ವಜಾರೋಹಣ ನೆರವೇರಿಸಿದರು. ಸೇವಾದಳ ಸ್ವಯಂ ಸೇವಕ ಮಕ್ಕಳಿಂದ ಸರ್ವಧರ್ಮಿಯ ಪ್ರಾರ್ಥನೆಗಳು, ವಿವಿಧ ದೈಹಿಕ ಚಟುವಟಿಕೆಗಳ ಪ್ರದರ್ಶನ ಜರುಗಿದವು.
ಪುರಸಭೆ ಸದಸ್ಯ ಟಿ.ಬಿ.ದಂಡಿನ, ದೈಹಿಕ ಶಿಕ್ಷಣಾಧಿಕಾರಿ ಜಿ.ಬಸವಣ್ಣೆಪ್ಪ, ಸೇವಾದಳ ಶಿಕ್ಷಕಿ ಶಾಂತಮ್ಮ ಇಮ್ರಾಪೂರ, ನೇತ್ರಾವತಿ ಚಿಂಚಲಿಮಠ, ಮುಖ್ಯಶಿಕ್ಷಕ ಎಸ್.ಎಫ್.ಹಡಪದ ಉಪಸ್ಥಿತರರು ಇದ್ದರು.
ಜಿಲ್ಲಾ ಸಂಘಟಕ ಕುಮಾರಸ್ವಾಮಿ ಬಳ್ಳಾರಿ ಪ್ರಾಸ್ತಾವಿಕ ಮಾತನಾಡಿದರು. ಭಾರತ ಸೇವಾದಳ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಎನ್.ಎನ್.ಕಲಕೇರಿ ಸ್ವಾಗತಿಸಿದರು. ಎಸ್.ಎಸ್.ಭೂತರಡ್ಡಿ ಗೌರವ ರಕ್ಷೆ ನೀಡಿದರು. ಜಿಲ್ಲಾ ಸಂಪನ್ಮೂಲ ವ್ಯಕ್ತಿ ವೈ.ಎಚ್.ಬಚನಳ್ಳಿ ವಂದಿಸಿದರು.