

ಮುಂಬೈ: ಮುಂಬೈನ ಮಲಾಡ್ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ 12ಕ್ಕೂ ಹೆಚ್ಚು ಫಿಲಂ ಸ್ಟುಡಿಯೋಗಳನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(NGT) ಆದೇಶದ ಮೇರೆಗೆ ಶುಕ್ರವಾರ ನೆಲಸಮ ಮಾಡಲಾಗಿದೆ.
ಈ ಹಿಂದೆ ಇದ್ದ ಮಹಾ ವಿಕಾಸ್ ಅಘಾಡಿ ನೇತೃತ್ವದ ಸರ್ಕಾರದ ಆಶ್ರಯದಲ್ಲಿ ಈ ಫಿಲಂ ಸ್ಟುಡಿಯೋಗಳನ್ನು ಮಹಾರಾಷ್ಟ್ರ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರದ ನಿಯಮಗಳನ್ನು ಉಲ್ಲಂಘಿಸಿ ಕಟ್ಟಲಾಗಿದೆ ಎಂದು ಬಿಜೆಪಿ ಆರೋಪಿಸಿತ್ತು.
ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಇಲ್ಲಿ ಸ್ಟುಡಿಯೋಗಳನ್ನು ಅಕ್ರಮ ದಾಖಲೆಗಳನ್ನು ಬಳಸಿ ನಿರ್ಮಿಸಲಾಗಿತ್ತು. ಇದರ ಬಗ್ಗೆ ಬಿಎಂಸಿ ಕಮಿಷನರ್ ಇಕ್ಬಾಲ್ ಚಹಲ್ ಅವರಿಗೆ ತಿಳಿದಿದ್ದರೂ ಸಹ ಯಾವುಧೇ ಕ್ರಮವನ್ನು ಜರುಗಿಸಲಿಲ್ಲ.
ಅಕ್ರಮವನ್ನು ಪ್ರಶ್ನಿಸಿ ನಾವು ನ್ಯಾಯಾಲಯದ ಮೊರೆ ಹೋದೆವು ಮತ್ತು ಈ ವಿಚಾರವಾಗಿ ಸರ್ಕಾರ ಈ ಕೂಡಲ್ಲೇ ತನಿಖೆಗೆ ಆದೇಶಿಸಬೇಕು ಎಂದು ನಾನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರನ್ನು ಕೋರುತ್ತೇನೆ ಎಂದು ಕಿರೀಟ್ ಸೋಮಯ್ಯ ಹೇಳಿದ್ದಾರೆ.