ಆನ್​ಲೈನ್​ ತರಗತಿ ವೇಳೆ ಪ್ರಶ್ನೆಗೆ ಉತ್ತರಿಸದ ಮಗಳು: ಪೆನ್ಸಿಲ್​ನಿಂದ ಮನಬಂದಂತೆ ಚುಚ್ಚಿದ ತಾಯಿ!

Online Class
Published on

ಮುಂಬೈ: ಆನ್​ಲೈನ್​ ತರಗತಿಗೆ ಹೆಚ್ಚಿನ ಗಮನ ನೀಡದ ಮಗಳ ಮೇಲೆ ತಾಯಿಯೊಬ್ಬಳು ಹಲ್ಲೆ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ.

ಆನ್​ಲೈನ್​ ತರಗತಿಯಲ್ಲಿ ಶಿಕ್ಷಕರು ಕೇಳಿದ ಪ್ರಶ್ನೆಗೆ ಮಗಳು ಉತ್ತರಿಸಲಿಲ್ಲ ಎಂಬ ಕಾರಣಕ್ಕೆ ಆಕೆಗೆ ಪೆನ್ಸಿಲ್​ನಿಂದ ಇರಿದು ಗಾಯಗೊಳಿಸಲಾಗಿದ್ದು, ತಾಯಿಯ ವಿರುದ್ಧ ಸಾಂತಕ್ರುಜ್​ ಠಾಣಾ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಈ ಘಟನೆ ಬುಧವಾರ ನಡೆದಿದೆ. ಆರನೇ ತರಗತಿ ವಿದ್ಯಾರ್ಥಿನಿ ಆನ್​ಲೈನ್​ ತರಗತಿಗೆ ಹಾಜರಾಗಿತ್ತು. ಈ ವೇಳೆ ಶಿಕ್ಷಕರು ಕೇಳಿದ ಪ್ರಶ್ನೆಗೆ ಆಕೆ ಉತ್ತರಿಸಲಿಲ್ಲ. ಇದು ತಾಯಿಯ ಕೋಪಕ್ಕೆ ಕಾರಣವಾಗಿದೆ. ತಕ್ಷಣವೇ ಪೆನ್ಸಿಲ್​ ತೆಗೆದುಕೊಂಡು ಅನೇಕ ಬಾರಿ ಮಗಳಿಗೆ ಇರಿದಿದ್ದಾಳೆ. ಅಲ್ಲದೆ, ಮನಸಿಗೆ ಬಂದಂತೆ ಕಚ್ಚಿ ಗಾಯಗೊಳಿಸಿದ್ದಾಳೆ. ಇಡೀ ಘಟನೆಯನ್ನು ನೋಡಿದ ಸಂತ್ರಸ್ತೆಯ ಸಹೋದರಿ ಮಕ್ಕಳ ಸಹಾಯವಾಣಿಗೆ ನಂ. 1098ಗೆ ಕರೆ ಮಾಡಿ ಎಲ್ಲವನ್ನು ವಿರಿಸಿದ್ದಾಳೆ.

ಮಾಹಿತಿ ತಿಳಿದ ಎನ್​ಜಿಒದ ಇಬ್ಬರು ಪ್ರತಿನಿಧಿಗಳು ಸಂತ್ರಸ್ತೆಯ ಮನೆಗೆ ಭೇಟಿ ನೀಡಿ, ಘಟನೆ ಬಗ್ಗೆ ತಾಯಿಯ ವಿವರಣೆ ಕೇಳಿದ್ದಾರೆ. ಆದರೆ, ಯಾವುದೇ ಪ್ರತಿಕ್ರಿಯೆಯನ್ನು ನೀಡದಿದ್ದಾಗ ಆಕೆಯ ವಿರುದ್ಧ ದೂರು ದಾಖಲಿಸಿದ್ದಾರೆ. ಆದರೆ, ಈವರೆಗೂ ಆಕೆಯನ್ನು ಬಂಧಿಸಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net