10ನೇ ಮಹಡಿಯಿಂದ ಬಿದ್ದು ಸಿವಿಲ್​ ಇಂಜಿನಿಯರ್ ದುರಂತ​ ಸಾವು: ನಿರ್ಲಕ್ಷ್ಯವೇ ಕಾರಣವೆಂದ ಪಾಲಕರು! Mumbai

Mumbai
Published on

Mumbai : ಯುವ ಸಿವಿಲ್​ ಇಂಜಿನಿಯರ್ ಓರ್ವ 10ನೇ ಮಹಡಿಯಿಂದ ಬಿದ್ದು ಸಾವಿಗೀಡಾಗಿರುವ ಆಘಾತಕಾರಿ ಘಟನೆ ಮುಂಬೈನ ಮಲಾಡ್​ ಏರಿಯಾದಲ್ಲಿ ನಡೆದಿದೆ.

ಮೃತನನ್ನು ಓಂಕಾರ್ ಸಂಖ್ಯೆ (24)​ ಎಂದು ಗುರುತಿಸಲಾಗಿದೆ. ಈ ಘಟನೆ ಜುಲೈ 7ರಂದು ನಡೆದಿದೆ. ಈತನಿಗೆ ಯಾವುದೇ ಸುರಕ್ಷತಾ ಸಾಧನಗಳನ್ನು ನೀಡಿರಲಿಲ್ಲ. ನಡೆದಾಡುವಾಗ ಕಬ್ಬಿಣದ ಹಲಗೆಯಿಂದ ಬಿದ್ದು ಸಾವಿಗೀಡಾಗಿದ್ದಾರೆ ಎಂದು ಅವರ ಪಾಲಕರು, ಮಗ​ ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಯ ವಿರುದ್ಧ ಆರೋಪಿಸಿ, ಪ್ರಕರಣ ದಾಖಲಿಸಿದ್ದಾರೆ.

ಸಾವಿಗೆ ನಿರ್ಲಕ್ಷ್ಯ ಹಾಗೂ ಯಾವುದೇ ಮುನ್ನೆಚ್ಚರಿಕೆ ಇಲ್ಲದೇ ನಿರ್ಮಾಣ ಕೆಲಸದಲ್ಲಿ ತೊಡಗಿಕೊಂಡಿದ್ದೇ ಕಾರಣ ಎಂದು ಅರಿತಿರುವ ಮಲಾಡ್​ ಪೋಲಿಸರು ಭಾರತೀಯ ನ್ಯಾಯ ಸಂಹಿತೆಯ ಸೆಕ್ಸನ್​ 106 (1) ಹಾಗೂ 290 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net