ವಾಟ್ಸ್​ಆ್ಯಪ್​​ ಪ್ರೊಫೈಲ್​ಗೆ ಔರಂಗಜೇಬ್ ಫೋಟೋ ಹಾಕಿದ ವ್ಯಕ್ತಿ ಅರೆಸ್ಟ್​

Aurangzeb
Published on

ಮುಂಬೈ: ಸೋಶಿಯಲ್​ ಮೀಡಿಯಾ ಖಾತೆಯ ಪ್ರೊಫೈಲ್‌ನಲ್ಲಿ ಮೊಘಲ್​​ ವಂಶಸ್ಥ ಔರಂಗಜೇಬ್​ನ ಚಿತ್ರವನ್ನು ಹಾಕಿದ್ದ ಮುಂಬೈ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ವಶಿ ಬಂಧಿತ ವ್ಯಕ್ತಿ. ವಾಟ್ಸ್​ಆ್ಯಪ್​ ಪ್ರೊಫೈಲ್​​ಗೆ ಮೊಘಲ್ ವಂಶಸ್ಥ ಔರಂಗಜೇಬ್​ನ ಫೋಟೋವನ್ನು ಅಪ್​ಲೋಡ್​​ ಮಾಡಿದ್ದನು. ಇದು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಬಗ್ಗೆ ಸಂಘಟನೆಗಳು ದೂರನ್ನೂ ದಾಖಲಿಸಿದ್ದವು. ದೂರಿನ ಆಧಾರದಲ್ಲಿ ವಶಿ ಎಂಬ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆತನಿಗೆ ನೊಟೀಸ್  ಜಾರಿಗೊಳಿಸಲಾಗಿದೆ.

ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 298 (ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೆಲಸ) 153-A (ಧರ್ಮ, ಜನಾಂಗ, ಜನ್ಮ ಸ್ಥಳ, ನಿವಾಸದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಆಧಾರದಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ.

ಈ ಹಿಂದೆ ಔರಂಗಜೇಬ್ ಹಾಗೂ ಟಿಪ್ಪು ಸುಲ್ತಾನ್ ನ್ನು ವೈಭವಿಕರಿಸಿದ್ದರ ಪರಿಣಾಮ ಮಹಾರಾಷ್ಟ್ರದ ಹಲವು ನಗರಗಳಲ್ಲಿ ಕೋಮು ಘರ್ಷಣೆಯ ಪರಿಸ್ಥಿತಿಯ ಘಟನೆಗಳು ವರದಿಯಾಗಿದ್ದವು. ಕೊಲ್ಹಾಪುರ ನಗರದಲ್ಲಿ ಕೆಲವು ಸ್ಥಳೀಯರು ಟಿಪ್ಪು ಸುಲ್ತಾನ್ ಚಿತ್ರವನ್ನು ಆಕ್ಷೇಪಾರ್ಹ ಆಡಿಯೋ ಮೆಸೇಜ್ ನೊಂದಿಗೆ ಪ್ರಕಟಿಸಿದ್ದನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಕಲ್ಲು ತೂರಾಟ ನಡೆದಿತ್ತು. ಹೀಗಾಗಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net