

ಮುಂಬೈ: ಏಷ್ಯಾದ ಅತಿ ದೊಡ್ಡ ಕೊಳೆಗೇರಿ ಎಂದು ಗುರುತಿಸಿಕೊಂಡಿರುವ ಮುಂಬೈನ ಧಾರಾವಿಯಲ್ಲಿ ಹುಟ್ಟಿ ಬೆಳೆದ ಯುವಕನೊಬ್ಬ ಬಡತನವನ್ನು ತನ್ನ ಪ್ರತಿಭೆಯಿಂದ ಮೆಟ್ಟಿನಿಂತು ಸೇನಾಧಿಕಾರಿ ಕೆಲಸಕ್ಕೆ ಆಯ್ಕೆಯಾಗಿದ್ದಾನೆ. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ಧಾರಾವಿ-ಸಿಯಾ ಕೋಳಿವಾಡದ ನಿವಾಸಿಗಳಿಗೆ ಶನಿವಾರ ಸಂಭ್ರಮದ ದಿನ. ಸ್ಥಳೀಯ ನಿವಾಸಿ 26 ವರ್ಷದ ಉಮೇಶ್ ಕೀಲು ಭಾರತೀಯ ಸೇನೆಯ ಅಧಿಕಾರಿಯಾಗಿ ನಿಯೋಜನೆ ಗೊಂಡಿದ್ದಾರೆ. ಕೊಳೆಗೇರಿಯಲ್ಲಿ ಹುಟ್ಟಿ ಬೆಳೆದ ಉಮೇಶ್ ದೆಹಲಿ ರಾವ್ ಅವರು ತಮ್ಮ ಬುದ್ಧಿವಂತಿಕೆಯಿಂದ ಭಾರತೀಯ ಸೇನೆಯನ್ನು ಪ್ರವೇಶಿಸಿ ಈ ಸಾಧನೆ ಮಾಡಿದ ಮೊದಲ ವ್ಯಕ್ತಿಯಾಗಿದ್ದಾರೆ. ಉಮೇಶ್ ಅವರು ಶನಿವಾರ ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಿಂದ ಭಾರತೀಯ ಸೇನೆಯಲ್ಲಿ ಕಮಿಷನ್ಡ್ ಆಫೀಸರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.
ಮನೆ ಕೇವಲ 10*5 ಅಳತೆಯ ಗುಡಿಸಲು. ಇದೇ ಗುಡಿಸಲಿನಲ್ಲಿ ನಾಲ್ವರು ಸದಸ್ಯರ ಇವರ ಕುಟುಂಬ ವಾಸವಾಗಿತ್ತು.ಉಮೇಶ್ ಅವರ ತಂದೆ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇಬ್ಬರು ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವಂತೆ ನೋಡಿಕೊಳ್ಳುತ್ತಿದ್ದರು. 2013 ರಲ್ಲಿ, ಒಂದು ದಿನ ಇವರು ಪಾರ್ಶ್ವವಾಯುಗೆ ಒಳಗಾದರು. ಆಗ ಕುಟುಂಬದ ಅಲ್ಪ ಸಂಪಾದನೆಯನ್ನು ನಿಂತಿತ್ತು.
ಒಂದು ಕಡೆ ಕುಟುಂಬ ಹಾಗೂ ಶಿಕ್ಷಣ ಎರಡು ಜವಾಬ್ದಾರಿ ಇದ್ದ ಉಮೇಶ್ ಬರುವ ಕಷ್ಟಗಳನ್ನು ಮೆಟ್ಟಿನಿಂತು ಐಟಿಯಲ್ಲಿ ವಿಜ್ಞಾನ ಪದವಿ ಮತ್ತು ಕಂಪ್ಯೂಟರ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಅವರ ಶೈಕ್ಷಣಿ ಪಡೆಯುವ ವೇಳೆಯೆ ಎನ್‌ಸಿಸಿ ಏರ್ ವಿಂಗ್‌ನಲ್ಲಿ ಸೇವೆ ಸಲ್ಲಿಸಿದರು ಮತ್ತು 'ಸಿ' ಪ್ರಮಾಣಪತ್ರವನ್ನು ಗಳಿಸಿದರು.ಅವರ ಕರ್ತವ್ಯಗಳು ಮತ್ತು ಜವಾಬ್ದಾರಿಗಳು ಅಲ್ಲಿಗೆ ಮುಗಿಯಲಿಲ್ಲ ಏಕೆಂದರೆ ಅವರು ಸೈಬರ್ ಕೆಫೆಯಲ್ಲಿ ಅರೆಕಾಲಿಕ ಕೆಲಸವನ್ನು ತೆಗೆದುಕೊಂಡರು ಮತ್ತು ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡಿದರು, ಉಮೇಶ್ ಗಳಿಸುವ ಹಣ ಕುಟುಂಬಕ್ಕೆ ಆಧಾರವಾಗಿತ್ತು.
ಐಟಿ ಸೇವಾ ವಲಯದ ದೊಡ್ಡ ಕಂಪನಿಯಾದ ಟಿಸಿಎಸ್‌ನಲ್ಲಿ ಉದ್ಯೋಗ ದೊರೆತಿತ್ತು. ಅದರೊಂದಿಗೆ ಕುಟುಂಬಕ್ಕೆ ಸಹಾಯ ಮಾಡಲು ಆರಂಭಿಸಿದ್ದರು. ನಾನು ಮೂರು ವರ್ಷಗಳ ಕಾಲ TCS ನಲ್ಲಿ ಕೆಲಸ ಮಾಡಿದ್ದರು. ಕುಟುಂಬದ ಅಗತ್ಯಗಳನ್ನು ಪೂರೈಸುವುದರೊಂದಿಗೆ ತಂದೆಯ ಚಿಕಿತ್ಸೆಯನ್ನು ನೋಡಿಕೊಂಡರು. ಈಟಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆಯಲ್ಲಿಯೆ ಓದಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ವಿದ್ಯಾರ್ಥಿವೇತನದ ಮೂಲಕ ಪೂರ್ಣಗೊಳಿಸಿದರು.
ಉಮೇಶ್ ಕೀಲು ಸರ್ವೀಸ್ ಸೆಲೆಕ್ಷನ್ ಬೋರ್ಡ್ ಅಂದರೆ (ಎಸ್‌ಎಸ್‌ಬಿ) ಪರೀಕ್ಷೆಗೆ ಸಿದ್ಧತೆ ಅರಂಭಿಸಿದ್ದರು. 13ನೇ ಪ್ರಯತ್ನಗಳ ನಂತರ ಸೇನೆಗೆ ಆಯ್ಕೆಯಾದರು. ಆದರೆ, ಅಕಾಡೆಮಿಗೆ ಸೇರಿದ ಬೆನ್ನಲ್ಲಿಯೇ ತಂದೆಯ ಸಾವಿನ ಸುದ್ದಿ ತಲುಪಿತ್ತು. ವಿಶೇಷ ಮನವಿಯ ಮೇಲೆ ಕುಟುಂಬವನ್ನು ಭೇಟಿ ಮಾಡಲು ಹಾಗೂ ಮಗನ ಕರ್ತವ್ಯಗಳನ್ನು ನಿರ್ವಹಿಸಲು ಅವರಿಗೆ ಅಕಾಡೆಮಿ ಅವಕಾಶ ನೀಡಿತ್ತು. ಆದರೆ, ಅಕಾಡೆಮಿಗೆ ಮರಳಿದ ಬಳಿಕ ಉಮೇಶ್ ಕೀಲುಗೆ ತನ್ನ ತಂದೆಯ ಕನಸನ್ನು ನನಸಾಗಿಸೋದೇ ಮುಖ್ಯವಾಗಿತ್ತು. ಹೀಗಾಗಿ ಅವರ ಸಾಧನೆಯತ್ತ ಮುಖ ಮಾಡಿದರು.
ಉಮೇಶ್ ಮಾತನಾಡಿ, ' ನನಗೂ ಕಷ್ಟಗಳಿದ್ದವು. ಆದರೆ ಯೋಚನೆ ಮಾಡುತ್ತಾ ಕೂರಲಿಲ್ಲ. ಮನಸ್ಸಿದ್ದರೆ ಮಾರ್ಗ ಖಂಡಿತಾ ಇರುತ್ತದೆ ಎನ್ನುವುದಕ್ಕೆ ನಾನೇ ಸಾಕ್ಷಿ. ನಿಮ್ಮ ಗುರಿಯನ್ನು ಸಾಧಿಸುತ್ತಿರಿ ಎನ್ನುವ ನಂಬಿಕೆ ನಿಮ್ಮಲ್ಲೇ ಇರಬೇಕು' ಎಂದು ಉಮೇಶ್ ಕೀಲು ಹೇಳುತ್ತಾರೆ.
12 ಬಾರಿ ಎಸ್‌ಎಸ್‌ಬಿ ಪರೀಕ್ಷೆಯಲ್ಲಿ ವಿಫಲರಾದರೂ, ಎಂದೂ ಕೂಡ ಸೇನೆ ಸೇರುವ ತಮ್ಮ ಆಸೆಯಿಂದ ವಿಚಲಿತನಾಗಿಯೇ ಇರಲಿಲ್ಲ ಎಂದಿದ್ದಾರೆ.