Accident: ನಿಯಂತ್ರಣ ತಪ್ಪಿ ಪಾದಚಾರಿಗಳ ಮೇಲೆ ಹರಿದ ಬಸ್​​.. ಆರು ಮಂದಿ ಸಾವು..49 ಮಂದಿ ಸ್ಥಿತಿ ಗಂಭೀರ

accident
Published on

ಮಹಾರಾಷ್ಟ್ರ:   ( Accident )  ನಿಯಂತ್ರಣ ತಪ್ಪಿ ಪಾದಾಚಾರಿಗಳ ಮೇಲೆ ಹರಿದ ಬಸ್​​ ಅಲ್ಲೆ ಹತ್ತಿರದಲ್ಲಿದ್ದ ವಾಹನಗಳಿಗೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ  6 ಮಂದಿ ಸಾವನ್ನಪ್ಪಿದ್ದು, 49 ಮಂದಿ ಗಾಯಗೊಂಡಿದ್ದಾರೆ.

ಸೋಮವಾರ ರಾತ್ರಿ 9:50 ಕ್ಕೆ ಎಸ್‌ಜಿ ಬಾರ್ವೆ ರಸ್ತೆಯಲ್ಲಿ ಎಲ್ ವಾರ್ಡ್ ಎದುರಿನ ಅಂಜುಮ್-ಎ-ಇಸ್ಲಾಂ ಶಾಲೆಯ ಬಳಿ ಅಪಘಾತ ಸಂಭವಿಸಿದೆ. ಪ್ರಯಾಣಿಕರಿಂದ ತುಂಬಿದ್ದ ಬಸ್ ನಿಯಂತ್ರಣ ತಪ್ಪಿ ಜನನಿಬಿಡ ಪ್ರದೇಶಕ್ಕೆ ನುಗ್ಗಿದೆ. ಈ ವೇಳೆ ವೇಗವಾಗಿ ಬಂದ ಬಸ್ ಪಾದಚಾರಿಗಳ ಮೇಲೆ ಹರಿದು ಕೊನೆಗೆ ಕಟ್ಟಡವೊಂದರ ಆರ್‌ಸಿಸಿ ಕಾಲಮ್‌ಗೆ ಡಿಕ್ಕಿ ಹೊಡೆದು ಬಸ್ ನಿಲ್ಲಿಸಿದೆ.

ಕಟ್ಟಡದ ಗಡಿ ಗೋಡೆ ಕುಸಿದಿದೆ. ಇದೇ ವೇಳೆ ಬಸ್ 100 ಮೀಟರ್ ಅಂತರದಲ್ಲಿ 40 ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಈ ಭೀಕರ ಅಪಘಾತದಲ್ಲಿ ಇದುವರೆಗೆ ಆರು ಮಂದಿ ಸಾವನ್ನಪ್ಪಿದ್ದು, 49 ಮಂದಿ ಗಾಯಗೊಂಡಿದ್ದಾರೆ. ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಚಾಲಕ ಕುಡಿದ ಅಮಲಿನಲ್ಲಿ ಬಸ್ ಚಲಾಯಿಸಿದ್ದಾನೆ. ಹಾಗಾಗಿಯೇ ಈ ಅವಘಡ ಸಂಭವಿಸಿದೆ ಎಂದು  ಎಂದು ಸ್ಥಳೀಯರು ಹೇಳುತ್ತಾರೆ.  ಬಸ್ ಚಾಲಕನಿಗೆ ದೊಡ್ಡ ವಾಹನ ಚಲಾಯಿಸಿದ ಅನುಭವ ಇರಲಿಲ್ಲ . ಡಿಸೆಂಬರ್ 1ರಿಂದ ಸರ್ಕಾರಿ ಬಸ್ ಓಡಿಸುತ್ತಿದ್ದಾರೆ. ಚಾಲಕನ ಅನುಭವದ ಕೊರತೆಯಿಂದ ಇದು ಸಂಭವಿಸಿದೆಯೇ ಅಥವಾ ಅಪಘಾತಕ್ಕೆ ಬೇರೆ ಕಾರಣವಿದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗಾಯಗೊಂಡ ಚಾಲಕನಿಗೆ ಚಿಕಿತ್ಸೆ ನೀಡಲಾಗಿದೆ. ಪೊಲೀಸರು ಆತನನ್ನು ವಿಚಾರಣೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net