ಇಡೀ ಮುಂಬೈನಲ್ಲಿ ಎಲ್ಲಿಯೂ ವಿದ್ಯುತ್​ ಇಲ್ಲ: ಜನರಿಂದ ದೂರುಗಳ ಮಹಾಪೂರ

Power
Published on

ಮುಂಬೈ: ವಾಣಿಜ್ಯ ನಗರಿ ಮುಂಬೈನಾದ್ಯಂತ ವಿದ್ಯುತ್​ ಸಂಪರ್ಕ ಕಡಿತಗೊಂಡಿರುವುದಾಗಿ ಸೋಮವಾರ ಬೆಳಗ್ಗೆ ವರದಿಯಾಗಿದೆ. ಮುಂಬೈನ ದಕ್ಷಿಣ, ಉತ್ತರ ಮತ್ತು ಕೇಂದ್ರದಲ್ಲಿ ಎಲ್ಲಿಯೂ ವಿದ್ಯುತ್​ ಇಲ್ಲದಿರುವ ಬಗ್ಗೆ ಜನರು ಟ್ವಿಟರ್​ ಮೂಲಕ ತಿಳಿಸುತ್ತಿದ್ದಾರೆ.

ಈ ಬಗ್ಗೆ ಟ್ವೀಟ್​ ಮೂಲಕವೇ ಸ್ಪಷ್ಟನೆ ನೀಡಿರುವ ಬೃಹನ್​ ಮುಂಬೈ ವಿದ್ಯುತ್​ ಸರಬರಾಜು ಮತ್ತು ಸಾರಿಗೆ (ಬಿಎಸ್​ಇಟಿ) ಇಲಾಖೆ, ಟಾಟಾ ಸಂಸ್ಥೆಯಿಂದ ಪೂರಕೈಯಾಗುವ ವಿದ್ಯುತ್​ ಸರಬರಾಜಿನಲ್ಲಿ ವೈಫಲ್ಯವಾಗಿರುವುದರಿಂದ ಸಂಪರ್ಕ ಕಡಿತವಾಗಿದೆ ಎಂದು ತಿಳಿಸಿದೆ. ಅಡತಡೆಗೆ ವಿಷಾದಿಸಿದೆ.

ವಿದ್ಯುತ್​ ಕಡಿತ ಹೊರತಾಗಿಯೂ ಬಾಂಬೆ ಸ್ಟಾಕ್​ ಎಕ್ಸ್​ಚೇಂಜ್​ (ಬಿಎಸ್​ಇ) ಎಂದಿನಂತೆಯೇ ಕಾರ್ಯನಿರ್ವಹಿಸುತ್ತಿದೆ ಎಂದು ಎಕ್ಸ್​ಚೇಂಜ್​ ಹೇಳಿದೆ. ಎನ್​ಎಸ್​ಇ ಸಹ ಸಹಜವಾಗಿಯೇ ಕಾರ್ಯನಿರ್ವಹಿಸುತ್ತಿದೆ. ಸ್ತಳೀಯ ರೈಲು ಮತ್ತು ಮೆಟ್ರೋ ಸೇವೆಗಳಿಗೆ ಅಡಚಣೆ ಉಂಟಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net