ಮುಂಬೈ ವಿಮಾನ ನಿಲ್ದಾಣದ ಕಸದ ತೊಟ್ಟಿಯಲ್ಲಿ ನವಜಾತ ಶಿಶುವಿನ ಶವ ಪತ್ತೆ! Mumbai

mumbai
Published on

Mumbai | ಮುಂಬೈನ ಛತ್ರಪತಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರಲ್ಲಿರುವ ಕಸದ ತೊಟ್ಟಿಯಲ್ಲಿ ನವಜಾತ ಶಿಶುವಿನ ಶವ ಪತ್ತೆಯಾಗಿದೆ. ಸ್ಥಳದಲ್ಲಿ ಇದನ್ನು ಗಮನಿಸಿದ ಸಿಬ್ಬಂದಿ ಶವವನ್ನು ವಶಪಡಿಸಿಕೊಂಡಿದ್ದಾರೆ.

ಮಂಗಳವಾರ ( ಮಾ. 25) ರಾತ್ರಿ 10.30ರ ಸುಮಾರಿಗೆ ವಿಮಾನ ನಿಲ್ದಾಣದ ಟರ್ಮಿನಲ್ 2ರ ಶೌಚಾಲಯದಲ್ಲಿದ್ದ ಕಸದ ತೊಟ್ಟಿಯಲ್ಲಿ ಈ ಶವ ಕಾಣಿಸಿಕೊಂಡಿದೆ. ಇನ್ನೂ ಅದನ್ನು ಗಮನಿಸಿದ ಅಲ್ಲಿನ ಸ್ಥಳೀಯ ಅಧಿಕಾರಿಗಳು ಘಟನೆ ಬಗ್ಗೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಆ ನವಜಾತ ಶಿಶುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಷ್ಟರಲ್ಲಿ ಮಗು ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನೂ ಈ ಘಟನೆಗೆ ಕಾರಣ ಯಾರು ಎಂಬುದನ್ನು ಪತ್ತೆ ಹಚ್ಚುವಂತೆ ಆದೇಶಿಸಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗಾಗಿ ವಿಮಾನ ನಿಲ್ದಾಣದ ಟರ್ಮಿನಲ್ 2 ನಲ್ಲಿ ಅಳವಡಿಸಲಾದ ಸಿಸಿಟಿವಿಗಳ ಪರಿಶೀಲನೆ ನಡೆಸುತ್ತಿದ್ದಾರೆ.

baby

ಈ ಪ್ರಕರಣದ ತನಿಖೆಯನ್ನ ಮುಂಬೈ ಪೊಲೀಸರು ವಹಿಸಿಕೊಂಡಿದ್ದು, ಶವವನ್ನು ಕೂಪರ್ ಆಸ್ಪತ್ರೆಗೆ ಸಾಗಿಸಲಾಗಿದೆ. ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (MIAL) ಶೀಘ್ರದಲ್ಲೇ ಈ ಘಟನೆ ಬಗ್ಗೆ ಮಾಹಿತಿ ಬಿಡುಗಡೆ ಮಾಡಲಿದೆ. ಈ ಸಂಬಂಧ ಸಹಾರ್ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಮಗುವನ್ನು ಬಿಟ್ಟುಹೋದ ವ್ಯಕ್ತಿಯನ್ನು ಗುರುತಿಸಲು ನಿರಂತರ ತನಿಖೆ ಆರಂಭಿಸಿದ್ದಾರೆ.

ಈ ಹಿಂದೆ ಥಾಣೆ ಜಿಲ್ಲೆಯಲ್ಲಿ 2 ನವಜಾತ ಶಿಶುಗಳ ಶವ ಪತ್ತೆ:

ಇದೇ ವರ್ಷದ ಫೆಬ್ರವರಿಯಲ್ಲಿ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಎರಡು ನವಜಾತ ಶಿಶುಗಳು ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿದ್ದವು. ಭಿವಂಡಿಯಲ್ಲಿ ರಸ್ತೆ ಬದಿಯ ಕಸದ ರಾಶಿಯಲ್ಲಿ 32 ವಾರಗಳ ನವಜಾತ ಶಿಶುವೊಂದು ಶವವಾಗಿ ಪತ್ತೆಯಾಗಿತ್ತು. ಆ ಶಿಶುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದಾಗ ಆ ಮಗು ಅಷ್ಟರಲ್ಲಾಗಲೇ ತನ್ನ ಉಸಿರು ನಿಲ್ಲಿಸಿರೋದಾಗಿ ತಿಳಿದು ಬಂದಿತ್ತು. ಥಾಣೆ ನಗರದ ಕಟ್ಟಡವೊಂದರಲ್ಲಿ ಕಿಟಕಿಯ ಗ್ರಿಲ್‌ನ ಛಾವಣಿಯ ಮೇಲೆ ಮತ್ತೊಂದು ನವಜಾತ ಶಿಶು ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net