ನನ್ನ ಕುಟುಂಬ ಇಂದಿಗೂ ಪಾಕ್​ನಲ್ಲಿ ಇದ್ದಾರೆ.. ಆದರೆ; ಮುಮೈತ್ ಖಾನ್ ಹೇಳಿದ್ದೇನು? | Mumaith Khan

Untitled design (40)
Published on

ಹೈದರಾಬಾದ್​​: ಚಿತ್ರರಂಗದಲ್ಲಿ ಅನೇಕರು ನಟಿಯರಾಗಿ ಸ್ಥಾನಮಾನವನ್ನು ಸಾಧಿಸುವ ಮತ್ತು ಯಶಸ್ವಿಯಾಗುವ ಕನಸು ಕಾಣುತ್ತಾರೆ . ಆದರೆ ಅವರಲ್ಲಿ ಕೆಲವರಿಗೆ ಮಾತ್ರ ವಿಶೇಷ ಮನ್ನಣೆ ದೊರೆಯುತ್ತದೆ. ಎಲ್ಲರೂ ನಾಯಕ ಅಥವಾ ನಾಯಕಿ ಆಗಬೇಕಾಗಿಲ್ಲ. ಕೆಲವರು ಚಲನಚಿತ್ರಗಳಲ್ಲಿನ ಪಾತ್ರದ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗುತ್ತಾರೆ. ಅವರಲ್ಲಿ ಮುಮೈತ್​​​ ಖಾನ್​(Mumaith Khan) ಕೂಡ ಒಬ್ಬರು.

ನಾಯಕಿಯಾಗಲೆಂದು ಬಂದವರು ಐಟಂ ಹಾಡುಗಳಿಂದಲೇ ಮನ್ನಣೆ ಪಡೆದು ತನ್ನದೇ ಅಭಿಮಾನಿಗಳನ್ನು ಗಳಿಸಿರುವ ಸುಂದರಿಯಲ್ಲಿ ಒಬ್ಬರು ಮುಮೈತ್ ಖಾನ್. ತಮ್ಮ ವೃತ್ತಿಜೀವನದ ಆರಂಭದಲ್ಲಿ ಐಟಂ ಗರ್ಲ್ ಆಗಿ ಹಲವಾರು ಹಾಡುಗಳಲ್ಲಿ ನಟಿಸುವ ಮೂಲಕ ಅಪಾರ ಜನಪ್ರಿಯತೆಯನ್ನು ಗಳಿಸಿದರು. ಏನೇ ಪ್ರಶ್ನೆಯಿದ್ದರೂ ಬೋಲ್ಡ್​​ ಆಗಿ ಉತ್ತರಿಸುವ ನಟಿ ಮುಮೈತ್​ ಖಾತ್​​​​​ ಇತ್ತೀಚಿನ ಸಂದರ್ಶನವೊಂದರಲ್ಲಿ ತನ್ನ ಕುಟುಂಬ ಪಾಕಿಸ್ತಾನದಲ್ಲಿದೆ ಎಂದು ಬಹಿರಂಗಪಡಿಸಿದ್ದಾರೆ.

ತಾಯಿ ಚೆನ್ನೈ, ನೀವು ಮುಂಬೈ ಈ ಕಾಂಬಿನೇಷನ್ ಹೇಗೆ ಎಂದು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಮೈತ್​​​ ಖಾನ್​, ನಾನು ಮುಂಬೈ ಹೌದು, ನನ್ನ ತಾಯಿ ತಿರುಚಿ ಎಂದು ಹೇಳಿದ್ದಾರೆ. ತಕ್ಷಣವೇ ನಗುತ್ತಲೇ ಉತ್ತರಿಸಿದ ನಟಿ ಐ ಅ್ಯಮ್​ ಇಂಡಿಯನ್​ ಎಂದು ಹೇಳುತ್ತಾರೆ. ಆ ಸಮಯದಲ್ಲಿ ತನ್ನ ಪೂರ್ವಜರ ವಿಚಾರವನ್ನು ಹಂಚಿಕೊಂಡಿದ್ದಾರೆ.

ವಲಸೆ ಬರುವ ಸಮಯದಲ್ಲಿ(ಅಂದರೆ ಸ್ವಾತಂತ್ರ್ಯ ಬಂದ ಬಳಿಕ) ಇಬ್ಬರೂ ಅಕ್ಕಪಕ್ಕದ ಮನೆಯಲ್ಲಿಯೇ ಇರುತ್ತಾರೆ. ಅಂದರೆ ನನ್ನ ತಂದೆಯ ತಂದೆ ಮತ್ತು ನನ್ನ ತಾಯಿಯ ತಂದೆ ಇಬ್ಬರೂ ನೆರೆಹೊರೆಯವರು. ಆಗಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಮಾಡುತ್ತಿದ್ದರು. ಇದೇ ರೀತಿ ನನ್ನ ತಾಯಿಗು ಬಹಳ ಬೇಗನೇ ಮದುವೆ ಮಾಡಿ ಕಳುಹಿಸಿದ್ದಾರೆ. ತಾಯಿಯ ಜತೆ ತಂದೆಯೂ ಇಲ್ಲಿಗೆ ಬಂದರು. ನನ್ನ ತಾತಂದಿರೂ ಪಾಕಿಸ್ತಾನದಲ್ಲಿದ್ದರೂ ಎಂಬುದನ್ನು ತಿಳಿಸಿದರು.

ನೀವು ಎಂದಾದರೂ ಪಾಕಿಸ್ತಾನಕ್ಕೆ ಹೋಗಿದ್ದೀರಾ ಎಂದು ಕೇಳಿದಾಗ, ಇಲ್ಲ ನಾನೆಂದೂ ಹೋಗಿಲ್ಲ ನನಗೆ ಭಯವಾಗುತ್ತದೆ ಎಂದು ಮುಮೈತ್​​ ಖಾನ್​​ ಹೇಳಿದ್ದಾರೆ. ನನ್ನ ತಂದೆಯ ಕುಟುಂಬ ಇಂದಿಗೂ ಪಾಕಿಸ್ತಾನದಲ್ಲಿಯೇ ಇದ್ದಾರೆ. ಬಹಳ ಸಮಯ ಆಗಿದೆ ನಾವ್ಯಾರೂ ಅಲ್ಲಿಗೆ ಹೋಗಿಲ್ಲ. ಎಲ್ಲರೂ ಅವರವರ ಜೀವನದಲ್ಲಿ ಮುಂದೆ ಹೋಗಿದ್ದಾರೆ. ಆದರೂ ಇಂದಿಗೂ ನಮ್ಮ ಕುಟುಂಬ ಪಾಕಿಸ್ತಾನದಲ್ಲಿದೆ ಏನು ಮಾಡುವುದು ಎಂದು ಕೇಳಿದರು.

ಈ ಹಿಂದೆ ಅವರನ್ನು ಮತ್ತೊಂದು ಸಂದರ್ಶನದಲ್ಲಿ ನೀವು ಇನ್ನೂ ಏಕೆ ಮದುವೆಯಾಗಿಲ್ಲ? ನೀವು ಕನಿಷ್ಠ ಪಕ್ಷ ಡೇಟಿಂಗ್ ಮಾಡಿದ್ದೀರಾ? ಎಂದು ಕೇಳಿದಾಗ, ನಾನು ಈಗಾಗಲೇ ನಾಲ್ಕು ಜನರೊಂದಿಗೆ ಡೇಟಿಂಗ್ ಮಾಡಿದ್ದೇನೆ ಎಂದು ಮುಚ್ಚುಮರೆ ಇಲ್ಲದೆ ಉತ್ತರಿಸಿದ್ದಾರೆ. ಆದರೆ ಅವುಗಳಲ್ಲಿ ಯಾವುದೂ ನಿಜವಾದಂತೆ ಕಾಣಲಿಲ್ಲ. ನನಗೆ ಸರಿ ಎನ್ನಿಸದ ಕಾರಣ ನಾನು ಬಿಟ್ಟುಬಿಟ್ಟೆ ಎಂದರು.

ಇನ್ನೂ ಮದುವೆ ವಿಚಾರಕ್ಕೆ ಬಂದರೆ ನಾನು ಅದಕ್ಕೆ ಸಿದ್ಧವಾಗಿಲ್ಲ. ಅದಕ್ಕಾಗಿಯೇ ನಾನು ಮದುವೆಯಾಗಲಿಲ್ಲ. ಸಾಮಾನ್ಯವಾಗಿ ಜನರು ಸಂಬಂಧ ಮುರಿದ ನಂತರ ಸಂಬಂಧಗಳ ಬಗ್ಗೆ ನಕಾರಾತ್ಮಕವಾಗಿ ಮಾತನಾಡುತ್ತಾರೆ. ಆದರೆ ನಾನು ಮದುವೆಯಾಗಬೇಕು ಅಥವಾ ಸಂಬಂಧ ಇಟ್ಟುಕೊಳ್ಳಬೇಕು ಎಂದು ನನಗನ್ನಿಸುವುದಿಲ್ಲ. ಭವಿಷ್ಯದಲ್ಲಿ ನನಗೆ ಮದುವೆಯಾಗುವ ಭಾಗ್ಯ ಸಿಕ್ಕರೆ, ನಾನು ಖಂಡಿತವಾಗಿಯೂ ಮದುವೆಯಾಗುತ್ತೇನೆ. ನಾನು ನನ್ನ ಹಣೆಬರಹವನ್ನು ಮಾತ್ರ ನಂಬುತ್ತೇನೆ ಎಂದು ಮುಮೈತ್ ಖಾನ್ ಹೇಳಿದ್ದರು.(ಏಜೆನ್ಸೀಸ್​​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net