ಈ ಪಾಪಿ ಧರ್ಮಗುರುವಿಗೆ ಇದ್ದರು 1000 ಗರ್ಲ್​ಫ್ರೆಂಡ್ಸ್​..!

1000 gf 2
Published on

ನವದೆಹಲಿ: ಈಗಿನ ಕಾಲದಲ್ಲಿ ಮದುವೆಗೆ ಹುಡುಗಿನೇ ಸಿಗಲ್ಲ ಎನ್ನುವ ಪರಿಸ್ಥಿತಿ. ಗರ್ಲ್​ಫ್ರೆಂಡ್​ ಅನೇಕರಿಗೆ ಕನಸಿನ ಮಾತು. ಆದರೆ ಇಲ್ಲೊಬ್ಬ ಮುಸ್ಲಿಂ ಧರ್ಮಗುರು ಬರೋಬ್ಬರಿ ಒಂದು ಸಾವಿರ ಗರ್ಲ್‌ಫ್ರೆಂಡ್ಸ್ ಇಟ್ಟುಕೊಂಡಿದ್ದಾನೆ! ಇನ್ನು ಆಶ್ಚರ್ಯಕರ ವಿಷಯ ಏನಪ್ಪಾ ಎಂದರೆ ಅವರೆಲ್ಲರೂ ಬಿಕಿನಿ ಬೆಡಗಿಯರು. ಈ ಬೆಡಗಿಯರೇ ಇವನಿಗೆ ಶಕ್ತಿ ನೀಡುವ ಟಾನಿಕ್ ಅಂತೆ!

ಟರ್ಕಿ ದೇಶದ ಈ ಭೂಪನ ಮೇಲೆ ಪೊಲೀಸ್‌ ದಾಳಿ ನಡೆಸಿತ್ತು. ಈ ವೇಳೆ ಮುಸ್ಲಿಂ ಧರ್ಮಗುರುವಿನ ಮುಖವಾಡ ಬಯಲಾಗಿದೆ. ಅಂದ ಹಾಗೆ ಈ ಧರ್ಮಗುರುವಿನ ಹೆಸರು ಅದ್ವಾನ್ ಓಕ್ಟರ್ ಅಲಿಯಾಸ್ ಹಾರೂನ್ ಯಾಹ್ಯಾ. ಇನ್ನೂ ಮಜಾ ಏನೆಂದರೆ ಈತನ ಪ್ರಾಯ 66! ಇಂತಹ ಭೂಪ ಇರುವುದೇ ಒಂದು ಸುದ್ದಿಯಾದರೆ ಆತನಿಗೆ ಟರ್ಕಿಯ ಹೈಕೋರ್ಟ್​ ನೀಡಿರುವ ಶಿಕ್ಷೆ ಇನ್ನೊಂದು ಸುದ್ದಿ.

ಯಾವುದೇ ಅಪರಾಧ ಇರಲಿ, ಭಾರತದಲ್ಲಿ ಗರಿಷ್ಠ ಎಂದರೆ ಜೀವಾವಧಿ ಶಿಕ್ಷೆ ಇಲ್ಲವೇ ಗಲ್ಲುಶಿಕ್ಷೆ ನೀಡುವುದನ್ನು ನಾವು ನೋಡಿದ್ದೇವೆ. ಆದರೇ ಈತನಿಗೆ ಟರ್ಕಿ ದೇಶದ ಹೈಕೋರ್ಟ್ ಬರೋಬ್ಬರಿ 8,658 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇದನ್ನು ಕೇಳಿ ಜನರೂ ಶಾಕ್ ಆಗಿದ್ದಾರೆ. ಹಾಗೆಂದು ಈತ ಮಾಡಿರುವ ಅಪರಾಧಗಳು ಒಂದೆರಡಲ್ಲ.

ಈ ಅದ್ವಾನ್‌ ಓಕ್ಟರ್‌ಗೆ ಅದ್ಯಾವ ಚಟವೋ ಗೊತ್ತಿಲ್ಲ. ಇವಿಗೆ ಸುತ್ತಲೂ ಬಿಕಿನಿ ಧರಿಸಿದ ಯುವತಿಯರೇ ಇರಬೇಕಂತೆ. ಯಾವಾಗಲೂ ಈ ಬಿಕಿನಿ ಧರಿಸಿದ ಯುವತಿಯರು ಈತನ ಮುಂದೆ ಡ್ಯಾನ್ಸ್ ಮಾಡುತ್ತಿರಬೇಕಂತೆ. ಈತ ಬರೀ ಈ ಕೆಲಸಕ್ಕಾಗಿಯೇ ಬರೋಬ್ಬರಿ ಒಂದು ಸಾವಿರ ಯುವತಿಯರನ್ನು ತನ್ನ ಕಂಪನಿಯಲ್ಲಿ ನೇಮಿಸಿಕೊಂಡಿದ್ದ. ಅಷ್ಟೇ ಸಾಲದ್ದಕ್ಕೆ ಈತ ಧರ್ಮ ಗುರುವಿನ ಪೋಸ್ ಕೂಡ ನೀಡಿದ್ದ.

ಈ ಅಧರ್ಮಗುರು ಟರ್ಕಿಯಲ್ಲಿ ತನ್ನದೇ ಮಾಲೀಕತ್ವದ ಟಿ.ವಿ. ಚಾನಲ್‌ ಅನ್ನು ಕೂಡ ಹೊಂದಿದ್ದಾನೆ. ತನ್ನ ಟಿ.ವಿ. ಚಾನಲ್‌ನಲ್ಲಿ ಕುಳಿತು ಧಾರ್ಮಿಕ ಉಪದೇಶವನ್ನು ಜನರಿಗೆ ನೀಡುತ್ತಿದ್ದ. ಚಾನಲ್​ನಲ್ಲಿ ಪಾಪ್ ಮ್ಯೂಸಿಕ್ ಗೆ ಡ್ಯಾನ್ಸ್ ಮಾಡುವ ಮಹಿಳೆಯರ ಜೊತೆಗೆ ಧಾರ್ಮಿಕ ಚರ್ಚೆಗಳನ್ನೂ ಈತ ಮಾಡುತ್ತಿದ್ದ. ಈತನ ವೈಭವೋಪೇತ ಜೀವನ ಇಡೀ ಟರ್ಕಿಯಲ್ಲೇ ಫೇಮಸ್​.

ಈ ಮುಸ್ಲಿಂ ಧರ್ಮಗುರು ಅದ್ವಾನ್, ಓರ್ವ ವಿಕೃತ ಕಾಮಿ. ಅನೇಕ ಯುವತಿಯರು, ಎಳೆಯ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಯುವತಿಯರನ್ನು ತನ್ನ ಲೈಂಗಿಕ ಗುಲಾಮರಂತೆ ನಡೆಸಿಕೊಂಡಿದ್ದಾನೆ. ಈತನ ಲೈಂಗಿಕ ದೌರ್ಜನ್ಯದ ಅಟ್ಟಹಾಸಕ್ಕೆ ಕೊನೆಯೇ ಇರಲಿಲ್ಲ. ಅಪ್ರಾಪ್ತರ ಮೇಲೂ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ಈತನಿಗೆ ಅತ್ಯಾಚಾರ, ಲೈಂಗಿಕ ಕಿರುಕುಳ, ಲೈಂಗಿಕ ದೌರ್ಜನ್ಯ ಮಾಮೂಲಿಯಾಗಿಬಿಟ್ಟಿತ್ತು. ಈತನ ಸುತ್ತ ಇರುವ ಯುವತಿಯರನ್ನು ಈತ ಬೆಕ್ಕಿನ ಮರಿಗಳು ಅಂತ ಕರೆಯುತ್ತಿದ್ದನಂತೆ.
ಈತನಿಗೆ ಸುತ್ತಲಿರುವ ಯುವತಿಯರೆಲ್ಲಾ ಒಂದೇ ರೀತಿ ಕಾಣಬೇಕಾಗಿತ್ತು. ಅದಕ್ಕಾಗಿ ಎಲ್ಲಾ ಯುವತಿಯರಿಗೆ ಕಾಸ್ಕ್‌ಲೆರ್ ಸರ್ಜರಿ ಕೂಡ ಮಾಡಿಸಿದ್ದ! ಈತ ಯುವತಿಯರ ಮೇಲೆ ರೇಪ್ ನಡೆಸಿದ ಮೇಲೆ ಗರ್ಭ ನಿರೋಧಕ ಮಾತ್ರೆ ತೆಗೆದುಕೊಳ್ಳುವಂತೆ ಬಲವಂತ ಮಾಡುತ್ತಿದ್ದ.

1994ರಲ್ಲಿ ಟರ್ಕಿಯ ಸೌಂದರ್ಯ ಸ್ಪರ್ಧೆ ವಿಜೇತೆ ಮಾಡೆಲ್ ಅನ್ನು ತನ್ನ ಕಂಪನಿಗೆ ನೇಮಿಸಿಕೊಂಡಿದ್ದ. ಬಳಿಕ ಮಾಡೆಲ್ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ಎಸಗಿದ್ದ. ಇದರಿಂದ ನೊಂದು ಆಕೆ ಈತನ ಕಂಪೆನಿಯನ್ನು ತೊರೆದಿದ್ದಳು. ಕಂಪೆನಿ ತೊರೆದಿದ್ದಕ್ಕೆ ಪ್ರತೀಕಾರವಾಗಿ ಈ ಭೂಪ ಆಕೆಯ ಮೇಲೆ 300ಕ್ಕೂ ಹೆಚ್ಚು ಮಾನನಷ್ಟ ಮೊಕದ್ದರು ದಾಖಲಿಸಿ ಕಿರುಕುಳ ನೀಡಿದ್ದ.

ಈತನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದವರು ಪೊಲೀಸರಿಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಈತನ ವಿರುದ್ಧ ಕೇಸ್ ದಾಖಲಿಸಿಕೊಂಡ ಪೊಲೀಸರು ಈತನ ಮನೆ, ಕಚೇರಿ, ಟಿವಿ ಚಾನಲ್ ಮೇಲೆ ದಾಳಿ ನಡೆಸಿದ್ದರು. ಆಗ ಪೊಲೀಸರಿಗೆ ಶಾಕ್ ಆಗಿತ್ತು. ಈತನ ಮನೆಯಲ್ಲಿ ಒಂದೆರಡಲ್ಲ, 69 ಸಾವಿರ ಗರ್ಭ ನಿರೋಧಕ ಮಾತ್ರೆಗಳು ಪತ್ತೆಯಾಗಿದ್ದವು!

ಭಯೋತ್ಪಾದಕ ಸಂಘಟನೆಯನ್ನು ಸಹ ಕಟ್ಟಿದ್ದ ಈತ ಹೆಣ್​ಮಕ್ಕಳಿಂದ ಸ್ವಾತಂತ್ರ್ಯ ಮತ್ತು ಶಿಕ್ಷಣದ ಹಕ್ಕನ್ನು ಕಸಿದುಕೊಂಡಿದ್ದು, ಯುವತಿಯರಿಗೆ ಹಿಂಸೆ ನೀಡುತ್ತಿದ್ದ, ಈ ಅಧರ್ಮಗುರುವಿನ ವಿರುದ್ಧ ದೊಡ್ಡ ಆರೋಪಗಳ ಪಟ್ಟಿಯೇ ಇತ್ತು. ಕಳೆದ ವರ್ಷ ಈತನ ವಿರುದ್ಧದ ಆರೋಪಗಳ ಬಗ್ಗೆ ವಿಚಾರಣೆ ನಡೆಸಿದಾಗ ಟರ್ಕಿಯ ಇಸ್ತಾಂಬುಲ್‌ನ ಕೆಳ ನ್ಯಾಯಾಲಯಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳು ಸಿಕ್ಕಿದ್ದವು. ಇವುಗಳ ಆಧಾರದ ಮೇಲೆ ಇಸ್ತಾಂಬುಲ್ ಕೆಳ ನ್ಯಾಯಾಲಯ ಈತನಿಗೆ 1,075 ವರ್ಷ ಜೈಲು ಶಿಕ್ತ ವಿಧಿಸಿತ್ತು. ಆದರೆ, ಈಗ ಟರ್ಕಿಯ ಹೈಕೋರ್ಟ್, ಕೆಳ ನ್ಯಾಯಾಲಯದ ತೀರ್ಪುನ್ನು ರದ್ದುಪಡಿಸಿ ಅದ್ವಾನ್ ಓಕ್ಚರ್ ಗೆ ಬರೋಬ್ಬರಿ 8,658 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಈತನ ಜೊತೆಗೆ 13 ಸಹಚರರಿಗೂ ಕೋರ್ಟ್‌ ಜೈಲುಶಿಕ್ಷೆ ವಿಧಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net