ಮುಕ್ಕಾಟಿರ ದೇವಣಗೇರಿ ಚಾಂಪಿಯನ್

16 gkp .3
ಮುಕ್ಕಾಟಿರ(ಬೇತ್ರಿ) ಕುಟುಂಬವು ಗೋಣಿಕೊಪ್ಪ ಸಮೀಪದ ಅರುವತ್ತೋಕ್ಲು ಗ್ರಾಮದ ಅತ್ಲೋನ್ ಟರ್ಫ್ ಮೈದಾನದಲ್ಲಿ ಆಯೋಜಿಸಿದ್ದ ಹೊನಲು ಬೆಳಕಿನ ಪಂದ್ಯಾವಳಿಯಲ್ಲಿ ಚಾಂಪಿಯನ್‌ಷಿಪ್ ಪಡೆದ ಮುಕ್ಕಾಟೀರ ದೇವಣಗೇರಿ ತಂಡ.
Published on

ಗೋಣಿಕೊಪ್ಪಲು : ಮುಕ್ಕಾಟಿರ(ಬೇತ್ರಿ) ಕುಟುಂಬವು ಗೋಣಿಕೊಪ್ಪ ಸಮೀಪದ ಅರುವತ್ತೋಕ್ಲು ಗ್ರಾಮದ ಅತ್ಲೋನ್ ಟರ್ಫ್ ಮೈದಾನದಲ್ಲಿ ಆಯೋಜಿಸಿದ್ದ ಹೊನಲು ಬೆಳಕಿನ ಪಂದ್ಯಾವಳಿಯಲ್ಲಿ ಮುಕ್ಕಾಟಿರ ದೇವಣಗೇರಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಕಳ್ಳಿಚಂಡ ತಂಡ ರನ್ನರ್ ಅಪ್ ಪ್ರಶಸ್ತಿ ಪಡೆಯಿತು. 5 ದಿನಗಳಿಂದ ನಾಕೌಟ್ ಮಾದರಿಯಲ್ಲಿ ಕೊಡವ ಕೌಟುಂಬಿಕ ಫುಟ್ಬಾಲ್ ಪಂದ್ಯಾವಳಿಯು ನಡೆಯಿತು. ವಿವಿಧ ಭಾಗದಿಂದ 73 ತಂಡಗಳು ಭಾಗವಹಿಸಿದ್ದವು. ಸೋಮವಾರ ಸಂಜೆ ಟರ್ಫ್ ಮೈದಾನದಲ್ಲಿ ಹೊನಲು ಬೆಳಕಿನ ನಡುವೆ ಫೈನಲ್ಸ್ ನಡೆಯಿತು.

ಶಾಸಕ ಎ.ಎಸ್.ಪೊನ್ನಣ್ಣ ಅಂತಿಮ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ಕ್ರೀಡೆಗೆ ಉತ್ತಮ ಅವಕಾಶಗಳು ದೊರೆಯುತ್ತಿದೆ. ಇವುಗಳನ್ನು ಯುವ ಸಮುದಾಯ ಉತ್ತಮ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು. ಮುಕ್ಕಾಟೀರ ಬೇತ್ರಿ ಕುಟುಂಬವು ಆಯೋಜಿಸಿರುವ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾವಳಿ ಅತ್ಯಂತ ಉತ್ತಮವಾಗಿ ಮೂಡಿ ಬಂದಿದೆ. ದಕ್ಷಿಣ ಕೊಡಗಿನಲ್ಲಿ ಯಾವುದೇ ಕ್ರೀಡೆ ನಡೆದರೂ ಈ ಭಾಗದ ಸಾವಿರಾರು ಕ್ರೀಡಾಭಿಮಾನಿಗಳು ಆಗಮಿಸಿ ಪಂದ್ಯಾವಳಿ ಯಶಸ್ವಿಗೊಳಿಸುತ್ತಾರೆ. ಟರ್ಫ್ ಮೈದಾನಕ್ಕೆ ಒಲವು ಹೆಚ್ಚಾಗುತ್ತಿರುವುದರಿಂದ ಮುಂದಿನ ದಿನದಲ್ಲಿ ದಕ್ಷಿಣ ಕೊಡಗಿನಲ್ಲಿ ಗುಣಮಟ್ಟದ ಟರ್ಫ್ ಮೈದಾನ ನಿರ್ಮಾಣ ಮಾಡುವ ಮೂಲಕ ಕ್ರೀಡೆಗೆ ಮತ್ತಷ್ಟು ಪ್ರೋತ್ಸಾಹ ನೀಡುವುದಾಗಿ ಭರವಸೆ ನೀಡಿದರು.

ಕೊಡವ ಕೌಟುಂಬಿಕ ಪಂದ್ಯಾವಳಿಯ ಅಧ್ಯಕ್ಷ ಮುಕ್ಕಾಟಿರ ಮಧುದೇವಯ್ಯ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಹಾಗೂ ದಾನಿಗಳಾದ ಮಾಚೆಟ್ಟಿರ ಜನಿತ್ ಅಯ್ಯಪ್ಪ, ಬ್ಯಾಡ್ಮಿಂಟನ್ ರಾಷ್ಟೀಯ ಆಟಗಾರ್ತಿ ಪೊನ್ನಚೆಟ್ಟಿರ ಅಶ್ವಿನಿ ಪೊನ್ನಪ್ಪ, ಮುಕ್ಕಾಟಿರ ಕುಟುಂಬದ ನಿರ್ದೇಶಕ ಉತ್ತಮ್ ಬೋಪಣ್ಣ, ವಿವಿಧ ಪದಾಧಿಕಾರಿಗಳಾದ ಮುಕ್ಕಾಟಿರ ದೃಶ್ಯಬೋಪಣ್ಣ, ದಿವಿನ್ ತಿಮ್ಮಯ್ಯ, ರವಿಚಿಯಣ್ಣ, ಕ್ರೀಡಾ ಸಂಚಾಲಕರಾದ ಸತ್ಯ ಪೆಮ್ಮಯ್ಯ, ಮಣವಟ್ಟಿರ ಮಧುಬೋಪಣ್ಣ, ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷರಾದ ಪಾಂಡಂಡ ಬೋಪಣ್ಣ, ಮುದ್ದಂಡ ಹಾಕಿ ಪಂದ್ಯಾವಳಿ ಅಧ್ಯಕ್ಷ ಮುದ್ದಂಡ ಸುಬ್ಬಯ್ಯ, ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net