ಜಿಲ್ಲಾದ್ಯಂತ ಶ್ರದ್ಧಾ ಭಕ್ತಿಯಿಂದ ಮೋಹರಂ ಆಚರಣೆ

6-RNR-12
Published on

ಹಾವೇರಿ: ಹಿಂದು&ಮುಸ್ಲಿಂಮರ ಭಾವೈಕ್ಯೆತೆಯ ಪ್ರತಿಕವಾದ ಮೊಹರಂ ಹಬ್ಬವನ್ನು ನಗರ ಸೇರಿ ಜಿಲ್ಲಾದ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ತಾಲೂಕಿನ ಟಾಟಾ ಮಣ್ಣೂರ ಗ್ರಾಮದಲ್ಲಿ ಹಿಂದು&-ಮುಸ್ಲಿಂ ಬಾಂಧವರು ಬೇಧ ಭಾವವಿಲ್ಲದೆ ಸಹಬಾಳ್ವೆಯಿಂದ ಎಲ್ಲರೂ ಒಗ್ಗಟ್ಟಾಗಿ ಸಂಭ್ರಮದಿಂದ ಮೊಹರಂ ಹಬ್ಬವನ್ನು ಆಚರಿಸಿ ಭಾವೈಕ್ಯತೆಗೆ ಸಾಕ್ಷಿಯಾದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಬೆಳಗ್ಗೆ ವಿವಿಧ ಹೂವುಗಳಿಂದ ಅಲಂಕರಿಸಿದ ಡೋಲಿ ಹಾಗೂ ಪಂಜಾಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಗ್ರಾಮದ ಹಿರಿಯರು ಹಾಗೂ ಯುವಕರು, ಮಕ್ಕಳು ಮೆರವಣಿಗೆ ಸಂದರ್ಭದಲ್ಲಿ ಅಲಾಬಿ ಪದಗಳನ್ನು ಹಾಡುತ್ತ ಹೆಜ್ಜೆ ಹಾಕಿ ಸಂಭ್ರ್ರಮಿಸಿದರು. ಗ್ರಾಮದ ಮಹಿಳೆಯರು ಹಾಗೂ ಮಕ್ಕಳು ಮನೆಯ ಎದುರು ಡೋಲಿ ಬಂದ ಸಂದರ್ಭದಲ್ಲಿ ಪೂಜೆ ಸಲ್ಲಿಸಿ ಭಾವೈಕ್ಯತೆ ಮೆರೆದರು.

ಇನ್ನೂ ಕೆಲವರು ಪಂಜಾಗಳನ್ನು ಹಿಡಿದು ಬಂದ ಮಕ್ಕಳಿಗೆ ನಮಸ್ಕರಿಸುವ ದೃಶ್ಯ ಕಂಡು ಬಂದಿತು. ಮೆರವಣಿಗೆ ಸಂದರ್ಭದಲ್ಲಿ ಮುಸ್ಲಿಂ ಬಾಂಧವರು ನೆರದಿದ್ದ ಸಾರ್ವಜನಿಕರಿಗೆ ಪಾನಕ ವಿತರಿಸಿದರು. ಮೊಹರಂ ಹಬ್ಬದ ನಿಮಿತ್ತ ಕೆಲವರು ಹುಲಿ ವೇಷಧರಿಸಿ ಹೆಜ್ಜೆ ಹಾಕಿ ಭಕ್ತಿ ಪ್ರದಶಿರ್ಸಿ ಗಮನ ಸೆಳೆದರು. ಪಂಜಾಗಳನ್ನು ಹಿಡಿದ ಕೆಲವರು ಬೆಂಕಿ ಹಾಯ್ದು ಗಮನ ಸೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net