ಕೋಟೆ ಪಕ್ಕದ ಡಬ್ಬಿ ಅಂಗಡಿ ತೆರವಿಗೆ ಸಹಾಯಕ ಆಯುಕ್ತರ ಸೂಚನೆ

05032021 Mudgal Dabba shop shifted
Published on

ಮುದಗಲ್: ಇಲ್ಲಿನ ಐತಿಹಾಸಿಕ ಕೋಟೆ ಪಕ್ಕದ ಬಾಗಲಕೋಟೆ ರಸ್ತೆಗೆ ಹೊಂದಿಕೊಂಡು ಅನಧಿಕೃತವಾಗಿ ನಿರ್ಮಿಸಿರುವ ಡಬ್ಬಿ ಅಂಗಡಿಗಳನ್ನು ತೆರವುಗೊಳಿಸಲು ಲಿಂಗಸುಗೂರು ಸಹಾಯಕ ಆಯುಕ್ತ ರಾಜಶೇಖರ್ ಡಂಬಳ ಸೂಚಿಸಿದರು.

ಸ್ಥಳ ಪರಿಶೀಲನೆಗೆ ಶುಕ್ರವಾರ ಬೆಳಗ್ಗೆ ಆಗಮಿಸಿ, ಪುರಸಭೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಅವರು, ಪರವಾನಗಿ ಇಲ್ಲದೆ ಹಾಕಿದ ಅಂಗಡಿಗಳನ್ನು ಕೂಡಲೇ ತೆರವುಗೊಳಿಸಿ ಎಂದು ಪಿಎಸ್‌ಐ ಡಾಕೇಶ, ಪುರಸಭೆ ಸಿಬ್ಬಂದಿ ಜಗನ್ನಾಥ ಜೋಶಿಗೆ ಆದೇಶಿಸಿದರು. ಪುರಸಭೆ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net