

ಮುದೇನೂರು: ಸಮೀಪದ ಹೊನಗಡ್ಡಿ ಗ್ರಾಮದಲ್ಲಿ ಛಟ್ಟಿ ಅಮಾವಾಸ್ಯೆ ನಿಮಿತ್ತ ಶ್ರೀ ಮಾರುತೇಶ್ವರ ಮೂರ್ತಿಗೆ ಮಂಗಳವಾರ ರಾತ್ರಿ ಭಕ್ತರು ಎಲೆ ಚಟ್ಟಿ ಕಟ್ಟಿಸಿದರು. ದೇವಸ್ಥಾನದಲ್ಲಿ ರಾತ್ರಿಯಿಡಿ ಭಜನೆ ನಡೆಸಲಾಯಿತು. ನಸುಕಿನ ವೇಳೆ ಶ್ರೀಸ್ವಾಮಿಗೆ ಅಭಿಷೇಕ ಮಾಡಲಾಯಿತು. 101ಕ್ಕೂ ಅಧಿಕ ದೇವಾಲಯದಲ್ಲಿ ದೀಪೋತ್ಸವ ನೆರವೇರಿಸಲಾಯಿತು. ದೇವಸ್ಥಾನದ ಅರ್ಚಕರು, ಭಜನಾ ಮಂಡಳಿಯವರು, ಗ್ರಾಮದ ಮುಖಂಡರು ಪಾಲ್ಗೊಂಡಿದ್ದರು.