ಯಾರ ಒತ್ತಡವೂ ಇರಲಿಲ್ಲ: ಸಂಸದ ಕುಮಾರ ನಾಯಕ ಹೇಳಿಕೆ

IMG-20241024-WA0010
Published on

ರಾಯಚೂರು: ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಮುಡಾ ನಿವೇಶನ ಹಂಚಿಕೆಯನ್ನು ನಿಯಮ ಬದ್ಧವಾಗಿಯೇ ಮಾಡಲಾಗಿದೆ. ನನ್ನಿಂದ ಯಾವ ತಪ್ಪುಗಳೂ ಆಗಿಲ್ಲ ಎಂದು ಸಂಸದ ಜಿ.ಕುಮಾರ ನಾಯಕ ಹೇಳಿದರು.

ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿ, ಮುಡಾ ನಿವೇಶನ ಹಂಚಿಕೆಯಲ್ಲಿ ಆಕ್ರಮವಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 2002-05ರ ಅವಧಿಯಲ್ಲಿ ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ ಯಾರ ಒತ್ತಡವೂ ಇರಲಿಲ್ಲ. ನಿವೇಶನಗಳನ್ನು ಸ್ಥಳ ಪರಿಶೀಲನೆ ನಡೆಸಿ ನಿಯಮ ಬದ್ದವಾಗಿಯೇ ಹಂಚಿಕೆ ಮಾಡಲಾಗಿದೆ. ನಿಯಮ ಮೀರಿ ಯಾವ ಕೆಲಸವಾಗಿಲ್ಲ ಎಂದರು.

1997-98 ರಲ್ಲಿ ನಿವೇಶನಗಳ ನೋಟಿಫಿಕೇಷನ್ ಆಗಿದೆ. ಅಂತಿಮ ನೋಟಿಫಿಕೇಷನ್ ಆದ ನಂತರ 45 ದಿನಗಳ ಆದ ಮೇಲೆ ಡಿ-ನೋಟಿಫಿಕೇಷನ್ ಆಗಿದೆ. ಡಿ-ನೋಟಿಫಿಕೇಷನ ಬಳಿಕ ಭೂಮಿ ಒಡೆತನದ ರೈತನಿಗೆ ಭೂಮಿ ಮಾಲೀಕತ್ವ ಹೋಗುತ್ತದೆ ಈ ರೀತಿಯ ಪ್ರಕ್ರಿಯೆ ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳು ಮಾಡುತ್ತಾರೆ.

ಇಲ್ಲಸಲ್ಲದ ಆರೋಪಗಳಲ್ಲಿ ಹುರುಳಿಲ್ಲ. ಲೋಕಾಯುಕ್ತರ ವಿಚಾರಣೆಗೆ ಹಾಜರಾಗಿದ್ದೇನೆ ಅವರು ಕೇಳುವ ಎಲ್ಲ ಪ್ರಶ್ನೆಗಳಿಗೆ ವಿವರ ಸಹಿತವಾಗಿ ಉತ್ತರಿಸಲಾಗಿದೆ ಎಂದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಬಳ್ಳಾರಿ ಮತ್ತು ರಾಯಚೂರು ಲೋಕಸಭೆ ಚುನಾವಣೆಗೆ ಖರ್ಚು ಮಾಡಲಾಗಿದೆ ಎಂಬ ಆರೋಪವನ್ನು ಬಿಜೆಪಿಯವರು ಮಾಡುತ್ತಿದ್ದು, ಬುಡಾ ಇಲ್ಲದೇ ನಿರಾಧಾರವಾಗಿ ಹೇಳಿಕೆಗಳನ್ನು ನಿಡುವುದು ಸರಿಯಲ್ಲ. ಕೇಂದ್ರ ತನಿಖಾ ಸಂಸ್ಥೆಗಳು ಈ ಬಗ್ಗೆ ತನಿಖೆ ಮಾಡುತ್ತಿದ್ದಾರೆ. ಇಲ್ಲಸಲ್ಲದ ಆರೋಪಗಳು ಶೋಚನೀಯ ಮತ್ತು ಅಮಾನವೀವಾಗಿವೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net