ಮುಡಾ ಪ್ರಕರಣ: ಸಿಎಂ ಪತ್ನಿ ಪಾರ್ವತಿಗೆ ರಿಲೀಫ್ | Muda

dk (17) (1)
Published on

MUDA case: ಮುಡಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಚಿವ ಭೈರತಿ ಸುರೇಶ್​ ಮತ್ತು ಸಿಎಂ ಪತ್ನಿ ಪಾರ್ವತಿಗೆ ತನಿಖೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ(ಇಡಿ) ನೀಡಿದ್ದ ಸಮನ್ಸ್​ ತಾತ್ಕಾಲಿಕವಾಗಿ ರದ್ದು ಗೊಳಿಸುವಂತೆ ಹೈಕೋರ್ಟ್​ ಸೋಮವಾರ ಆದೇಶ ನೀಡಿದೆ.

ಸಿಎಂ ಪತ್ನಿ ಮತ್ತು ಸಚಿವ ಭೈರತಿ ಸುರೇಶ್​ ಫೆ.10ರ ವರೆಗೂ ಇಡಿ ತನಿಖೆಗೆ ಹಾಜರಾಗುವಂತಿಲ್ಲ ಎಂದು ಧಾರವಾಡ ಹೈಕೋರ್ಟ್ ಹೇಳಿದೆ.

ಮುಡಾ ಪ್ರಕರಣದ ತನಿಖೆ ಎದುರಿಸುತ್ತಿರುವ ಸಿಎಂ ಸಿದ್ದರಾಮಯ್ಯರಿಗೆ ಲೋಕಾಯುಕ್ತ ಪೊಲೀಸರು ಕ್ಲೀನ್‌ಚಿಟ್ ನೀಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದರ ನಡುವೆಯೇ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂಬ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಅವರ ಅರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್ ಆದೇಶವನ್ನು ಇಂದು(ಸೋಮವಾರ) ಕಾಯ್ದಿರಿಸಿದ ಬೆನ್ನಲ್ಲೆ ಇದೀಗ ಇಡಿ ನೀಡಿದ್ದ ಸಮನ್ಸ್​ ತಾತ್ಕಾಲಿಕವಾಗಿ ರದ್ದು ಗೊಳಿಸುವಂತೆ ಮತ್ತೊಂದು ಆದೇಶ ನೀಡಿ, ಮುಂದಿನ ಫೆ.10ರವಗೆ ತೀರ್ಪು ಕಾಯ್ದಿರಿಸಿದೆ.

ಈ ಆದೇಶದ ಹಿನ್ನೆಲೆ ಸಿಎಂ ಪತ್ನಿ ಮತ್ತು ಸಚಿವ ಭೈರತಿ ಸುರೇಶ್​ಗೆ ಸದ್ಯಕ್ಕೆ ಬಿಗ್​ ರಿಲೀಫ್​ ಸಿಕ್ಕಾಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net