ಎಂಎಸ್‌ಐಎಲ್ ಇ-ಮೇಲ್ ಹ್ಯಾಕ್

cyber crime
Published on

ಬೆಂಗಳೂರು: ಮೈಸೂರ್ ಸೇಲ್ಸ್ ಆ್ಯಂಡ್ ಇಂಟರ್‌ನ್ಯಾಷನಲ್ ಲಿಮಿಟೆಡ್ (ಎಂಎಸ್‌ಐಎಲ್) ಇ-ಮೇಲ್ ಹ್ಯಾಕ್ ಮಾಡಿದ ಸೈಬರ್ ಕಳ್ಳರು 17 ವಿಮಾನ ಟಿಕೆಟ್ ಬುಕಿಂಗ್ ಮಾಡಿ 2.87 ಲಕ್ಷ ರೂ. ವಂಚಿಸಿದ್ದಾರೆ.

ಕನ್ಸಿಂಗ್‌ಹ್ಯಾಂ ರಸ್ತೆ ಎಂಎಸ್‌ಐಎಲ್ ಪ್ರಧಾನ ಕಚೇರಿ ಅಧಿಕಾರಿ ಕೆ. ರವಿಕುಮಾರ್ ಈ ಕುರಿತು ಕೇಂದ್ರ ಸಿಇಎನ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಡಿ.17 ಅಪರಿಚಿತ ವ್ಯಕ್ತಿ, ಎಂಎಸ್‌ಐಎಲ್ ಕಂಪನಿಯ ಸ್ಪೆ ೈೀಸ್‌ಜೆಟ್ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಅನ್ನು ಹ್ಯಾಕ್ ಮಾಡಿ ಅಧಿಕಾರಿಗಳ ಗಮನಕ್ಕೆ ಬಾರದಂತೆ 17 ವಿಮಾನ ಟಿಕೆಟ್ ಬುಕ್ ಮಾಡಿದ್ದರು. ಈ ಪೈಕಿ 11 ಪ್ರಯಾಣಿಕರು ಮುಂಬೈಯಿಂದ ದುಬೈಗೆ ಹಾಗೂ ಮೂವರು ದುಬೈಯಿಂದ ಮುಂಬೈಗೆ ಪ್ರಯಾಣ ಮಾಡಿದ್ದಾರೆ. ವಿಷಯ ತಿಳಿದು ನೋಡಿ ಎಚ್ಚೆತ್ತುಕೊಂಡು ದೆಹಲಿಯಿಂದ ದುಬೈಗೆ 3 ಟಿಕೆಟ್‌ಗಳನ್ನು ಬಕಿಂಗ್ ರದ್ದು ಮಾಡಲಾಗಿದೆ. ಆದರೂ, ಸೈಬರ್ ಕಳ್ಳರಿಂದ 2.87 ಲಕ್ಷ ರೂ. ನಷ್ಟವಾಗಿದೆ. ಆರೋಪಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ತೆಗೆದುಕೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.

ಇದೀಗ ಸ್ಪೆ ಸ್‌ಜೆಟ್ ಮತ್ತು ವಿಮಾನಯಾನ ಇಲಾಖೆಯಿಂದ ಸೈಬರ್ ಕಳ್ಳರು ಬುಕಿಂಗ್ ಮಾಡಿದ್ದ ಟಿಕೆಟ್ ಬಳಸಿಕೊಂಡು ಮುಂಬೈಯಿಂದ ದುಬೈಗೆ ಪ್ರಯಾಣಿಸಿದ 11 ಮಂದಿ ವಿವರ ಪಡೆದು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net