'ಮಿಸೆಸ್​ ಇಂಡಿಯಾ' 2022 ಪ್ರಶಸ್ತಿ ಮುಡಿಗೇರಿಸಿಕೊಂಡ ನಿವೇದಿತಾ ಗೌಡ

1306994
Published on

ಕನ್ನಡದ ಹೆಸರಾಂತ ರ್ಯಾಪ್ ಗಾಯಕ ಚಂದನ್ ಶೆಟ್ಟಿ ಪತ್ನಿ ನಿವೇದಿತಾ ಗೌಡ ಮಿಸೆಸ್​ ಇಂಡಿಯಾ 2022 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಮಿಸೆಸ್​ ಇಂಡಿಯಾ ಆಗುವುದು ಸುಲಭದ ಮಾತಲ್ಲ. ಅದಕ್ಕೆ ಹಲವು ತಯಾರಿಯ ಅಗತ್ಯವಿದೆ. ನಿವೇದಿತಾ ಗೌಡ ಸಹ ಈ ಸ್ಪರ್ಧೆಗೆ ಅಗತ್ಯವಾದ ತಯಾರಿ ಮಾಡಿಕೊಂಡಿದ್ದಾರೆ. ಈಗ ಅದಕ್ಕೆ ಪ್ರತಿಫಲ ಸಿಕ್ಕಿದೆ. ಮಿಸೆಸ್ ಇಂಡಿಯಾ ಇಂಕ್‍ನ ಪೀಪಲ್ಸ್ ಚಾಯ್ಸ್ 2022ರ ವಿಜೇತರಾಗಿ ನಿವೇದಿತಾ ಗೌಡ ಹೊರಹೊಮ್ಮಿದ್ದಾರೆ.

ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್​ ಮಾಡಿಕೊಂಡಿದ್ದಾರೆ. ಎಲ್ಲರಿಗೂ ಗೊತ್ತಿರುವಂತೆ ನಿವೇದಿತಾ ಗೌಡ ಒಂದು ಯೂಟ್ಯೂಬ್​ ಚಾನೆಲ್​ ಕೂಡ ಹೊಂದಿದ್ದಾರೆ. ಅದರಲ್ಲಿ ಅವರು ಹೋಮ್​ ಟೂರ್, ಬಟ್ಟೆ ಕಲೆಕ್ಷನ್ ಹಾಗೂ ಬ್ಯಾಗ್​ ಕಲೆಕ್ಷನ್​ ಸೇರಿದಂತೆ ಹಲವಾರು ರೀತಿಯ ವಿಡಿಯೋಗಳನ್ನು ಮಾಡಿ ಅಭಿಮಾನಿಗಳ ಜೊತೆ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಈ ಬಾರಿ ಮಿಸೆಸ್​ ಇಂಡಿಯಾಗೆ ಅವರು ಹೇಗೆಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ, ಅವರ ಡಯೆಟ್​ ಏನು ಎಂಬ ಬಗ್ಗೆ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು.

ಈ ಮೊದಲು ಮಿಸೆಸ್​ ಇಂಡಿಯಾ ತಯಾರಿ ಬಗ್ಗೆ ಮಾತನಾಡಿದ್ದ ನಿವೇದಿತಾ, ಮಿಸೆಸ್ ಇಂಡಿಯಾ ಆಗಬೇಕು ಎನ್ನುವುದು ಪ್ರತಿಯೊಬ್ಬರ ಕನಸು. ಇದೀಗ ಅಂಥದ್ದೇ ಕನಸು ಕಂಡಿದ್ದೆ. ಸ್ಪರ್ಧೆಗೆ ನಾನ್ ಸ್ಟಾಪ್ ತಯಾರಿ ಮಾಡಿಕೊಂಡಿದ್ದರು. ಅಲ್ಲದೇ ರೋಲ್ ಮಾಡಲ್‌ ಬಾಲಿವುಡ್ ನಟಿ ಐಶ್ವರ್ಯ ರೈ ಎಂದು ಹೇಳಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net