ವಿಮೆ ಹಣ ದೊರಕಲು ಸಂಸದ ಕಾಗೇರಿ ಶ್ರಮ ಕಾರಣ

sdp Timappa M K
Published on

ಸಿದ್ದಾಪುರ: ಹವಾಮಾನ ಆಧಾರಿತ ಬೆಳೆ ವಿಮೆ ಜಿಲ್ಲೆಯ 35 ಸಾವಿರಕ್ಕೂ ಹೆಚ್ಚು ರೈತ ಫಲಾನುಭವಿಗಳಿಗೆ ಸುಮಾರು 80 ಕೋಟಿ ರೂ.ಗಳಷ್ಟು ಜಮಾ ಆಗಿದ್ದು, ಇದಕ್ಕೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಶ್ರಮವೇ ಕಾರಣವಾಗಿದೆ ಎಂದು ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ತಿಮ್ಮಪ್ಪ ಎಂ.ಕೆ. ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಕೃಷಿ ಸಚಿವ ಶಿವರಾಜ ಸಿಂಗ್ ಚೌಹಾಣ ಅವರ ಗಮನಕ್ಕೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ವಿಶೇಷ ಸಹಕಾರ ಪಡೆದು ವಿಮಾ ಕಂಪನಿಗೆ ಕಟ್ಟುನಿಟ್ಟಿನ ಮೂರು ಆದೇಶಗಳನ್ನು ನೀಡಿಸಿದ್ದರ ಫಲವಾಗಿ ಇಂದು ಅಡಕೆ, ಕಾಳುಮೆಣಸು, ಮಾವು, ಶುಂಠಿ ಬೆಳೆಗಳಿಗೆ ವಿಮಾ ಪರಿಹಾರ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.

ತಾಲೂಕು ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ತೋಟಪ್ಪ ನಾಯ್ಕ, ಗುರುರಾಜ ಶಾನಭಾಗ, ನಂದನ ಬೋರ್ಕರ್, ರವಿಕುಮಾರ ನಾಯ್ಕ, ಸುರೇಶ ನಾಯ್ಕ ಬಾಲಿಕೊಪ್ಪ, ಶ್ರೀಧರ ನಾಯ್ಕ ಮಾವಿನಗುಂಡಿ, ಕೃಷ್ಣಮೂರ್ತಿ ನಾಯ್ಕ ಐಸೂರು, ವಿಜೇತ್ ಗೌಡರ್, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net