ರಾಷ್ಟ್ರಹಿತ ವಿದ್ಯಾರ್ಥಿಗಳ ಚಿಂತನೆಯಾಗಲಿ

8 ಎಸ್ಕೆಪಿ 2 byr
ಶಿಕಾರಿಪುರ ಸರ್ಕಾರಿ ಪ್ರಥಮದರ್ಜೆ ಕಾಲೇಜು ಸಮೀಪ ಸಂಸದ ಬಿ.ವೈ.ರಾಘವೇಂದ್ರ ಸದಸ್ಯತ್ವ ಅಭಿಯಾನ ನಡೆಸಿದರು. ವೀರನ ಗೌಡ, ಜಿಲ್ಲಾ ಕಾರ್ಯದರ್ಶಿ ಪ್ರವೀಣ್ ಬೆಣ್ಣೆ, ಪ್ರಶಾಂತ್ ಸಾಳುಂಕೆ ಇತರರಿದ್ದರು.
Published on

ಶಿಕಾರಿಪುರ: ವಿದ್ಯಾರ್ಥಿಗಳಲ್ಲಿ ಆಲೋಚನಾ ಶಕ್ತಿ ಅದ್ಭುತವಾಗಿರುತ್ತದೆ. ದೇಶದ ಭವಿಷ್ಯದ ಬಗ್ಗೆ ಅವರ ಚಿಂತನೆಗಳು ಅಪೂರ್ವವಾಗಿವೆ. ರಾಷ್ಟ್ರಹಿತ ಅವರ ಕನಸಾಗಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಬಳಿ ಮಂಗಳವಾರ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಅವರು, ಇಂದು ಭಾರತ ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಪಾತ್ರ ವಹಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದರು.
ಬಿಜೆಪಿ ಏಷ್ಯಾದ ಅತಿದೊಡ್ಡ ಪಕ್ಷವಾಗಿದೆ. ರಾಷ್ಟ್ರದ ಅಖಂಡತೆ ಮತ್ತು ಸಮಗ್ರ ರಕ್ಷಣೆ ಪಕ್ಷದ ಸಂಕಲ್ಪವಾಗಿದೆ. ಹೀಗಾಗಿ ಬಿಜೆಪಿ ಸದಸ್ಯತ್ವವನ್ನು ನೀವು ಪಡೆಯಬೇಕು. ರಾಷ್ಟ್ರಸೇವೆಯಲ್ಲಿ ಪಾಲುದಾರರಾಗಬೇಕು ಎಂದು ಮನವಿ ಮಾಡಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಎಲ್.ಬಸವರಾಜ್, ಮಾಜಿ ಅಧ್ಯಕ್ಷ ಚನ್ನವೀರಪ್ಪ, ಶಿವಕುಮಾರ್, ತಾಲೂಕು ಯುವ ಮೋರ್ಚಾ ಅಧ್ಯಕ್ಷ ವೀರನ ಗೌಡ, ಜಿಲ್ಲಾ ಕಾರ್ಯದರ್ಶಿ ಪ್ರವೀಣ್ ಬೆಣ್ಣೆ, ಪ್ರಶಾಂತ್ ಸಾಳುಂಕೆ, ರಾಜು, ಯುವರಾಜ್, ವಿನಯ್ ಗುರುಪ್ರಸಾದ್, ಮಂಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net