ಹಿಂದೆ ಎಲ್ಲೋ ಮಾಡಿದ ಸಂವಹನ, ಪ್ರಸ್ತುತ ವಿದ್ಯಮಾನಕ್ಕೆ ಹತ್ತಿರವಾಗಿದೆ.... : ಸಂಸದ ಅನಂತ ಕುಮಾರ್ ಹೆಗಡೆ ಟ್ವೀಟ್

ananthkumarhegde
Published on

ಬೆಂಗಳೂರು: ಕಳೆದ ವಾರ ಬೆಂಗಳೂರಿನಲ್ಲಿ ನಡೆದ ವೀರ ಸಾವರ್ಕರ್ ಸಂಸ್ಮರಣೆ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟದ ವಿಚಾರವಾಗಿ ಮಾಡಿದ ಭಾಷಣದ ಅಂಶ ವಿವಾದಕ್ಕೀಡಾದ ಸಂಸದ ಅನಂತ ಕುಮಾರ್ ಹೆಗಡೆ ಶುಕ್ರವಾರ ಮತ್ತೆ ಟ್ವೀಟ್ ಮಾಡಿದ್ದು, ಹಿಂದೆ ಎಲ್ಲೋ ಮಾಡಿದ ಸಂವಹನ, ಪ್ರಸ್ತುತ ವಿದ್ಯಮಾನಕ್ಕೆ ಹತ್ತಿರವಾಗಿದೆ.... ಎಂಬ ಶೀರ್ಷಿಕೆಯನ್ನೂ ನೀಡಿ ಗಮನಸೆಳೆದಿದ್ದಾರೆ.

ಆ ಟ್ವೀಟ್ ನಲ್ಲಿ ಜೋಡಿಕೊಂಡಿರುವ ವಿಡಿಯೋದಲ್ಲಿ "ಕೆಲವರು ಹೇಳ್ತಾರೆ ಅನಂತ ಕುಮಾರ್ ವಿವಾದದ ಮಾತುಗಳನ್ನು ಹೇಳ್ತಾರೆ. ನಾನು ಹೇಳಿದರೇನೇ ವಿವಾದವಾಗುತ್ತದೆ...." ಮಾತಿನೊಂದಿಗೆ ವಿವರಣೆ ಮುಂದುವರಿಯುತ್ತದೆ.

ಅನಂತ ಕುಮಾರ್ ಹೆಗಡೆ ಅವರ ಭಾಷಣದ ಅಂಶವನ್ನು ಮುಂದಿಟ್ಟು ಕಾಂಗ್ರೆಸ್​ ನಾಯಕರು ತೀವ್ರವಾಗಿ ಟೀಕಿಸಿದ್ದಲ್ಲದೆ, ಪ್ರಧಾನಿಯವರ ಕ್ಷಮೆಯಾಚನೆಗೂ ಆಗ್ರಹಿಸಿದ್ದರು. ಇದರ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರಿಂದ ಶೋಕಾಸ್ ನೋಟಿಸ್ ಪಡೆದಿದ್ದ ಹೆಗಡೆ, ಮಹಾತ್ಮ ಗಾಂಧಿಯವರನ್ನು ಭಾಷಣದಲ್ಲಿ ಎಲ್ಲಿಯೂ ಉಲ್ಲೇಖಿಸಿಲ್ಲ, ಅವರಿಗೆ ಅವಮಾನಿಸಿಲ್ಲ ಎಂಬ ಸ್ಪಷ್ಟೀಕರಣವನ್ನೂ ಕೊಟ್ಟಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net