Movie Shooting ನಡೆಯುತ್ತಿರುವಾಗಲೇ ಕಾಡಿಗೆ ಓಡಿ ಹೋದ ಆನೆ!

elephant
Published on

ಕೊಚ್ಚಿ: ಸಿನಿಮಾ ಶೂಟಿಂಗ್‌ಗೆ ( Movie Shooting ) ಕಾಡು ಪ್ರಾಣಿಗಳನ್ನು ಬಳಸುವುದನ್ನು ನೋಡುತ್ತಲೇ ಇರುತ್ತೇವೆ. ಈ ನಡುವೆ ಸಿನಿಮಾ ಶೂಟಿಂಗ್‌ಗೆ ಪ್ರಾಣಿಗಳನ್ನು ಬಳಸಿಕೊಳ್ಳುವ ಬಗ್ಗೆ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ VEFEX ಮೂಲಕ ಪ್ರಾಣಿಗಳನ್ನು ಸೃಷ್ಟಿಸಲಾಗುತ್ತಿದೆ. ಆದರೆ ಇತ್ತೀಚೆಗಷ್ಟೇ ಶೂಟಿಂಗ್ ಗೆ ಕರೆತಂದಿದ್ದ ಆನೆಯೊಂದು ಕಾಡಿಗೆ ಓಡಿದೆ.

ಶೂಟಿಂಗ್ ನಡೆಯುತ್ತಿರುವಾಗಲೇ ಕಾಡಿಗೆ ಓಡಿ ಬಂದ ಆನೆ

ವಿಜಯ್ ದೇವರಕೊಂಡ ನಾಯಕನಾಗಿ ನಟಿಸುತ್ತಿರುವ ಚಿತ್ರವೊಂದರ ಚಿತ್ರೀಕರಣ ಎರ್ನಾಕುಲಂನ ಕೋತಮಂಗಲಂನ ಬೂತಥಂಕೆಟ್ಟು ಅರಣ್ಯ ಪ್ರದೇಶದಲ್ಲಿ ಚಿತ್ರೀಕರಿಸಲಾಗುತ್ತಿತ್ತು. ಈ ಸಿನಿಮಾವೊಂದರ ದೃಶ್ಯಕ್ಕಾಗಿ ಆನೆಗಳನ್ನು ತರಲಾಗಿತ್ತು. ಸಿನಿಮಾ ಚಿತ್ರೀಕರಣ ನಡೆಯುತ್ತಲಿರುವಾಗಲೇ ಚಿತ್ರೀಕರಣದ ಸೆಟ್‌ನಲ್ಲಿದ್ದ ಎರಡೂ ಆನೆಗಳ ನಡುವೆ ಘರ್ಷಣೆ ಶುರುವಾಗಿದೆ. ಈ ಘರ್ಷಣೆಯಿಂದ  ಗಾಬರಿಗೊಂಡ ಆನೆ ಕಾಡಿಗೆ ಓಡಿಹೋಗಿದೆ.

ಆದರೆ ಆನೆ ಪತ್ತೆಗೆ ಅಧಿಕಾರಿಗಳು ಹರಸಾಹಸ ಪಟ್ಟರು. ತುಂಡಂ ರೇಂಜ್ ಆಫೀಸರ್ ನೇತೃತ್ವದಲ್ಲಿ 50 ಜನರು ಆನೆಗಾಗಿ ಅರಣ್ಯಕ್ಕೆ ತೆರಳಿ ಹುಡುಕಾಟ ನಡೆಸಿದರು. ಅರಣ್ಯ ಇಲಾಖೆ ಅಧಿಕಾರಿಗಳು, ಆರ್‌ಆರ್‌ಟಿ ತಂಡ ಹಾಗೂ ಸ್ಥಳೀಯರು ಸೇರಿ ಆನೆಯ ಹೆಜ್ಜೆ ಗುರುತುಗಳನ್ನು ಆಧರಿಸಿ ಕಾಣೆಯಾಗಿದ್ದ ಆನೆಯನ್ನು ಪತ್ತೆ ಮಾಡಿದ್ದಾರೆ. 

ಕೇರಳದ ಈ ಆನೆ ಹಿಂದೆಂದೂ ಈ ರೀತಿ ಮಾಡಿಲ್ಲ ಎನ್ನಲಾಗಿದೆ. ಸದ್ಯ ಆನೆಯ ವಯಸ್ಸು 52 ವರ್ಷ. ಈ ಆನೆಯು ಅನೇಕ ಹಬ್ಬಗಳ ಭಾಗವಾಗಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net