'ಮಧ್ಯರಾತ್ರಿ ನನ್ನ ರೂಮ್​ಗೆ....'! ಭಯಾನಕ ಸಂಗತಿ ತೆರೆದಿಟ್ಟ ಬೋಲ್ಡ್​ ಬ್ಯೂಟಿ ಮೌನಿ ರಾಯ್​ | Mouni Roy

ವಿಜಯವಾಣಿ - 2025-04-29T204143.837
Published on

Mouni Roy: ಹಿಂದಿ ಧಾರವಾಣಿಯಲ್ಲಿ ನಾಗಿಣಿ ಪಾತ್ರದಲ್ಲಿ ಸಖತ್ ಮಿಂಚಿದ್ದ ಬಾಲಿವುಡ್​ ಬೋಲ್ಡ್ ಬ್ಯೂಟಿ ನಟಿ ಮೌನಿ ರಾಯ್​ ಇದೀಗ ತಮ್ಮ ಮುಂಬರುವ ಸಿನಿಮಾಗಳ ಚಿತ್ರೀಕರಣದಲ್ಲಿ ಸಖತ್ ಬಿಜಿಯಾಗಿದ್ದಾರೆ. ಸದ್ಯ ಪ್ರಚಾರ ಕಾರ್ಯಗಳಲ್ಲಿ ಭಾಗಿಯಾಗುತ್ತಿರುವ ಮೌನಿ, ತಮಗಾದ ಭಯಾನಕ ಘಟನೆ ಕುರಿತು ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.

ಆರಂಭದಲ್ಲಿ ಹಿಂದಿ ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಮೌನಿ ರಾಯ್, ಇದೀಗ ಸಿನಿಮಾ ಮೂಲಕ ತಮ್ಮ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ. ಇದೇ ಮೇ.1ರಂದು ರಿಲೀಸ್​ಗೆ ಸಜ್ಜಾಗಿರುವ 'ಭೂತ್ನಿ' ಚಿತ್ರದ ಸಂದರ್ಶನದಲ್ಲಿ ಮಾತನಾಡಿದ ಮೌನಿ, "ನನಗೆ ಅಷ್ಟು ಸರಿಯಾಗಿ ನೆನಪಿಲ್ಲ. ಒಮ್ಮೆ ನಾವು ಯಾವುದೋ ಊರಿಗೆ ಹೋಗಿದ್ದೆವು. ಅಲ್ಲಿ ಯಾರೋ ಒಬ್ಬ ವ್ಯಕ್ತಿ ನಾನು ಉಳಿದಿದ್ದ ಹೋಟೆಲ್ ರೂಮ್​ನ ಬೀಗ ಕಳ್ಳತನ ಮಾಡಿದ್ದ. ಅದೇ ದಿನ ಮಧ್ಯರಾತ್ರಿಯಂದು ಕೀಲಿ ಬಳಸಿ ರೂಮ್​ನೊಳಗೆ ಪ್ರವೇಶಿಸಲು ಪ್ರಯತ್ನಿಸುತ್ತಿರುವುದು ನನ್ನ ಗಮನಕ್ಕೆ ಬಂದಿತು. ಕೂಡಲೇ ನಾನು ಚೀರಾಡಿದೆ" ಎಂದರು.

"ಈ ವೇಳೆ ನನ್ನೊಂದಿಗೆ ನಮ್ಮ ಮ್ಯಾನೇಜರ್ ಕೂಡ ಇದ್ದರು. ನನ್ನ ಚೀರಾಟ ಕೇಳಿ ಅವರೂ ಶಾಕ್ ಆಗಿದ್ದರು. ಈ ಘಟನೆಯ ಬಗ್ಗೆ ನಾನು ಹೋಟೆಲ್ ಸಿಬ್ಬಂದಿಯನ್ನು ಪ್ರಶ್ನಿಸಿದಾಗ, ಅವರು ಹೌಸ್‌ಕೀಪಿಂಗ್ ಆಗಿರಬೇಕು ಮೇಡಂ ಎಂದು ಕಾಟಾಚಾರದ ಮಾತನ್ನಾಡಿದರು. ಮಧ್ಯರಾತ್ರಿ 12:30ಕ್ಕೆ ಯಾವ ಹೌಸ್‌ಕೀಪಿಂಗ್ ಬರುತ್ತಾರೇ ಎಂದು ಜೋರಾಗಿ ಕೇಳಿದೆ, ಇದಕ್ಕೆ ಅವರ ಬಳಿ ಉತ್ತರವಿರಲಿಲ್ಲ. ಆ ಘಟನೆ ಮಾತ್ರ ತುಂಬಾ ಭಯಾನಕ ಮತ್ತು ಕೆಟ್ಟ ಅನುಭವವಾಗಿತ್ತು" ಎಂದು ಮೌನಿ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net