ಆಯುರ್ವೇದ ಸಂಶೋಧನೆಗಾಗಿ ಒಪ್ಪಂದ: ಆಯುಷ್​ ಜತೆ ಅಮೈಟಿ..

Photo Ayurveda
Published on

ನವದೆಹಲಿ: ಕರೊನಾ ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಯೋಗ-ಆಯುರ್ವೇದ ಆಧಾರಿತ ಶಿಷ್ಟಾಚಾರವನ್ನೇ ಬಿಡುಗಡೆ ಮಾಡಿದ್ದ ಕೇಂದ್ರ ಸರ್ಕಾರ ಇದೀಗ ಆಯುರ್ವೇದಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ.

ಆಯುಷ್​ ಸಚಿವಾಲಯದಡಿ ಬರುವ ಆಯುಷ್​ ಸಿಸ್ಟಮ್ಸ್​ ಆಫ್​ ಹೆಲ್ತ್​ಕೇರ್​, ಆಲ್ ಇಂಡಿಯಾ ಇನ್​ಸ್ಟಿಟ್ಯೂಟ್​ ಆಫ್​ ಆಯುರ್ವೇದ (ಎಐಐಎ) ಸಂಸ್ಥೆಗಳ ಜತೆ ಅಮೈಟಿ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯನ್ ಸಿಸ್ಟಮ್​ ಆಫ್​ ಮೆಡಿಸಿನ್​ ಒಪ್ಪಂದ ಏರ್ಪಟ್ಟಿದೆ. ಇದು ಅಮೈಟಿ ಯುನಿವರ್ಸಿಟಿ ಅಧೀನದಲ್ಲಿ 2018ರಂದು ಆರಂಭಗೊಂಡಿರುವ ಸಂಸ್ಥೆಯಾಗಿದೆ.

ಆಯುರ್ವೇದ ಔಷಧಗಳು ಗುಣಮಟ್ಟ ಸುಧಾರಿಸುವ ಹಾಗೂ ನ್ಯಾಚುರಲ್​ ಪ್ರಾಡಕ್ಟ್ ಕೆಮಿಸ್ಟ್ರಿ ಹಾಗೂ ಫಾರ್ಮಸಿಯಲ್ಲಿನ ಪಿಎಚ್​ಡಿ ಕಾರ್ಯಕ್ರಮಗಳಲ್ಲಿ ಸಹಯೋಗ ಹೊಂದುವಲ್ಲಿ ಈ ಒಪ್ಪಂದ ಸಹಾಯವಾಗಲಿದೆ. ಫಾರ್ಮಾಸ್ಯೂಟಿಕ್ಸ್​, ಫಾರ್ಮಾಕೋಡೈನಾಮಿಕ್ಸ್​, ಫಾರ್ಮಾಕೋಕೈನೆಟಿಕ್ಸ್​ ಕುರಿತ ಅಧ್ಯಯನ ಹಾಗೂ ಜಂಟಿ ಯೋಜನೆ ಮತ್ತು ಪ್ರಕಾಶನಗಳೂ ಈ ಒಡಂಬಡಿಕೆಯಡಿ ನಡೆಯಲಿವೆ ಎಂದು ಸಚಿವಾಲಯ ತಿಳಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net