10 ರೂ. ಭಿಕ್ಷೆ ಹಾಕಿದ್ದಕ್ಕೆ 1 ವರ್ಷ ಜೈಲು ಶಿಕ್ಷೆ , 5 ಸಾವಿರ ರೂ. ದಂಡ! ಭಿಕ್ಷೆ ಬೇಡೋದು ಒಂದೇ ಅಲ್ಲ, ಕೊಟ್ಟರು ಶಿಕ್ಷೆ.. beggar

Beggar Death
Published on

ಮಧ್ಯಪ್ರದೇಶ:  (  beggar )  ಮಧ್ಯಪ್ರದೇಶದ ಇಂದೋರ್‌ನಲ್ಲಿ ಭಿಕ್ಷುಕನಿಗೆ 10 ರೂ. ನೀಡಿದ ಆರೋಪದ ಮೇಲೆ ವಾಹನ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಮಧ್ಯಪ್ರದೇಶದ ಇಂದೋರ್‌ನಲ್ಲಿ ಆಡಳಿತವು ಭಿಕ್ಷಾಟನೆ ಮತ್ತು ದಾನ ನೀಡುವುದನ್ನು ನಿಷೇಧಿಸಿದೆ ಎನ್ನಲಾಗಿದೆ. ಭಿಕ್ಷಾಟನೆಗೆ ನಿಷೇಧವಿದ್ದರೂ ಭಿಕ್ಷೆ ಬೇಡಿದ ವ್ಯಕ್ತಿಗೆ 10 ರೂಪಾಯಿ ನೀಡಿದ ಮಧ್ಯಪ್ರದೇಶದ ಇಂಧೋರ್‌ನ ಬೈಕ್ ಸವಾರನಿಗೆ 1 ವರ್ಷ ಜೈಲು ಶಿಕ್ಷೆ ಹಾಗೂ 5 ಸಾವಿರ ರೂಪಾಯಿ ದಂಡ ಬೀಳುವ ಭೀತಿ ಎದುರಾಗಿದೆ. 2 ವಾರದಲ್ಲಿ ಇಂದೋರ್​​ನಲ್ಲಿ ದಾಖಲಾದ 2ನೇ ಪ್ರಕರಣ ಇದಾಗಿದೆ.

ಸೋಮವಾರ ಲಸುಡಿಯಾ  ಠಾಣಾ ವ್ಯಾಪ್ತಿಯ ದೇವಾಲಯದ ಬಳಿ ವ್ಯಕ್ತಿಯೊಬ್ಬ ಭಿಕ್ಷೆ ಬೇಡುತ್ತಿದ್ದ. ಆ ವ್ಯಕ್ತಿಗೆ ಅಪರಿಚಿತ ಬೈಕ್‌ ಸವಾರ 10 ರೂಪಾಯಿ ನೀಡಿದ್ದ.ಹೀಗಾಗಿ ಆತನ ವಿರುದ್ಧ  ಬಿಎನ್​ಎಸ್​ ಸೆಕ್ಸನ್ 223 ಅಡಿಯಲ್ಲಿ ಹಣ ನೀಡಿದ ವ್ಯಕ್ತಿ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಆರೋಪ ಸಾಬೀತಾದರೆ 1 ವರ್ಷ ಜೈಲು ಶಿಕ್ಷೆ ಅಥವಾ 5 ಸಾವಿರ ರೂಪಾಯಿವರೆಗೆ ದಂಡ ವಿಧಿಸಬಹುದು. ಅಥವಾ ಎರಡನ್ನೂ ವಿಧಿಸಬಹುದು.

ಜ.23ರಂದು ಇದೇ ರೀತಿ ಘಟನೆ ನಡೆದಿತ್ತು. ಖಾಂಡ್ವಾ ರಸ್ತೆಯ ದೇವಾಲಯದ ಮುಂದೆ ಭಿಕ್ಷುಕನಿಗೆ ಭಿಕ್ಷೆ ನೀಡಿದ ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಭಿಕ್ಷುಕ ನಿರ್ಮೂಲಾ ತಂಡದ ಅಧಿಕಾರಿ ಫೂಲ್ ಸಿಂಗ್ ಅನ್ನೋರು ಕಾರ್ಯಾಚರಣೆ ನಡೆಸ್ತಿದ್ದಾರೆ. ಕಳೆದ 6 ತಿಂಗಳಲ್ಲಿ 600 ಮಂದಿ ಭಿಕ್ಷಕರನ್ನು ಪತ್ತೆ ಮಾಡಿ ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುತ್ತಿದ್ದಾರೆ. ನೂರು ಮಕ್ಕಳನ್ನು ಹುಡುಕಿ, ಅವರನ್ನು ವಿವಿಧ ಸಂಸ್ಥೆಗಳಿಗೆ ಕಳುಹಿಸಿದ್ದಾರೆ. ಟ್ರಾಫಿಕ್ ಸಿಗ್ನಲ್, ದೇವಾಲಯ ಹಾಗೂ ಪ್ರವಾಸಿ ಸ್ಥಳಗಳಲ್ಲಿ ಕಂಡುಬರುವ ಭಿಕ್ಷುಕರನ್ನು ಪತ್ತೆ ಹಚ್ಚುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net