

ಔರಂಗಾಬಾದ್: ತಾಯಿಯೊಬ್ಬಳು ಮೂಢನಂಬಿಕೆಯ ಭಾಗವಾಗಿ ಹೆತ್ತ ಮಗಳನ್ನೇ ಜೀವಂತವಾಗಿ ಸುಡಲು ಯತ್ನಿಸಿದ ಘಟನೆ ಮಹಾರಾಷ್ಟ್ರದ ಔರಂಗಾಬಾದ್ನಲ್ಲಿ ನಡೆದಿದೆ.
ಘಟನೆಯಲ್ಲಿ ಸುಪ್ರಿಯಾ(20) ಎಂಬಾಕೆ ತೀವ್ರವಾಗಿ ಗಾಯಗೊಂಡಿದ್ದು, ಆಕೆಯ ತಾಯಿ ಪಾರ್ವತಿ ದಾದಾಸಾಹೇಬ್ ಹುಲ್ಮುಖ (40) ಮತ್ತು ಯುವತಿಗೆ ಬೆಂಕಿ ಹಚ್ಚುವಂತೆ ಕೇಳಿದ ಶಂಕುತಲಾ ಅಹೆರ್ ವಿರುದ್ಧ ಸಿಡ್ಕೋ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಿಸರವಾಡಿ ಪ್ರದೇಶದಲ್ಲಿ ವಾಸವಾಗಿರುವ ಶಕುಂತಲಾ ಎಂಬಾಕೆ ಮಾಟಮಂತ್ರ ಹೇಳಿ ಹಲವರನ್ನು ವಂಚಿಸುತ್ತಾಳೆ. ಸುಪ್ರಿಯಾಳ ತಾಯಿ ಆಕೆಯನ್ನು ಭೇಟಿ ಮಾಡಿ ವಾಮಾಚಾರ ಮಾಡಿಸುತ್ತಿದ್ದಳು. ಇದೇ ವೇಳೆ, 'ಹುಡುಗಿಯನ್ನು ಜೀವಂತ ಸುಟ್ಟರೆ ಸಂಪತ್ತು ಸಿಗುತ್ತದೆ. ನಿನ್ನ ಮಗನಿಗೂ ಒಳ್ಳೆಯದಾಗುತ್ತೇ ಎಂದು ಆಕೆ ಪಾರ್ವತಿಗೆ ಹೇಳಿದ್ದಳು. ಹೀಗಾಗಿ ವಾಮಾಚಾರದ ಚಟಕ್ಕೆ ಬಿದ್ದಿದ್ದ ಪಾರ್ವತಿ ತನ್ನ ಸ್ವಂತ ಮಗಳನ್ನು ಮಲಗಿದ್ದಾಗ ಪೆಟ್ರೋಲ್ ಸುರಿದು ಜೀವಂತ ಸುಡಲು ಯತ್ನಿಸಿದ್ದಾಳೆ.
ಇದನ್ನೂ ಓದಿ: ತಂದೆಯನ್ನು ಇಟ್ಟಿಗೆಯಿಂದ ಹತ್ಯೆಗೈದು, ಕಿವಿ-ಬೆರಳನ್ನು ತಿಂದ ಮಗ..
ಸುಪ್ರಿಯಾಳ ತಂದೆ ಕೆಲವು ವರ್ಷಗಳ ಹಿಂದೆ ನಿಧನರಾದ ಕಾರಣ, ಆಕೆ ತನ್ನ ತಾಯಿ ಮತ್ತು ಸಹೋದರನೊಂದಿಗೆ ಫುಲೇನಗರದಲ್ಲಿ ವಾಸಿಸುತ್ತಿದ್ದಾರೆ. ವಿದ್ಯಾಭ್ಯಾಸದ ಜೊತೆಗೆ ಖಾಸಗಿ ಕಂಪನಿಯೊಂದರಲ್ಲಿ ಗುತ್ತಿಗೆದಾರಳಾಗಿ ಕೆಲಸ ಮಾಡುತ್ತಿದ್ದು ಈ ಮಧ್ಯೆ ಆಗಸ್ಟ್ 17ರಂದು ಇಡೀ ದಿನ ಕಂಪನಿಯಲ್ಲಿ ಕೆಲಸ ಮಾಡಿ ಮನೆಗೆ ಮರಳಿದ್ದಳು. ಮನೆಗೆ ಬಂದ ನಂತರ ಸುಪ್ರಿಯಾ ಎಂದಿನಂತೆ ರಾತ್ರಿ ಮಲಗಿದ್ದಳು.
ಆದರೆ, ಬೆಳಗಿನ ಜಾವ 4:30ಕ್ಕೆ ಬೆಂಕಿಯ ತಾಪ ಅನುಭವಿಸಿದ ಆಕೆ ಎದ್ದಿದ್ದು ಆಗ ಅವಳ ಹೊದಿಕೆ ಹೊತ್ತಿ ಉರಿಯುತ್ತಿತ್ತು. ಕೂಡಲೇ ಆಕೆಯು ಕಿರುಚಾಡಿದ್ದು ಇದನ್ನು ಕೇಳಿದ ಸಹೋದರ ತಕ್ಷಣ ಆಕೆಯ ಬಳಿಗೆ ಧಾವಿಸಿ ಆಕೆಯನ್ನು ರಕ್ಷಿಸಲು ಪ್ರಯತ್ನಿಸಿದ್ದಾನೆ. ಘಟನೆಯಲ್ಲಿ ಬೆಂಕಿ ತಗುಲಿ ಯುವತಿಯ ಕೂದಲು, ಭುಜ ಹಾಗೂ ದೇಹಕ್ಕೆ ತೀವ್ರ ಗಾಯಗಳಾಗಿದ್ದವು. ಆದರೆ ಆಕೆಯ ತಾಯಿ ಕೋಣೆಯ ಮೂಲೆಯಲ್ಲಿ ನಿಂತು ಇದನ್ನೆಲ್ಲ ನೋಡುತ್ತಿದ್ದಳು.
ಇದನ್ನೂ ಓದಿ: ಪತಿಯನ್ನು ಫಂಕ್ಷನ್ಗೆ ಕಳುಹಿಸಿ, ಆತನ ಗೆಳೆಯನ ಜೊತೆ ಪರಾರಿಯಾದ ಪತ್ನಿ..!
ಏತನ್ಮಧ್ಯೆ, ಆಕೆಯ ತಾಯಿ ಆಕೆಯನ್ನು ಬೆದರಿಸಿ ಮನೆಯೊಳಗೆ ಇಟ್ಟುಕೊಂಡಿದ್ದು ಯುವತಿಯು ಮನೆಯಲ್ಲಿಯೇ ಗಾಯಗಳಿಗೆ ಚಿಕಿತ್ಸೆ ಪಡೆದು ಐದು ದಿನಗಳ ನೋವನ್ನು ಸಹಿಸಿಕೊಂಡು ಸುಮ್ಮನಿದದ್ದಳು. ಆದರೆ, ಮಂಗಳವಾರ ತಾಯಿ ಹೊರಗೆ ಹೋದ ಕೂಡಲೇ ನೇರವಾಗಿ ಸಿಡ್ಕೋ ಠಾಣೆಗೆ ತಲುಪಿ ಪೊಲೀಸರಿಗೆ ನಡೆದ ವಿಷಯವನ್ನು ತಿಳಿಸಿದ್ದು, ಆ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.(ಏಜೆನ್ಸೀಸ್)