ತಾಯಿ ಸಾಂಬಾರು ಚನ್ನಾಗಿ ಮಾಡಿಲ್ಲವೆಂದು ಮಗ ಆತ್ಮಹತ್ಯೆ

Boy Suside+1
Published on

ಹಿರೇಕೆರೂರ: ತಾಯಿ ಸಾಂಬರು ಚನ್ನಾಗಿ ಮಾಡಿಲ್ಲವೆಂದು ಬೇಸರ ಮಾಡಿಕೊಂಡು ವಿಷ ಸೇವಿಸಿ ವಿದ್ಯಾಥಿರ್ಯೊಬ್ಬ ಮೃತಪಟ್ಟ ಘಟನೆ ತಾಲೂಕಿನ ಚಿನ್ನಮುಳಗುಂದ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಸುದೀಪ ಚಂದ್ರಪ್ಪ ರಾಗೇರ (17) ಮೃತ ವಿದ್ಯಾಥಿರ್.

ಈತ ಹಂಸಬಾವಿ ಕಾಲೇಜ್​ವೊಂದರಲ್ಲಿ ಐಟಿಐ ಓದುತ್ತಿದ್ದ. ಹುಟ್ಟಿನಿಂದಲೂ ಕೊಂಚ ಮಾನಸಿಕವಾಗಿದ್ದ ಆಸ್ಪತ್ರೆಗೆ ತೋರಿಸಿ ಔಷಧ ಕೊಡಿಸಲಾಗಿತ್ತು. ಡಿ. 4ರಂದು ಬೆಳಗ್ಗೆ ಮನೆಯಲ್ಲಿ ತಾಯಿ ಸಾಂಬಾರು ಚನ್ನಾಗಿ ಮಾಡಿಲ್ಲ ಎನ್ನುವ ಕಾರಣದಿಂದ ಬೇಸರ ಮಾಡಿಕೊಂಡು ವಿಷ ಸೇವಿಸಿ ಅಸ್ವಸ್ಥಗೊಂಡಿದ್ದಾನೆ. ಕೂಡಲೇ ಆತನನ್ನು ಹುಬ್ಬಳ್ಳಿ ಕಿಮ್ಸ್​ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಹಂಸಬಾವಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net