8ನೇ ತರಗತಿ ವಿದ್ಯಾರ್ಥಿ ಜತೆ ಓಡಿಹೋದ ಮೂರು ಮಕ್ಕಳ ತಾಯಿ! 1 ವರ್ಷದ ರಹಸ್ಯ ಬಿಚ್ಚಿಟ್ಟ ಪಾಲಕರು

UP Woman
Published on

ಗೋರಖ್​ಪುರ್​: ಮೂರು ಮಕ್ಕಳ ತಾಯಿಯೊಬ್ಬಳು 8ನೇ ತರಗತಿ ವಿದ್ಯಾರ್ಥಿ ಜತೆ ಓಡಿ ಹೋಗಿದ್ದಾಳೆನ್ನಲಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಯಾರು ಊಹಿಸಿರದ ಈ ಸುದ್ದಿ ರಾಜ್ಯಾದ್ಯಂತ ಜನರಲ್ಲಿ ಆಘಾತದ ಅಲೆ ಎಬ್ಬಿಸಿದೆ.

ಬಾಲಕನ ಕುಟುಂಬದವರು ಕ್ಯಾಂಪಿಯರ್‌ಗಂಜ್​ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದು, ಎಫ್​ಐಆರ್​ ದಾಖಲಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆದರೆ, ಈವರೆಗೂ ಇಬ್ಬರ ಸುಳಿವು ಪತ್ತೆಯಾಗಿಲ್ಲ.

29 ವರ್ಷದ ವಿವಾಹಿತ ಮಹಿಳೆ ಮತ್ತು 15 ವರ್ಷದ ಬಾಲಕ ಕಳೆದ ಬುಧವಾರ ಶಿವರಾತ್ರಿ ಜಾತ್ರೆಯಂದು ನಾಪತ್ತೆಯಾಗಿದ್ದಾರೆ. ಎರಡು ಕುಟುಂಬದವರು ಎಷ್ಟೇ ಹುಡುಕಾಡಿದರೂ ಗುರುವಾರದವರೆಗೂ ಇಬ್ಬರ ಸುಳಿವು ಪತ್ತೆಯಾಗದಿದ್ದಾಗ ಶುಕ್ರವಾರ ಸಂಜೆ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ.

ಮೂಲಗಳ ಪ್ರಕಾರ ಮಹಿಳೆ ಮತ್ತು ಬಾಲಕ ಕಳೆದ ಒಂದು ವರ್ಷದಿಂದ ಸಂಬಂಧದಲ್ಲಿದ್ದರು ಎಂದು ತಿಳಿದುಬಂದಿದೆ. ಇಬ್ಬರ ನಡುವಿನ ವಯಸ್ಸಿನ ಅಂತರ ತುಂಬಾ ಇದ್ದಿದ್ದರಿಂದ ಯಾರು ಸಹ ಅವರ ಮೇಲೆ ಸಂಶಯ ಹೊಂದಿರಲಿಲ್ಲವಂತೆ. ಇಬ್ಬರು ಒಟ್ಟಿಗೆ ಹೆಚ್ಚು ಸಮಯ ಕಳೆಯುತ್ತಿದ್ದರು ಎಂದು ಪಾಲಕರು ಮಾಹಿತಿ ನೀಡಿದ್ದಾರೆ.

ಭಾರತೀಯ ದಂಡ ಸಂಹಿತೆ (ಐಪಿಸಿ) 363 (ಅಪಹರಣಕ್ಕಾಗಿ ಶಿಕ್ಷೆ) ಮತ್ತು 365 ( ವ್ಯಕ್ತಿಯನ್ನು ಮಿತಿಯಲ್ಲಿಟ್ಟುಕೊಳ್ಳುವ ಉದ್ದೇಶದಿಂದ ರಹಸ್ಯವಾಗಿ ಮತ್ತು ತಪ್ಪಾಗಿ ಅಪಹರಿಸುವುದು) ಸೆಕ್ಷನ್​ ಅಡಿಯಲ್ಲಿ ಬಾಲಕ ಕುಟುಂಬ ಮಹಿಳೆ ವಿರುದ್ಧ ದೂರು ದಾಖಲಿಸಿದೆ.

ಈ ಬಗ್ಗೆ ಮಾತನಾಡಿರುವ ಕ್ಯಾಂಪಿಯರ್‌ಗಂಜ್​ ವೃತ್ತ ನಿರೀಕ್ಷಕ ರಾಹುಲ್​ ಭಟಿ, ಬಾಲಕನ ಕುಟುಂಬ ನೀಡಿದ ದೂರಿನ ಆಧಾರದ ಮೇಲೆ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಾವು ಅವರ ಜಾಡನ್ನು ಪತ್ತೆ ಮಾಡಲು ಪ್ರಯತ್ನಿಸುತ್ತಿದ್ದೇವೆಂದು ಹೇಳಿದ್ದಾರೆ.

ಮಹಿಳೆಗೆ ಈಗಾಗಲೇ ಮದುವೆಯಾಗಿ ಮೂವರು ಪುಟ್ಟ ಮಕ್ಕಳಿದ್ದಾರೆ. ಕೆಲವು ದಿನಗಳಿಂದ ಗಂಡನ ಜತೆಯಲ್ಲಿ ಆಕೆಯ ವರ್ತನೆ ತುಂಬಾ ವಿಚಿತ್ರವಾಗಿತ್ತಂತೆ. ಸ್ವತಃ ಈ ಬಗ್ಗೆ ಮಹಿಳೆಯ ಪತಿ ಹೇಳಿಕೊಂಡಿದ್ದಾನೆ. ಆದರೆ, ಈ ರೀತಿ ಮಾಡುತ್ತಾರೆಂದು ಯೋಚನೆ ಸಹ ಮಾಡಿರಲಿಲ್ಲ ಎಂದು ಮಹಿಳೆ ಪತಿ ಹೇಳಿಕೆ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net