

ಲಖನೌ: ಇಷ್ಟವಿಲ್ಲದಿರುವ ಮದುವೆಯನ್ನು ಮಾಡಿಕೊಳ್ಳಲು ಯಾರು ಒಪ್ಪುವುದಿಲ್ಲ. ಒಂದು ವೇಳೆ ಕುಟುಂಬದವರ ಬಲವಂತಕ್ಕೆ ಒಪ್ಪಿಕೊಂಡು ಮದುವೆಗ ಇನ್ನೇನು ಕೆಲವೇ ದಿನಗಳು ಬಾಕಿ ಇದೆ ಎಂದಾಗ ಓಡಿ ಹೋಗಿರುವುದನ್ನು ನಾವು ನೋಡಿದ್ದೇವೆ ಹಾಗೂ ಕೇಳಿದ್ದೇವೆ. ಆದರೆ, ಉತ್ತರಪ್ರದೇಶದ ಕಾಸ್ಗಂಜ್ನಲ್ಲಿ ವಿಚಿತ್ರ ಘಟನೆ ನಡೆದಿದ್ದು. ವಧುವಿನ ತಾಯಿಯೊಟ್ಟಿಗೆ ವರನ ತಂದೆ ಓಡಿ ಹೋಗಿದ್ದಾರೆ. ಈ ಸುದ್ದಿ ಈಗ ಸಖತ್ ಸೌಂಡ್ ಮಾಡುತ್ತಿದೆ.
ಉತ್ತರಪ್ರದೇಶದ ಕಾಸ್ಗಂಜ್ ನಿವಾಸಿಗಳಾದ ಶಕೀಲ್ ಮತ್ತು ಅಸ್ಮಾ ಖಾತುನ್ ಮಕ್ಕಳ ಮದುವೆ ಸಮೀಪಿಸುತ್ತಿದ್ದಂತೆ ಓಡಿ ಹೋಗಿದ್ದು, ಇದೀಗ ಪೊಲೀಸರು ಈ ಇಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಕಾಸ್ಗಂಜ್ ನಿವಾಸಿಗಳಾದ ಶಕೀಲ್ ಮಗನೊಂದಿಗೆ ಅಸ್ಮಾಳ ಮಗಳಿಗೆ ಮದುವೆ ನಿಶ್ಚಯಿಸಲಾಗಿತ್ತು. ಸ್ಥಳೀಯರು ಹೇಳುವ ಪ್ರಕಾರ ಮದುವೆ ಮಾತುಕತೆಯ ನೆಪದಲ್ಲಿ ಶಕೀಲ್, ಅಸ್ಮಾಳ ಮನೆಗೆ ಹೋಗುತ್ತಿದ್ದ. ಈ ವೇಳೆ ಇಬ್ಬರ ನಡುವೆ ಪ್ರೀತಿಯಾಗಿದೆ. ಈ ವಿಚಾರ ತಿಳಿದರೆ ಸಮಸ್ಯೆಯಾಗುತ್ತದೆಂದು ಭಾವಿಸಿದ ಇವರಿಬ್ಬರು ಮಕ್ಕಳ ಮದುವೆ ಸಮೀಪಿಸುತ್ತಿದ್ದಂತೆ ಓಡಿ ಹೋಗಿದ್ದಾರೆ. ಘಟನೆ ಸಂಬಂಧಿ ಅಸ್ಮಾಳ ಪತಿ ದೂರು ದಾಖಲಿಸಿದ್ದು, ಓಡಿ ಹೋಗಿರುವವರನ್ನು ಹುಡುಕಲು ವಿಶೇಷ ತಂಡ ರಚಿಸಲಾಗಿದೆ.
ವರದಿಗಳ ಪ್ರಕಾರ ಶಕೀಲ್‌ಗೆ 10 ಮತ್ತು ವಧುವಿನ ತಾಯಿಗೆ 6 ಮಕ್ಕಳಿದ್ದಾರೆ. ಆದ್ರೆ ಪ್ರೀತಿಯ ಬಲೆಗೆ ಬಿದ್ದ ಈ ಇಬ್ಬರು ಮಕ್ಕಳ ಜವಬ್ದಾರಿಯನ್ನೂ ಮರೆತು ಇದೀಗ ಮನೆ ಬಿಟ್ಟು ಓಡಿ ಹೋಗುವ ಮೂಲಕ ಸುದ್ದಿಯಾಗಿದ್ದಾರೆ.