ಮರಿಗಳನ್ನು ಹೊತ್ತೊಯ್ದ ತಾಯಿ ಚಿರತೆ ದೃಶ್ಯ ಕ್ಯಾಮರಾದಲ್ಲಿ ಸೆರೆ

17.Pyp. 01.
ಪಿರಿಯಾಪಟ್ಟಣ ತಾಲೂಕಿನ ಲಕ್ಷ್ಮೀಪುರ ತಿಮಕಾಪುರ ದಡ ಗ್ರಾಮದ ಬಳಿಯ ಖಾಸಗಿ ಜಮೀನಿನಲ್ಲಿ ಕಾಣಿಸಿಕೊಂಡಿದ್ದ ಚಿರತೆ ಮರಿಗಳನ್ನು ತಾಯಿ ಚಿರತೆ ರಾತ್ರಿ ವೇಳೆಯಲ್ಲಿ ಹೊತ್ತೊಯ್ಯುತ್ತಿರುವ ದೃಶ್ಯ ಅರಣ್ಯ ಇಲಾಖೆ ಅಳವಡಿಸಿದ್ದ ಕ್ಯಾಮರಾದಲ್ಲಿ ಸೆರೆಯಾಗಿದೆ.
Published on

ಪಿರಿಯಾಪಟ್ಟಣ: ತಾಲೂಕಿನ ಲಕ್ಷ್ಮೀಪುರ ತಿಮಕಾಪುರ ದಡ ಗ್ರಾಮದ ಬಳಿಯ ಖಾಸಗಿ ಜಮೀನಿನಲ್ಲಿ ಗುರುವಾರ ಚಿರತೆ ಮರಿಗಳು ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದ್ದವು.

ಗ್ರಾಮದ ಸುರೇಶ್ ಎಂಬುವರ ಮುಸುಕಿನ ಜೋಳ ಬೆಳೆದಿರುವ ಜಮೀನಿನಲ್ಲಿ ಗುರುವಾರ ಮಧ್ಯಾಹ್ನ 1 ಗಂಟೆ ಸುಮಾರಿನಲ್ಲಿ ತಾಯಿಯಿಂದ ಬೇರ್ಪಟ್ಟಿದ್ದ 3 ಚಿರತೆ ಮರಿಗಳು ಕಾಣಿಸಿಕೊಂಡಿವೆ. ಗ್ರಾಮಸ್ಥರ ಮಾಹಿತಿ ಮೇರೆಗೆ ಆರ್‌ಎಫ್‌ಒ ಪದ್ಮಶ್ರೀ ಅವರು ಸಿಬ್ಬಂದಿಯೊಂದಿಗೆ ಸಂಜೆ ಅಲ್ಲಿಗೆ ಆಗಮಿಸುವಷ್ಟರಲ್ಲಿ ತಾಯಿ ಚಿರತೆ ಒಂದು ಮರಿಯನ್ನು ಅಲ್ಲಿಂದ ಹೊತ್ತೊಯ್ದಿತ್ತು. ಇನ್ನುಳಿದ ಎರಡು ಮರಿಗಳನ್ನು ಸಹ ತಾಯಿ ಚಿರತೆ ರಾತ್ರಿ ಹೊತ್ತೋಯ್ಯಬಹುದು ಎಂಬ ನಿರೀಕ್ಷೆಯೊಂದಿಗೆ ಅರಣ್ಯ ಇಲಾಖೆಯವರು ಸುತ್ತಲೂ ಕ್ಯಾಮರಾ ಅಳವಡಿಸಿ ಗ್ರಾಮಸ್ಥರು ಅಲ್ಲಿಗೆ ಆಗಮಿಸದಂತೆ ಸೂಚನೆ ನೀಡಿದ್ದರು. ಗುರುವಾರ ಸಂಜೆ 7 ಗಂಟೆ ಹಾಗೂ ತಡರಾತ್ರಿ 12.23 ರ ವೇಳೆಯಲ್ಲಿ 2 ಸಲ ಅಲ್ಲಿಗೆ ಬಂದಿರುವ ತಾಯಿ ಚಿರತೆ ಉಳಿದ 2 ಮರಿಗಳನ್ನು ಹೊತ್ತೊಯ್ದಿರುವುದು ಕ್ಯಾಮರಾದಲ್ಲಿ ಸೆರೆಯಾಗಿರುವುದನ್ನು ಆರ್‌ಎಫ್‌ಒ ಪದ್ಮಶ್ರೀ ವಿಜಯವಾಣಿಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net