ಫೋನಿನಲ್ಲಿ ಮಾತಾಡುತ್ತ ಮಗುವನ್ನು ಪಾರ್ಕ್​ನಲ್ಲೇ ಬಿಟ್ಟು ಹೊರಟ ತಾಯಿ; Viral Video ನೋಡಿ ನೆಟ್ಟಿಗರು ಫುಲ್ ಗರಂ

Viral Video
Published on

ನವದೆಹಲಿ: ಇತ್ತೀಚಿನ ವರ್ಷದಲ್ಲಿ ಸ್ಮಾರ್ಟ್​ಫೋನ್​ಗಳು ನಮ್ಮ ಅವಿಭಾಜ್ಯ ಅಂಗವಾಗಿದ್ದು, ದೈನಂದಿನ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸಿವೆ. ಜನರು ಮೊಬೈಲ್​ ಗೀಳಿಗೆ ಮಾರು ಹೋಗಿದ್ದು, ಇದರಿಂದ ಒಂದಿಲ್ಲೊಂದು ಪೇಚಿಗೆ ಸಿಲುಕಿ ಮೈಮೇಲೆ ಅಪಾಯವನ್ನು ತಂದುಕೊಳ್ಳುತ್ತಿದ್ದಾರೆ. ಇದೀಗ ಅಂತಹದ್ದೆ ಘಟನೆಯೊಂದರಲ್ಲಿ ತಾಯಿಯೊಬ್ಬರು ತಮ್ಮ ಮಗುವನ್ನು ಬಿಟ್ಟು ಹೋಗಿರುವ ಘಟನೆ ಬೆಳಕಿಗೆ ಬಂದಿದ್ದು, ಸದ್ಯ ಈ ವಿಡಿಯೋ ವೈರಲ್​ ಆಗಿದೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದ್ದು, ತಾಯಿಯೊಬ್ಬಳು ಫೋನಿನಲ್ಲಿ ಮಾತನಾಡುತ್ತಾ ಮಗುವನ್ನು ಪಾರ್ಕ್‌ನಲ್ಲಿಯೇ ಮರೆತು ಬಿಟ್ಟು ಹೋಗಿದ್ದಾಳೆ. ಇದನ್ನು ಗಮನಿಸಿದ ವ್ಯಕ್ತಿಯೊಬ್ಬರು ಮಗುವನ್ನು ಎತ್ತಿಕೊಂಡು ಓಡೋಡಿ ಬಂದು ತಾಯಿಗೆ ಒಪ್ಪಿಸಿದ್ದಾರೆ. ಈ ವಿಡಿಯೋವನ್ನು ಸ್ಥಳೀಯರೊಬ್ಬರು ಸೆರೆ ಹಿಡಿದಿದ್ದು, ಸದ್ಯ ಈ ವಿಡಿಯೋ ವೈರಲ್ ಆಗಿದೆ.

Ghar Ke Kalesh ಟ್ವಿಟರ್​ ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಈವರೆಗೂ 118.9ಕೆ ವೀವ್ಸ್ ಪಡೆದುಕೊಂಡಿದೆ. ಅನೇಕರು ಮಹಿಳೆಯ ನಡೆಯನ್ನು ಖಂಡಿಸಿದ್ದು, ಈಕೆ ಫೋನಿಗೆ ಅಡಿಕ್ಟ್ ಆಗಿದ್ದಾರೆ ಎಂದು ಕಮೆಂಟ್ ಹಾಕಿದ್ದಾರೆ. ಕೆಲವರು ಇದು ಬೇಕಂತಲೇ ಮಾಡಿರುವ ಸ್ಕ್ರಿಪ್ಟೆಡ್‌ ವಿಡಿಯೋ ಎಂದು ಕಮೆಂಟ್​ ಹಾಕಿದ್ದು, ಯಾವುದು ಸತ್ಯ, ಯಾವುದು ಸುಳ್ಳು ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net