

ಮಗಳು ತನ್ನ ಹಾಡಿನ ವಿಡಿಯೋ ರೆಕಾರ್ಡ್ ಮಾಡುತ್ತಿದ್ದರೆ..ಒಮ್ಮೆಲೇ ಅಮ್ಮ ಸೀಲಿಂಗ್ನಿಂದ ಬಿದ್ದರು..! ಲಿಝಾ ಸಾನ್ ಮಿಲನ್ ಎಂಬುವರು ಈ ಹತ್ತು ಸೆಕೆಂಡ್ಗಳ ವಿಡಿಯೋವನ್ನು ತಮ್ಮ ಟಿಕ್ಟಾಕ್ ಅಕೌಂಟ್ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ವಿಡಿಯೋ ಸಿಕ್ಕಾಪಟೆ ವೈರಲ್ ಕೂಡ ಆಗುತ್ತಿದೆ.
ಲಿಝಾ ಅವರು ತಮ್ಮ ಎದುರು ಮೊಬೈಲ್ ಇಟ್ಟುಕೊಂಡು ಸುಮಧುರ ಕಂಠದಲ್ಲಿ ಹಾಡಲು ಶುರು ಮಾಡುತ್ತಾರೆ. ಕೆಲವೇ ಸೆಕೆಂಡ್ಗಳಲ್ಲಿ ಅವರ ಕೋಣೆಯ ಸೀಲಿಂಗ್ ಡಬ್ ಎಂಬ ದೊಡ್ಡ ಶಬ್ದ ಕೇಳುತ್ತದೆ. ನೋಡಿದರೆ ಲಿಝಾ ಅಮ್ಮ ಸೀಲಿಂಗ್ ಸೀಳಿಕೊಂಡು ಕೆಳಗೆ ಬೀಳುತ್ತಿರುತ್ತಾರೆ. ಅಲ್ಲಿಗೆ ಲಿಝ್ ಹಾಡು ಕೂಡ ಬಂದ್ ಆಗುತ್ತದೆ.
ಸೀಲಿಂಗ್ನಲ್ಲಿ ಒಡೆದು, ತಾಯಿಯ ಕಾಲು ನೇತಾಡುವುದನ್ನು ವಿಡಿಯೋದಲ್ಲಿ ನೋಡಬಹುದು. ಅಲ್ಲಿಗೆ ವಿಡಿಯೋ ಕಟ್ ಆಗುತ್ತದೆ. ಅದನ್ನು ನೋಡಿದ ಲಿಝ್ ಒಹ್ ಮೈ ಗಾಡ್ ಎಂದು ಉದ್ಘಾರ ತೆಗೆಯುವುದನ್ನು ನೋಡಬಹುದು.
ಈ ಬಗ್ಗೆ ಲಿಝಾ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿ, ನಾನು ನನ್ನ ಮುಂದಿನ ಸಂಗೀತ ಕಾರ್ಯಕ್ರಮಕ್ಕಾಗಿ ಅಭ್ಯಾಸ ಮಾಡುತ್ತ, ವಿಡಿಯೋ ರೆಕಾರ್ಡ್ ಮಾಡುತ್ತಿದ್ದೆ. ಆಗ ನನ್ನ ಅಮ್ಮ ಮೇಲಿನ ಅಟ್ಟಕ್ಕೆ ಹೋಗಿದ್ದರು. ಅದ್ಯಾವುದೋ ಲಗ್ಗೇಜ್ ಹುಡುಕಲು ಅಲ್ಲಿ ಹತ್ತಿದ್ದರು. ಆದರೆ ಆಕಸ್ಮಿಕವಾಗಿ ಬಿದ್ದರು. ಅದೃಷ್ಟವಶಾತ್ ತಾಯಿಗೆ ಯಾವುದೇ ಗಾಯವಾಗಲಿಲ್ಲ ಎಂದೂ ತಿಳಿಸಿದ್ದಾರೆ.