

ನವದೆಹಲಿ: ಅಮ್ಮನ ಪ್ರೀತಿ ಎಂದರೆ ಹಾಗೆ ಅದು. ವರ್ಣಿಸಲು ಸಾಧ್ಯವಿಲ್ಲದ್ದು. ಅಮ್ಮನ ಪ್ರೀತಿ ಎಲ್ಲ ಪ್ರಾಣಿಗಳಲ್ಲೂ ಕಾಣಲು ಸಾಧ್ಯ. ಇಂತಹ ಒಂದು ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ವಿಡಿಯೋ ನಿಮಗೂ ಸಂತಸ ತರುವುದು ಗ್ಯಾರಂಟಿ. ಇದನ್ನು ಐಎಫ್ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಹಂಚಿಕೊಂಡಿದ್ದಾರೆ. ಅದರಲ್ಲಿ ಪುಟಾಣಿ ಆನೆ ಎದ್ದು ನಿಲ್ಲಲು ಪ್ರಯತ್ನಿಸುತ್ತಿದೆ. ಅದಕ್ಕೆ ಅಮ್ಮ ಆನೆ ಸಹಾಯ ಮಾಡುತ್ತಿದೆ. ಕಾಲಿನಲ್ಲಿ ತಳ್ಳಿ ಎದ್ದು ನಿಲ್ಲಲು ಪ್ರಯತ್ನಿಸುತ್ತಿರುವ ಮರಿಗೆ ಸೊಂಡಿಲಿನಿಂದ ಎತ್ತಿ ಹಿಡಿದು ನಿಲ್ಲಿಸುತ್ತದೆ.
ಮನಮೋಹಕವಾದ ಈ ವಿಡಿಯೋವನ್ನು ಹಂಚಿಕೊಂಡಿರುವ ಅರಣ್ಯಾಧಿಕಾರಿ ಕಸ್ವಾನ್, ಆ ಪುಟಾಣಿ ಆನೆ ತನ್ನ ಸಣ್ಣ ಕಾಲುಗಳ ಮೇಲೆ ನಿಲ್ಲಲು ತಾಯಿ ಅವನಿಗೆ ಸಹಾಯ ಮಾಡುವ ಸುಂದರ ಕ್ಷಣವಿದು. ಆನೆ ಮರಿ ಜನನವು ಇಡೀ ಗಜರಾಜನ ಕುಟುಂಬಕ್ಕೆ ಪ್ರಮುಖ ಕಾರ್ಯವಾಗಿದೆ ಎಂದು ಬರೆದುಕೊಂಡಿದ್ದಾರೆ.
ಈ ಚೆಂದನೆಯ ವಿಡಿಯೋಗೆ ನೆಟ್ಟಿಗರು ಹರ್ಷ ವ್ಯಕ್ತಪಡಿಸಿದ್ದಾರೆ. ಅದರ ಬಗ್ಗೆ ತಮ್ಮ ಸಂತಸವನ್ನೂ ಹಂಚಿಕೊಂಡಿದ್ದಾರೆ. ಇದು ನನ್ನ ಇಡೀ ದಿನವನ್ನು ಸಂತಸದಲ್ಲಿಟ್ಟಿತು ಎಂದು ಒಬ್ಬರು ಕಮೆಂಟಿಸಿದರೆ, ಇನ್ನೊಬ್ಬರು ಸೋ ಕ್ಯೂಟ್ ಎಂದು ಬರೆದಿದ್ದಾರೆ. ಈ ವಿಡಿಯೋ ನೋಡಿ ನಿಮಗೆ ಏನನ್ನಿಸಿತು?