ತಾಯಿ-ಮಗಳು ಅನುಮಾನಾಸ್ಪದ ಸಾವು; ಬಾವಿಯಲ್ಲಿ ಪತ್ತೆಯಾದವು ಶವಗಳು, ಮಹಿಳೆಯ ಪತಿ ನಾಪತ್ತೆ

Death
Published on

ಕೊಡಗು: ಆಸ್ಸಾಂ ಮೂಲದ ತಾಯಿ-ಮಗಳು ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ವಿರಾಜಪೇಟೆ ತಾಲೂಕಿನ ಕೆ.ಬೈಗೋಡಿನಲ್ಲಿ ನಡೆದಿದೆ.

ಇವರಿಬ್ಬರ ಶವವೂ ಬಾವಿಯಲ್ಲಿ ಪತ್ತೆಯಾಗಿದೆ. ಮಹಿಳೆಯ ಪತಿ ನಾಪತ್ತೆಯಾಗಿದ್ದು ಇನ್ನೂ ಅನುಮಾನವನ್ನು ಹುಟ್ಟುಹಾಕಿದೆ.

ಬೈಗೋಡಿನ ದೇವಯ್ಯ ಎಂಬುವರ ತೋಟದಲ್ಲಿ ತಾಯಿ-ಮಗಳು ಕೆಲಸ ಮಾಡುತ್ತಿದ್ದರು. ವಾರದ ಹಿಂದಷ್ಟೇ ಕೆಲಸಕ್ಕೆ ಸೇರಿದ್ದರು. ಸದ್ಯ ಮಡಿಕೇರಿ ಜಿಲ್ಲಾಸ್ಪತ್ರೆಗೆ ಶವಗಳನ್ನು ಸಾಗಿಸಲಾಗಿದೆ. ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net