

ನವದೆಹಲಿ: ಇತ್ತೀಚೆಗೆ ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ವ್ಯಾಪಾರ ವಹಿವಾಟು ಕ್ಷೇತ್ರದಲ್ಲಿ ವಿವಿಧ ನಿಯಮಗಳು ಜಾರಿಗೆ ಬಂದಿವೆ. ಡ್ರೈವ್ ಥ್ರೂ ಗ್ರಾಹಕರಿಗೆ ಮಾತ್ರ ಸೇವೆ ನೀಡುವುದಾಗಿ ಮೆಕ್ಡೊನಾಲ್ಡ್ ಬೆಲ್ಜಿಯಂನಲ್ಲಿ ಘೊಷಿಸಿತ್ತು. ಆದರೆ ಕಾರು ಇಲ್ಲದವರು ಮೆಕ್ಡೊನಾಲ್ಡ್ ಸೇವೆ ಪಡೆಯುವುದು ಹೇಗೆ?
ಈ ಬಗ್ಗೆ ಯೋಚಿಸಿದ ಕಾರು ಹೊಂದಿಲ್ಲದ ಅಮ್ಮ -ಮಗಳು ಕಾರ್ಡ್ಬೋರ್ಡ್ನ ಕಾರನ್ನು ತಯಾರಿಸಿಕೊಂಡು ರಸ್ತೆಗಿಳಿದು ಆಶ್ಚರ್ಯ ಹುಟ್ಟಿಸಿದ್ದಾರೆ. ‘ನನ್ನ ಮಗಳು ಮೆಕ್ಡೊನಾಲ್ಡ್ಗೆ ಹೋಗಲು ಬಯಸಿದ್ದಳು. ಆದರೆ ನಮ್ಮಲ್ಲಿ ಕಾರು ಇಲ್ಲ, ಬೇರೆಯವರ ಕಾರಿನಲ್ಲಿ ಹೋಗಲು ಸಾಧ್ಯವಿರಲಿಲ್ಲ. ಹೀಗಾಗಿ ನಾವು ರಟ್ಟಿನಿಂದ ಮಾಡಿದ ಕಾರಿನಲ್ಲಿ ಹೋಗಬೇಕಾಯಿತು’ ಎಂದು ತಾಯಿ ಹೇಳಿಕೊಂಡಿದ್ದಾರೆ.
‘ಆರಂಭದಲ್ಲಿ ನನ್ನ ಮಗಳು ಈ ಆಲೋಚನೆಯ ಬಗ್ಗೆ ಹಾಸ್ಯ ಮಾಡಿದಳು, ನಂತರ ಸಹಾಯ ಮಾಡತೊಡಗಿದಳು’ ಎಂದಿದ್ದಾರೆ. ಅವರು ರಟ್ಟಿನ ಕಾರಿನಲ್ಲಿರುವ ಫೋಟೋ ಜಾಲತಾಣಗಳಲ್ಲಿ ವೈರಲ್ ಆಗಿದೆ.