ಮಣಿಪುರದಲ್ಲಿ ಭೂ ಕುಸಿತ: ಇಬ್ಬರ ಸಾವು

manipura
Published on

ಗುವಾಹಟಿ: ಮಣಿಪುರದ ತಮೆಂಗ್​ಲಾಂಗ್ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಭೂ ಕುಸಿತು ಸಂಭವಿಸಿದ್ದು, ತಾಯಿ-ಮಗ ಸಾವನ್ನಪ್ಪಿದ್ದು, ಓರ್ವ ವ್ಯಕ್ತಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಭೂ ಕುಸಿತದಿಂದಾಗಿ ಹಲವು ರಸ್ತೆಗಳಿಗೆ ಹಾನಿಯಾಗಿದೆ. ಈ ಜಿಲ್ಲೆಗಳಲ್ಲಿ ಎರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ.

ಭೂ ಕುಸಿತದಿಂದ ಪೊಲೀಸ್​ ಕಾನ್​ಸ್ಟೇಬಲ್​ವೊಬ್ಬರ ಮನೆಗೆ ಹಾನಿಯಾಗಿದ್ದು, ಈ ಘಟನೆಯಲ್ಲಿ ಅವಶೇಷಗಳಡಿಯಲ್ಲಿ ಕಾನ್​ಸ್ಟೇಬಲ್​ ಸಿಲುಕಿಕೊಂಡಿದ್ದಾರೆ. ಆದರೆ ಅವರ ಎರಡು ವರ್ಷದ ಮಗು ಹಾಗೂ ಪತ್ನಿ ಸಾವನ್ನಪ್ಪಿದ್ದಾರೆ.

ಗಾಯಗೊಂಡ ರಿಂಗ್‌ಸಿನ್‌ಲುಂಗ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಇಂಫಾಲ್‌ಗೆ ಕರೆದೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ದುರಂತ ಘಟನೆಗೆ ಸಂತಾಪ ಸೂಚಿಸಿದ್ದಾರೆ. “ತಮೆಂಗ್‌ಲಾಂಗ್ ವಾರ್ಡ್ ನಂ. 3, ಡಿಮ್‌ಥಾನ್‌ಲಾಂಗ್ ಗ್ರಾಮದಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಭೂಕುಸಿತದಿಂದಾಗಿ ತಾಯಿ-ಮಗು ಸಾವಿನ ಸುದ್ದಿ ತಿಳಿದು ತೀವ್ರ ದುಃಖವಾಗಿದೆ. ಈ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಪೊಲೀಸ್ ಕಾನ್​ಸ್ಟೇಬಲ್​ ಅವರಿಗೆ ಅಗತ್ಯ ವೈದ್ಯಕೀಯ ಸೇವೆ ನೀಡಲು ಕ್ರಮಕೈಗೊಳ್ಳಲಾಗಿದೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಶಾಸಕ ದಿಂಗಂಗ್‌ಲಂಗ್ ಗ್ಯಾಂಗ್‌ಮೇ ಕೂಡ ತಮ್ಮ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಸಂತಾಪ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net