ನಗರ ಪ್ರದೇಶಲ್ಲೇ ಹೆಚ್ಚು ಗಾಂಜಾ ಪ್ರಕರಣ

atnc
ನಶಾ ಮುಕ್ತ ಭಾರತ ಅಭಿಯಾನವನ್ನು ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್ ಉದ್ಘಾಟಿಸಿದರು. ಪ್ರೊ. ಎನ್.ಕೆ.ಹರಿಯಪ್ಪ, ಎಸ್.ಎನ್.ನಾಗರಾಜ, ಪ್ರೊ. ಪಿ.ಆರ್.ಮಮತಾ, ಡಾ. ಶುಭಾ ಮರವಂತೆ ಇತರರಿದ್ದರು.
Published on

ಶಿವಮೊಗ್ಗ: ಯುವ ಸಮೂಹ ಮಾದಕ ವ್ಯಸನಕ್ಕೆ ದಾಸರಾಗದೆ ವ್ಯಸನ ಮುಕ್ತ ಸುಸ್ಥಿರ ದೇಶ ನಿರ್ಮಾಣ ಮಾಡಲು ಕಂಕಣಬದ್ಧರಾಗಬೇಕು ಎಂದು ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್ ಹೇಳಿದರು.

ಬುಧವಾರ ಎಟಿಎನ್‌ಸಿ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯುವ ದಿನ ಅಂಗವಾಗಿ ಏರ್ಪಡಿಸಿದ್ದ ನಶಾ ಮುಕ್ತ ಭಾರತ ಅಭಿಯಾನ ಉದ್ಘಾಟಿಸಿ ಮಾತನಾಡಿ, 2024ರಲ್ಲಿ ಜಿಲ್ಲೆಯಲ್ಲಿ 300ಕ್ಕೂ ಹೆಚ್ಚು ಗಾಂಜಾ ಪ್ರಕರಣಗಳು ದಾಖಲಾಗಿವೆ. ನಗರ ಪ್ರದೇಶಗಲ್ಲೇ ಹೆಚ್ಚು ಪ್ರಕರಣಗಳು ಕಂಡು ಬಂದಿವೆ ಎಂದು ತಿಳಿಸಿದರು.

ವಯೋಸಹಜ ವ್ಯಾಮೋಹಗಳಿಂದ ಶುರುವಾಗುವ ಕೆಲ ದುಶ್ಚಟಗಳು, ಹಂತ ಹಂತವಾಗಿ ದೇಹವನ್ನು ಆಕ್ರಮಿಸಿಕೊಳ್ಳುತ್ತದೆ. ಇದರಿಂದ ಸಮಾಜದಲ್ಲಿ ಗೌರವ ಇಲ್ಲದವರಾಗಿ ಬದುಕಬೇಕಾಗುತ್ತದೆ. ಪೊಲೀಸ್ ಇಲಾಖೆ ಒಂದೇ ಎಲ್ಲವನ್ನು ಸರಿ ಪಡಿಸುತ್ತದೆ ಎಂಬ ಯೋಚನೆಗಿಂತ ಸಮಾಜದ ಪ್ರಜೆಗಳಾಗಿ ಸುಸ್ಥಿರ ವಾತಾವರಣ ನಿರ್ಮಾಣ ಮಾಡಲು ಕೊಡುಗೆ ನೀಡಬೇಕು ಎಂದರು.

ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಪ್ರಸ್ತುತ ವಿಪರೀತ ಕಾಡುತ್ತಿರುವ ಸಮಸ್ಯೆ ಮಾದಕ ದ್ರವ್ಯ ಸೇವನೆ. ಮಾದಕ ದ್ರವ್ಯವು ದೇಹದ ಪ್ರಕೃತಿಯಲ್ಲಿ ಅಸಹಜ ಬೆಳವಣಿಗೆಗೆ ಕಾರಣವಾಗಿ ಸಮತೋಲನ ತಪ್ಪಲು ಕಾರಣವಾಗುತ್ತದೆ. ಒಮ್ಮೆ ಶುರುವಾದ ವ್ಯಸನದಿಂದ ಹೊರಬರುವ ದಾರಿಯೇ ಕಾಣದಾಗುತ್ತದೆ. ಮನಸ್ಸಿನ ಭಾವನೆಗಳ ನಿಯಂತ್ರಣ ಮತ್ತು ಜಾಗೃತಿ ಇದಕ್ಕಿರುವ ಔಷಧ ಎಂದು ತಿಳಿಸಿದರು.

ಎನ್‌ಇಎಸ್ ಕುಲಸಚಿವ ಪ್ರೊ. ಎನ್.ಕೆ.ಹರಿಯಪ್ಪ, ಪ್ರಾಚಾರ್ಯೆ ಪ್ರೊ. ಪಿ.ಆರ್.ಮಮತಾ, ಕುವೆಂಪು ವಿವಿ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ. ಶುಭಾ ಮರವಂತೆ, ಪ್ರಮುಖರಾದ ಚಂದನ್ ಪಟೇಲ್, ಎನ್.ಮಂಜುನಾಥ್, ಬಿ.ಎನ್.ಪ್ರವೀಣ್, ಟಿ.ಗಾಯತ್ರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net