ರಿಲೀಸ್ ಆಯ್ತು 'ಟೋಬಿ' ಟ್ರೇಲರ್​; ರಾಜ್​ ಬಿ.ಶೆಟ್ಟಿ ನಟನೆಗೆ ಫ್ಯಾನ್ಸ್​ ಫಿದಾ!

Untitled design - 2023-08-04T163700.377
Published on

ಬೆಂಗಳೂರು: ಸ್ಯಾಂಡಲ್​ವುಡ್​ನ ಪ್ರತಿಭಾವಂತ ನಟ, ನಿರ್ದೇಶಕ, ಬರಹಗಾರ ರಾಜ್​ ಬಿ.ಶೆಟ್ಟಿ ನಟನೆಯ ಬಹುನಿರೀಕ್ಷಿತ 'ಟೋಬಿ' ಚಿತ್ರದ ಟ್ರೇಲರ್​ ಇದೀಗ ಯೂಟ್ಯೂಬ್​ನಲ್ಲಿ ಅಧಿಕೃತವಾಗಿ ಬಿಡುಗಡೆಗೊಂಡಿದೆ.

'ಟೋಬಿ' ಚಿತ್ರದ ಬಗ್ಗೆ ಬಹಳ ಕಾತರದಿಂದ ಕಾಯುತ್ತಿದ್ದ ಸಿನಿಪ್ರೇಕ್ಷಕರಿಗೆ ಮತ್ತು ರಾಜ್ ಬಿ.ಶೆಟ್ಟಿ ಅಭಿಮಾನಿಗಳಿಗೆ ಇದೀಗ ಸಂತಸ ಮೂಡಿದ್ದು, ಸಿನಿಮಾದ ಟ್ರೇಲರ್​ ನೋಡಿ ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕೇವಲ ಪೋಸ್ಟರ್​ ಮೂಲಕವೇ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಟೋಬಿ, ಸಿನಿಮಾದಲ್ಲಿ ರಾಜ್​ ಅವರ ಪಾತ್ರ ಹೇಗಿರಲಿದೆ ಎಂಬುದರ ಝಲಕ್ ಅನ್ನು ಚಿತ್ರತಂಡ ಟ್ರೇಲರ್​ನಲ್ಲಿ ಬಹಿರಂಗಪಡಿಸಿದೆ.

ಒಟ್ಟಾರೆ ಚಿತ್ರದ ಟ್ರೇಲರ್​ ರಾಜ್​ ಬಿ.ಶೆಟ್ಟಿಯ ಪಾತ್ರದ ಬಗ್ಗೆ ಮತ್ತಷ್ಟು ನಿರೀಕ್ಷೆ, ಕುತೂಹಲವನ್ನು ಹೆಚ್ಚಿಸಿದ್ದು, ಇದೀಗ ಆಗಸ್ಟ್​ 23 ರಂದು ಚಿತ್ರದ ಬಿಡುಗಡೆಯತ್ತ ಸಿನಿಪ್ರೇಕ್ಷಕರ ಚಿತ್ತ ಮೂಡಿದೆ. ಬಿಡುಗಡೆಗೊಂಡ ಕೆಲವೇ ನಿಮಿಷಗಳಲ್ಲಿ ಟ್ರೇಲರ್​ ಉತ್ತಮ ಪ್ರತಿಕ್ರಿಯೆ ಜತೆಗೆ ಅಧಿಕ ವೀಕ್ಷಣೆಯನ್ನು ಪಡೆದುಕೊಳ್ಳುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net