ರಾಜ್ಯಗಳಲ್ಲಿ ಅರ್ಧಕ್ಕಿಂತ ಹೆಚ್ಚು ಮತದಾರರು ಯಾವುದೇ ದಾಖಲೆಗಳನ್ನು ನೀಡಬೇಕಾಗಿಲ್ಲ; ಚುನಾವಣಾ ಆಯೋಗ| Election Commission

Election Commission
Published on

ನವದೆಹಲಿ: ಹೆಚ್ಚಿನ ರಾಜ್ಯಗಳಲ್ಲಿ ಅರ್ಧಕ್ಕಿಂತ ಹೆಚ್ಚು ಮತದಾರರು ಮುಂಬರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಸಮಯದಲ್ಲಿ ಹೆಚ್ಚುವರಿ ದಾಖಲೆಗಳನ್ನು ಒದಗಿಸುವ ಅಗತ್ಯವಿಲ್ಲ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚಿನ ರಾಜ್ಯಗಳು 2002 ಮತ್ತು 2004 ರ ನಡುವೆ ಮತದಾರರ ಪಟ್ಟಿಯ ಕೊನೆಯ ವಿಶೇಷ ತೀವ್ರ ಪರಿಷ್ಕರಣೆಯನ್ನು ಹೊಂದಿದ್ದವು. ಆ ವರ್ಷವನ್ನು ಮುಂದಿನ SIR ಗಾಗಿ ಅವರ ಕಟ್ಆಫ್ ದಿನಾಂಕವೆಂದು ಪರಿಗಣಿಸಲಾಗುತ್ತದೆ. ವಿಶೇಷ ತೀವ್ರ ಪರಿಷ್ಕರಣೆಯನ್ನು ಜಾರಿಗೆ ತರುವ ದಿನಾಂಕವನ್ನು ಚುನಾವಣಾ ಆಯೋಗ ಶೀಘ್ರದಲ್ಲೇ ನಿರ್ಧರಿಸುತ್ತದೆ ಮತ್ತು ರಾಜ್ಯಗಳಾದ್ಯಂತ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡುವ ಕೆಲಸವು ವರ್ಷಾಂತ್ಯದ ಮೊದಲು ನಡೆಯಬಹುದು ಎಂದು ಅಧಿಕಾರಿಗಳು ಈ ಹಿಂದೆ ಮಾಹಿತಿ ನೀಡಿದ್ದರು.

ಮತದಾರರು ಈಗಾಗಲೇ ತಮ್ಮ ರಾಜ್ಯದ ಹಿಂದಿನ SIR ನಿಂದ ಪಟ್ಟಿಮಾಡಲ್ಪಟ್ಟಿದ್ದಾರೆ. ಹಾಗಾಗಿ ಮುಂದಿನ ಪರಿಷ್ಕರಣೆಯಲ್ಲಿ ದಾಖಲೆ ಮುಕ್ತ ಸೇರ್ಪಡೆಗಾಗಿ ಈ ಅವಧಿಯನ್ನು ಈಗ ಕಟ್ಆಫ್ ಎಂದು ನಿಗದಿಪಡಿಸಲಾಗಿದೆ. ತಮ್ಮ ರಾಜ್ಯಗಳಲ್ಲಿ ನಡೆದ ಕೊನೆಯ ವಿಶೇಷ ತೀವ್ರ ಪರಿಷ್ಕರಣೆ (SIR) ಯ ಮತದಾರರ ಪಟ್ಟಿಯಲ್ಲಿ ಅವರ ದಾಖಲೆಗಳನ್ನು ಸೇರಿಸಲ್ಪಟ್ಟಿರುವುದರಿಂದ ಅವರು ಯಾವುದೇ ದಾಖಲೆಯನ್ನು ನೀಡುವ ಅವಶ್ಯಕತೆ ಇಲ್ಲ ಎನ್ನಲಾಗಿದೆ.

ಹಿಂದಿನ SIR ನಂತರ ಪ್ರಕಟವಾದ ತಮ್ಮ-ತಮ್ಮ ರಾಜ್ಯಗಳ ಮತದಾರರ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಲು ಮುಖ್ಯ ಚುನಾವಣಾ ಅಧಿಕಾರಿಗಳಿಗೆ ತಿಳಿಸಲಾಗಿದೆ. ಕೆಲವು ರಾಜ್ಯಗಳ CEOಗಳು ಈಗಾಗಲೇ ತಮ್ಮ ಕೊನೆಯ SIR ನಂತರ ಪ್ರಕಟವಾದ ಮತದಾರರ ಪಟ್ಟಿಯನ್ನು ತಮ್ಮ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಿದ್ದಾರೆ. ರಾಷ್ಟ್ರ ರಾಜಧಾನಿಯ ಸಿಇಒ ಅವರ ವೆಬ್‌ಸೈಟ್‌ನಲ್ಲಿ ದೆಹಲಿಯಲ್ಲಿ ಕೊನೆಯ ಬಾರಿಗೆ ತೀವ್ರ ಪರಿಷ್ಕರಣೆ ನಡೆದ 2008 ರ ಮತದಾರರ ಪಟ್ಟಿ ಇದೆ. ಕೊನೆಯದಾಗಿ 2006 ರಲ್ಲಿ ಉತ್ತರಾಖಂಡದಲ್ಲಿ ನಡೆದಿದ್ದ ಎಸ್‌ಐಆರ್ ಮತದಾರರ ಪಟ್ಟಿ ಇದೀಗ ರಾಜ್ಯ ಸಿಇಒ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net