ಹೆಚ್ಚಾದ ಕರೊನಾತಂಕ: ರಾಜ್ಯದಲ್ಲಿ ಇಂದಿನ ಕೋವಿಡ್ ಪ್ರಕರಣಗಳ ಸಂಖ್ಯೆ 50 ಸಾವಿರಕ್ಕೂ ಅಧಿಕ...

15_01_2022-coronaindoremp a
Published on

ಬೆಂಗಳೂರು: ಮೂರೂವರೆ ತಿಂಗಳ ಬಳಿಕ ಅಂದರೆ ಈ ವರ್ಷದ ಮೊದಲ ದಿನ ಮತ್ತೆ ಒಂದು ಸಾವಿರವನ್ನು ದಾಟಿದ್ದ ಕರೊನಾ ದೈನಿಕ ಪ್ರಕರಣಗಳ ಸಂಖ್ಯೆ ಇಂದು ಅರ್ಧ ಲಕ್ಷವನ್ನು ದಾಟಿದೆ.

ರಾಜ್ಯದಲ್ಲಿ ಇಂದು ದಾಖಲಾದ ದೈನಂದಿನ ಕರೊನಾ ಪ್ರಕರಣಗಳ ಸಂಖ್ಯೆ ಬರೋಬ್ಬರಿ ಅರ್ಧ ಲಕ್ಷ. ಆ ಪೈಕಿ ರಾಜಧಾನಿ ಬೆಂಗಳೂರಿನಲ್ಲೇ ಅರ್ಧಕ್ಕರ್ಧದಷ್ಟು ಪ್ರಕರಣಗಳು ವರದಿಯಾಗಿವೆ.

ಅಂದರೆ ರಾಜ್ಯದಲ್ಲಿ ಇಂದು ಹೊಸದಾಗಿ 50,210 ಮಂದಿಯಲ್ಲಿ ಕರೊನಾ ಸೋಂಕು ದೃಢಪಟ್ಟಿದ್ದರೆ, ಆ ಪೈಕಿ ಬೆಂಗಳೂರಿನಲ್ಲೇ 26,299 ಪ್ರಕರಣಗಳು ದಾಖಲಾಗಿವೆ.

ಮತ್ತೊಂದೆಡೆ ಸೋಂಕಿನ ಪ್ರಮಾಣ ಕೂಡ ಹೆಚ್ಚಳಗೊಂಡಿದೆ. ನಿನ್ನೆ ಶೇ. 19.33 ಇದ್ದ ಪಾಸಿಟಿವಿಟಿ ದರ ಇಂದು ಶೇ. 22.77ಕ್ಕೆ ತಲುಪಿದೆ. ಈ ಮೂಲಕ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 3,57,796ಕ್ಕೆ ಏರಿದ್ದು, ಅದರಲ್ಲಿ ಬೆಂಗಳೂರಿನಲ್ಲಿನ ಪ್ರಕರಣಗಳ ಸಂಖ್ಯೆ 2.31 ಲಕ್ಷ. ಅಲ್ಲದೆ ಇಂದು ರಾಜ್ಯದಲ್ಲಿ ಬೆಂಗಳೂರಿನ 8 ಸೇರಿ ಒಟ್ಟು 19 ಮಂದಿ ಕರೊನಾಗೆ ಬಲಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net