ರಾಜ್ಯದಲ್ಲಿ ಇಂದು 2 ಸಾವಿರಕ್ಕೂ ಅಧಿಕ ಕರೊನಾ ಕೇಸ್​ಗಳು; ಬೆಂಗಳೂರಿನಲ್ಲಿಯೇ ಭರ್ಜರಿ ಸೋಂಕಿತರು

Covid-19 29 may 20
Published on

ಬೆಂಗಳೂರು: ರಾಜ್ಯದಲ್ಲಿ ನಿನ್ನೆ ಸಂಜೆಯಿಂದ ಇವತ್ತು ಸಂಜೆ 5 ಗಂಟೆಯವರೆಗೆ ಒಟ್ಟು 2228 ಹೊಸ ಕರೊನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. 24 ಗಂಟೆಯಲ್ಲಿ ಕರೊನಾದಿಂದ ಮುಕ್ತರಾಗಿ ಡಿಸ್​ಚಾರ್ಜ್​ ಆದವರ ಸಂಖ್ಯೆ 957 ಆಗಿದ್ದು, ಮೃತಪಟ್ಟವರು 17 ಮಂದಿ.

ರಾಜ್ಯದಲ್ಲಿ ಒಟ್ಟು ಕರೊನಾ ಸೋಂಕಿತರ ಸಂಖ್ಯೆ 31,105ಕ್ಕೆ ಏರಿದ್ದು, ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆದವರು ಒಟ್ಟು 12,833 ಮಂದಿ. ಹಾಗೇ ಮೃತರ ಸಂಖ್ಯೆ 486ಕ್ಕೆ ಏರಿಕೆಯಾಗಿದೆ. ಕರೊನಾ ಸಕ್ರಿಯ ಪ್ರಕರಣಗಳು 17,782 ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಇದನ್ನೂ ಓದಿ:  ‘ವಿಕಾಸ್​ ದುಬೆ ಇದ್ದಿದ್ದು ಬಿಜೆಪಿಯಲ್ಲಲ್ಲ..ಅವನಿದ್ದಿದ್ದು.. ‘ ತಾಯಿ ಸರಳಾದೇವಿ ಬಾಯಿಬಿಟ್ಟ ಶಾಕಿಂಗ್​ ಸತ್ಯ ಇದು…

ಇಂದೂ ಕೂಡ ಬೆಂಗಳೂರಿನಲ್ಲೇ ಅಧಿಕ ಸೋಂಕಿತರು ಪತ್ತೆಯಾಗಿದ್ದಾರೆ. ಬರೋಬ್ಬರಿ 1373 ಮಂದಿಯಲ್ಲಿ ಕರೊನಾ ದೃಢಪಟ್ಟಿದೆ.

ಇನ್ನು ದಕ್ಷಿಣ ಕನ್ನಡ-167, ಕಲಬುರಗಿ-85, ಧಾರವಾಡ-75, ಮೈಸೂರು-52, ಬಳ್ಳಾರಿ 41, ದಾವಣಗೆರೆ-40, ಶಿವಮೊಗ್ಗ-37, ಬಾಗಲಕೋಟೆ-36, ಕೋಲಾರ-34, ಚಿಕ್ಕಬಳ್ಳಾಪುರ-32, ತುಮಕೂರು-27, ಮಂಡ್ಯ-24, ಉತ್ತರ ಕನ್ನಡ-23, ಉಡುಪಿ-22, ಹಾಸನ-21, ಹಾವೇರಿ-18, ರಾಮನಗರ-17, ಯಾದಗಿರಿ-16, ರಾಯಚೂರು-16, ಬೆಂಗಳೂರು ಗ್ರಾಮಾಂತರ-16, ಬೀದರ್​-15, ಚಾಮರಾಜನಗರ-12, ಬೆಳಗಾವಿ-9, ಗದಗ-6, ಚಿಕ್ಕಮಗಳೂರು-5, ಕೊಡಗು-4, ಕೊಪ್ಪಳ-2, ಚಿತ್ರದುರ್ಗ-2, ವಿಜಯಪುರದಲ್ಲಿ ಒಬ್ಬರಲ್ಲಿ ಕರೊನಾ ಸೋಂಕು ದೃಢಪಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net